IND vs WI, 2023 : ಭಾರತೀಯ ಕ್ರಿಕೆಟ್ ತಂಡವು ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ನಾಳೆಯಿಂದ ಭಾರತ ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ODI ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದ್ದು, 5 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯು ಆಗಸ್ಟ್ 3 ರಿಂದ ನಡೆಯಲಿದೆ. ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬಿಸಿಸಿಐನ ಆಯ್ಕೆ ಸಮಿತಿ ಮ್ಯಾಚ್ ವಿನ್ನರ್ ಆಟಗಾರನನ್ನೇ ಕೈ ಬಿಟ್ಟಿದೆ.  ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಈ ಆಟಗಾರನನ್ನು ಆಯ್ಕೆ ಮಾಡಡಿರುವ ನಿರ್ಧಾರದಿಂದ ಟೀಂ ಇಂಡಿಯಾ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಮಾಡಿದ ತಪ್ಪು :  
ಒಂದು ವೇಳೆ ಈ ಆಟಗಾರನನ್ನು ಸರಣಿಗೆ ಆಯ್ಕೆ ಮಾಡಿದಿದ್ದರೆ ವೆಸ್ಟ್ ಇಂಡೀಸ್‌ನಲ್ಲಿ, ಈ ಆಟಗಾರ ನಾಯಕ ರೋಹಿತ್ ಶರ್ಮಾ ಅವರ ಮಾರಕ ಅಸ್ತ್ರ ಎಂದು ಸಾಬೀತಾಗುತ್ತಿದ್ದರು. ಆದರೆ ಬಿಸಿಸಿಐನ ಆಯ್ಕೆ ಸಮಿತಿಯು  ಈ ಆಟಗಾರನ್ನು ಆಯ್ಕೆ ಮಾಡಲಿಲ್ಲ. ರೋಹಿತ್ ಶರ್ಮಾ ತನ್ನ ನಾಯಕತ್ವದಲ್ಲಿ ಈ ಅಪಾಯಕಾರಿ ಕ್ರಿಕೆಟಿಗನಿಗೆ ಮೊದಲ ಬಾರಿಗೆ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶವನ್ನು ನೀಡಬಹುದಿತ್ತು. ಹೌದು, ವೆಸ್ಟ್ ಇಂಡೀಸ್‌ನ ಈ ಪ್ರವಾಸದಲ್ಲಿ  ಫಾಸ್ಟ್ ಬೌಲರ್ ದೀಪಕ್ ಚಹಾರ್‌ಗೆ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದಿದ್ದರೆ, ಅವರು  ಟೀಮ್ ಇಂಡಿಯಾದ ಪರವಾಗಿ ಮ್ಯಾಚ್ ವಿನ್ನರ್  ಆಗಿ ಹೊರಹೊಮ್ಮುವ ಸಾಧ್ಯತೆ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 


ಇದನ್ನೂ ಓದಿ : ತ್ರಿಶತಕ ಸಿಡಿಸಿದರೂ… ಬೊಜ್ಜು ಹೆಚ್ಚಾಗಿದೆ ಅಂತಾ ಈ ಆಟಗಾರನ ಭವಿಷ್ಯವನ್ನೇ ಕಿವುಚಿದ ಆಯ್ಕೆ ಸಮಿತಿ!


ಈ ಆಟಗಾರನನ್ನು ಕೈ ಬಿಟ್ಟಿರುವುದು ಭಾರತಕ್ಕೆ ದೊಡ್ಡ ಲಾಸ್ :
ವೆಸ್ಟ್ ಇಂಡೀಸ್ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಹೆಚ್ಚು  ಅನುಕೂಲಕರವಾಗಿರುತ್ತವೆ. ಹೀಗಿರುವಾಗ ಫಾಸ್ಟ್ ಬೌಲರ್ ದೀಪಕ್ ಚಹಾರ್  ವಿಂಡೀಸ್ ಪಾಲಿಗೆ ಮಾರಕಾವಾಗಿ ಪರಿಣಮಿಸುತ್ತಿದ್ದರು. ದೀಪಕ್ ಚಹಾರ್ ಆರಂಭಿಕ ಓವರ್‌ಗಳಲ್ಲಿ ತಮ್ಮ ತೀಕ್ಷ್ಣವಾದ ಬೌಲಿಂಗ್‌ನ ಮೂಲಕ ವಿಕೆಟ್‌ಗಳನ್ನು ಕಬಳಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾ ದೀಪಕ್ ಚಹಾರ್‌ಗೆ ಅವಕಾಶ ನೀಡಿದ್ದರೆ,  ಭಾರತದ ಸುಲಭ ಗೆಲುವಿಗೆ ಅವರು ಕಾರಣವಾಗಿರುತ್ತಿದ್ದರು ಎಂದೇ ಹೇಳಲಾಗುತ್ತಿದೆ. ಆರಂಭಿಕ ಮತ್ತು ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಕಲೆಯೇ ದೀಪಕ್ ಚಹಾರ್ ಅವರ ಪ್ಲಸ್ ಪಾಯಿಂಟ್. ದೀಪಕ್ ಚಹಾರ್ ಆಗಮನದಿಂದ ಟೀಂ ಇಂಡಿಯಾದ ಫಾಸ್ಟ್ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಿರುತ್ತಿತ್ತು. 


ಆಯ್ಕೆಗಾರರ ತಪ್ಪು ನಿರ್ಧಾರ :  
ದೀಪಕ್ ಚಹಾರ್ ಟೀಮ್ ಇಂಡಿಯಾ ಪರ 10 ODIಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.67 ರ ಅತ್ಯುತ್ತಮ ಬೌಲಿಂಗ್ ಸರಾಸರಿಯಲ್ಲಿ 15 ವಿಕೆಟ್ ಗಳನ್ನು ಪಡೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀಪಕ್ ಚಹಾರ್ ಅವರ ದಾಖಲೆ ಇನ್ನೂ ಉತ್ತಮವಾಗಿದೆ. ಈ ವೇಗದ ಬೌಲರ್ ಟೀಮ್ ಇಂಡಿಯಾ ಪರ ಆಡಿದ 24 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 24.24 ರ ಅತ್ಯುತ್ತಮ ಬೌಲಿಂಗ್ ಸರಾಸರಿಯಲ್ಲಿ 29 ವಿಕೆಟ್ ಗಳನ್ನೂ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 


ಇದನ್ನೂ ಓದಿ : ಟೆಸ್ಟ್ ಇನ್ನಿಂಗ್ಸ್’ನಲ್ಲಿ 3 ಬಾರಿ 5 ವಿಕೆಟ್ ಕಬಳಿಸಿದ ಈ ಅನುಭವಿ ಕ್ರಿಕೆಟಿಗ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಆಡುವುದಿಲ್ಲ!


ಭಾರತದ ODI ತಂಡ: 
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಯುಜ್ವೇಂದ್ರ ಚಾಹಲ್ ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.


ಭಾರತದ ಟೆಸ್ಟ್ ತಂಡ: 
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.


ಇದನ್ನೂ ಓದಿ : ರೋಹಿತ್ ಕ್ಯಾಪ್ಟನ್ಸಿ-ರಾಹುಲ್ ಕೋಚಿಂಗ್ ಬಗ್ಗೆ ಗವಾಸ್ಕರ್ ಕಿಡಿ! ಸಾರ್ವಜನಿಕವಾಗಿ ನಿಂದಿಸಿ ಇಂಥಾ ಹೇಳಿಕೆ ಕೊಟ್ಟ ಮಾಜಿ ನಾಯಕ


ಭಾರತದ T20 ಅಂತರಾಷ್ಟ್ರೀಯ ತಂಡ:
ಇಶಾನ್ ಕಿಶನ್ (WK), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ