ಮನೆ ಮಾಲೀಕನ ಎಡವಟ್ಟು, ಪೋಷಕರ ನಿರ್ಲಕ್ಷ್ಯ: ತಿಗಣೆ ಔಷಧಿಗೆ ಪ್ರಾಣ ಕಳೆದುಕೊಂಡ ಕಂದಮ್ಮ

ಆದರೆ ತಿಗಣೆ ಔಷಧದ ಅರಿವಿಲ್ಲದೆ ಇಂದು ಮುಂಜಾನೆ ಐದು ಗಂಟೆಗೆ ಮನೆಗೆ ಬಂದು ಮಲಗಿದ್ದಾರೆ.  ಔಷಧಿ ಸಿಂಪಡಿಸಿದ್ದರಿಂದ ಮನೆಗೆ ಬಂದು ಮಲಗುತ್ತಿದ್ದಂತೆ ಮೂವರಿಗೂ ಉಸಿರಾಟದ ಸಮಸ್ಯೆಯಾಗಿದೆ. 

Written by - VISHWANATH HARIHARA | Edited by - Bhavishya Shetty | Last Updated : Aug 2, 2022, 10:27 AM IST
  • ಬಾಡಿಗೆ ಮನೆಗೆ ಬರಬೇಡಿ ಎಂದರೂ ಆಗಮಿಸಿದ ದಂಪತಿ
  • ತಗಣೆ ಔಷಧಿ ವಾಸನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ ಬಾಲಕಿ
  • ಬೆಂಗಳೂರಿನಲ್ಲಿ ಆರು ವರ್ಷದ ಬಾಲಕಿಗೆ ಕುತ್ತುತಂದ ತಿಗಣೆ ಔಷಧ
ಮನೆ ಮಾಲೀಕನ ಎಡವಟ್ಟು, ಪೋಷಕರ ನಿರ್ಲಕ್ಷ್ಯ: ತಿಗಣೆ ಔಷಧಿಗೆ ಪ್ರಾಣ ಕಳೆದುಕೊಂಡ ಕಂದಮ್ಮ title=
Bengaluru

ಬೆಂಗಳೂರು: ತನ್ನದಲ್ಲದ ತಪ್ಪಿಗೆ ಆರು ವರ್ಷದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಅಹನಾ ಮೃತ ದುರ್ದೈವಿಯಾಗಿದ್ದು, ಬಾಲಕಿ ಸಾವಿಗೆ ಕಾರಣವಾಗಿರುವುದು ತಿಗಣೆ ಔಷಧಿ. ಮನೆಯಲ್ಲಿ ತಿಗಣೆ ಜಿರಳೆ ಹೆಚ್ಚಾಗಿದ್ದರಿಂದ ಔಷಧಿ ಸಿಂಪಡಿಸುತ್ತೇವೆ.  ಹೀಗಾಗಿ ಒಂದು ವಾರ ಮನೆಗೆ ಬರಬೇಡಿ ಎಂದು ಬಾಡಿಗೆದಾರರಾದ ವಿನೋದ್ ಮತ್ತು ನಿಶಾ ದಂಪತಿಗೆ ಮನೆ ಮಾಲೀಕರು ಹೇಳಿದ್ದರು. ಹೀಗಾಗಿ ಆರು ವರ್ಷದ ಅಹನಾಳ ಜೊತೆ ದಂಪತಿ ಸಂಬಂಧಿಕರ ಮನೆಗೆ ಹೋಗಿದ್ದರು.

ಇದನ್ನೂ  ಓದಿ: ರಾಜ್ಯದಲ್ಲಿ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಆದರೆ ತಿಗಣೆ ಔಷಧದ ಅರಿವಿಲ್ಲದೆ ಇಂದು ಮುಂಜಾನೆ ಐದು ಗಂಟೆಗೆ ಮನೆಗೆ ಬಂದು ಮಲಗಿದ್ದಾರೆ.  ಔಷಧಿ ಸಿಂಪಡಿಸಿದ್ದರಿಂದ ಮನೆಗೆ ಬಂದು ಮಲಗುತ್ತಿದ್ದಂತೆ ಮೂವರಿಗೂ ಉಸಿರಾಟದ ಸಮಸ್ಯೆಯಾಗಿದೆ. ಇದನ್ನು ನಿರ್ಲಕ್ಷ್ಯಿಸಿದ ಮನೆಯವರು ಕಾಫಿ ಕುಡಿದು ರೆಸ್ಟ್ ಮಾಡಿದ್ದಾರೆ.‌ ಆದರೆ ಆರು ವರ್ಷದ ಬಾಲಕಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಮೃತಪಟ್ಟಿದ್ದಾಳೆ. ಸದ್ಯ ಅಸ್ವಸ್ಥಗೊಂಡಿರುವ ಮನೆ ಮಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಇದನ್ನೂ  ಓದಿ: ಡಿಕೆಶಿ ಭವಿಷ್ಯ ಇಂದು ನಿರ್ಧಾರ: ಇಡಿ ಪ್ರಕರಣದಲ್ಲಿ ಸಿಗುತ್ತಾ ಬೇಲ್‌?

ಇನ್ನೂ ಈ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದ್ದು, ಈ ಕುರಿತು ಮನೆ ಮಾಲೀಕ‌ ಶಿವಶಂಕರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ   ದಾಖಲಾಗಿದೆ. ಸಿಂಪಡಿಸಿದ್ದು ತಿಗಣೆ ಔಷಧಿಯೋ ಅಥವಾ ಬೇರೆ ರಾಸಾಯನಿಕ ವಸ್ತುವೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಶಂಕರ್ ಮನೆಯಲ್ಲಿ ಕಳೆದ‌ ಕೆಲ ವರ್ಷದಿಂದ ವಿನೋದ್ ದಂಪತಿ ವಾಸವಿದ್ದರು ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News