Sunil Gavaskar On Rohit Sharma: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರಲ್ಲಿ ಹೀನಾಯ ಸೋಲು ಕಂಡ ನಂತರ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದ ನಂತರ, ರೋಹಿತ್ ಶರ್ಮಾಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ನಾಯಕತ್ವವನ್ನು ನೀಡಲಾಯಿತು. ಆದರೆ ದೊಡ್ಡ ಟೂರ್ನಿಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇದೀಗ ಭಾರತದ ಅನುಭವಿ ಸುನಿಲ್ ಗವಾಸ್ಕರ್ ಅವರು ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಬಗ್ಗೆ ಸಾರ್ವಜನಿಕವಾಗಿ ಹೀಗೊಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ… ತೆಂಡೂಲ್ಕರ್ ಶತಕಗಳ ದಾಖಲೆಯನ್ನು ಮುರಿಯಬಲ್ಲ ಧಮ್ ಇರೋದು ಈ ಕ್ರಿಕೆಟಿಗನಿಗೆ!
ಇಂಡಿಯನ್ ಎಕ್ಸ್ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, “ನಾನು ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದೆ. ವಿದೇಶದಲ್ಲಿ ಉತ್ತಮ ಪ್ರದರ್ಶನವು ನಿಮ್ಮನ್ನು ಉತ್ತಮಗೊಳಿಸುತ್ತದೆ. ಇಲ್ಲಿ ಅವರ ಪ್ರದರ್ಶನ ನನಗೆ ನಿರಾಸೆ ತಂದಿದೆ. ಟಿ20ಯಲ್ಲಿ ಅತ್ಯುತ್ತಮ ಆಟಗಾರರು ಮತ್ತು ಸಾಕಷ್ಟು ಅನುಭವವಿದ್ದರೂ ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಇದು ತುಂಬಾ ನಿರಾಶಾದಾಯಕವಾಗಿದೆ” ಎಂದರು.
ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತದ ಸೋಲನ್ನು ಸುನಿಲ್ ಗವಾಸ್ಕರ್ ಉಲ್ಲೇಖಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ನಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾಗೆ ಪ್ರಶ್ನೆಗಳನ್ನು ಕೇಳಬೇಕು ಎಂದು ಗವಾಸ್ಕರ್ ಒತ್ತಾಯಿಸಿದ್ದಾರೆ. “ಮೊದಲು ಫೀಲ್ಡ್ ಮಾಡಿದ್ದು ಯಾಕೆ ಅಂತ ಅವರಿಗೇ ಪ್ರಶ್ನೆ ಕೇಳಬೇಕು. ಟಾಸ್ ವೇಳೆ ಮೋಡ ಕವಿದ ವಾತಾವರಣವಿತ್ತು ಎಂದು ಹೇಳಲಾಗಿದೆ. ಟ್ರಾವಿಸ್ ಹೆಡ್ ನ ದೌರ್ಬಲ್ಯದ ಬಗ್ಗೆ ನಿಮಗೆ ತಿಳಿದಿರಲಿಲ್ಲ, ಅಲ್ಲವೇ? ಅವರು 80 ರನ್ ಗಳಿಸಿದಾಗ ಮಾತ್ರ ಬೌನ್ಸರ್ ಗಳನ್ನು ಏಕೆ ಬಳಸಲಾಯಿತು? ಬ್ಯಾಟಿಂಗ್ ಗೆ ಬಂದಾಗ ರಿಕಿ ಪಾಂಟಿಂಗ್ ತಮ್ಮ ವಿರುದ್ಧ ಬೌನ್ಸರ್ ಎಸೆತಗಳನ್ನು ಬಳಸಬೇಕು ಎಂದು ನಿರಂತರವಾಗಿ ಹೇಳುತ್ತಿದ್ದರು. ಎಲ್ಲರಿಗೂ ಗೊತ್ತಿತ್ತು ಆದರೆ ನಾವು ಮಾಡಲಿಲ್ಲ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ ಇಬ್ಬರು ಸ್ಟಾರ್ ಕ್ರಿಕೆಟಿಗರು!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ತಯಾರಾಗಲು ಟೀಂ ಇಂಡಿಯಾಕ್ಕೆ ಸಮಯ ಸಿಕ್ಕಿಲ್ಲ ಎಂಬ ರೋಹಿತ್ ಶರ್ಮಾ ಹೇಳಿಕೆಯನ್ನು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ. ಗವಾಸ್ಕರ್, “ನಾವು ಯಾವ ರೀತಿಯ ತಯಾರಿ ಬಗ್ಗೆ ಮಾತನಾಡುತ್ತಿದ್ದೇವೆ? ನೀವು ತಯಾರಿಕೆಯ ಬಗ್ಗೆ ಮಾತನಾಡುವಾಗ, ಅದರ ಬಗ್ಗೆ ವಾಸ್ತವಿಕತೆ ಅರಿಯಿರಿ. 15 ದಿನ ಮುಂಚಿತವಾಗಿ ಹೋಗಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದೀರಿ. ಮುಖ್ಯ ಆಟಗಾರರು ವಿಶ್ರಾಂತಿ ಪಡೆಯಬಹುದು ಆದರೆ ಮೀಸಲು ಅಥವಾ ಉಳಿದ ಆಟಗಾರರು ಮೈದಾನದಲ್ಲಿ ಆಡಬಹುದಲ್ಲವೇ? ಉತ್ತಮವಾಗಿ ಕಾರ್ಯನಿರ್ವಹಿಸದವರಿಗೆ ಸವಾಲು ಹಾಕಬಹುದು. ಆದರೆ ಇದು ಆಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ