IND vs WI T20: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ T20 ಸರಣಿಯ ಮೂರನೇ ಪಂದ್ಯ (IND vs WI T20) ಮಂಗಳವಾರ (ಆಗಸ್ಟ್ 2) ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ನಡೆಯಬೇಕಿತ್ತು. ಆದರೆ ಈಗ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9:30 ರಿಂದ ಪ್ರಾರಂಭವಾಗಲಿದೆ. ಇನ್ನು ಆಗಸ್ಟ್ 1 ರಂದು ನಡೆದ ಸರಣಿಯ ಎರಡನೇ ಪಂದ್ಯದ ಸಮಯದಲ್ಲೂ ದೊಡ್ಡ ಬದಲಾವಣೆಯಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಖಾತೆಯ ಪ್ರೊಫೈಲ್ ಫೋಟೋ ಬದಲಿಸಿದ ಪ್ರಧಾನಿ ಮೋದಿ.! ಈಗಿರುವ ಚಿತ್ರ ಯಾವುದು ನೋಡಿ


ಬಿಸಿಸಿಐ ಟ್ವೀಟ್: 
ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಹೊಸ ಸಮಯದ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವೀಟ್ ಮಾಡಿದೆ. ಮೂರನೇ ಟಿ20 ಪಂದ್ಯದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಹಳೆಯ ವೇಳಾಪಟ್ಟಿಯ ಪ್ರಕಾರ, ಈ ಪಂದ್ಯವು ಭಾರತೀಯ ಕಾಲಮಾನ 8 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಈಗ ಟಾಸ್ 9 ಗಂಟೆಗೆ ನಡೆಯಲಿದ್ದು, ಪಂದ್ಯ 9:30 ಕ್ಕೆ ಪ್ರಾರಂಭವಾಗಲಿದೆ.


5 ಪಂದ್ಯಗಳ ಟಿ20 ಸರಣಿಯಲ್ಲಿ ಇದು ಎರಡನೇ ಬಾರಿಗೆ ಪಂದ್ಯದ ಸಮಯವನ್ನು ಬದಲಾಯಿಸಲಾಗಿದೆ. ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯವೂ ವಾರ್ನರ್ ಪಾರ್ಕ್‌ನಲ್ಲಿ ನಡೆದಿತ್ತು. ಆ ಪಂದ್ಯ ಕೂಡ ಭಾರತೀಯ ಕಾಲಮಾನ 8 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಈ ಪಂದ್ಯ ರಾತ್ರಿ 11 ಗಂಟೆಗೆ ಆರಂಭವಾಗಿದೆ. ಟ್ರಿನಿಡಾಡ್‌ನಿಂದ ಸೇಂಟ್ ಕಿಟ್ಸ್‌ಗೆ ತಂಡದ ಪ್ರಮುಖ ವಸ್ತುಗಳನ್ನು ತಲುಪಲು ವಿಳಂಬವಾದ ಕಾರಣ ಈ ಪಂದ್ಯ ತಡವಾಗಿ ಆರಂಭವಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. 


ಇದನ್ನೂ ಓದಿ: Commonwealth Games 2022: ಮುಂದುವರೆದ ಭಾರತದ ಪದಕ ಬೇಟೆ: ಇಂದಿನ ವೇಳಾಪಟ್ಟಿ ಹೀಗಿದೆ


ಸರಣಿಯಲ್ಲಿ ಒಂದರ ಮೇಲೊಂದು ಡ್ರಾ: 
5 ಪಂದ್ಯಗಳ ಸರಣಿಯಲ್ಲಿ ಪ್ರಸ್ತುತ ಉಭಯ ತಂಡಗಳು ತಲಾ ಒಂದು ಹಂತದಲ್ಲಿ ಸಮಬಲ ಸಾಧಿಸಿವೆ. ಸರಣಿಯ ಮೊದಲ ಪಂದ್ಯವು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಟೀಂ ಇಂಡಿಯಾ 68 ರನ್‌ಗಳಿಂದ ಗೆದ್ದುಕೊಂಡಿತು. ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್‌ಗಳ ಜಯ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ  ಉಭಯ ತಂಡಗಳು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.