ನವದೆಹಲಿ : ಐಪಿಎಲ್ 2021(IPL 2021) ತನ್ನ ಕೊನೆಯ ಹಂತವನ್ನು ತಲುಪುತ್ತಿದ್ದಂತೆ, ಐಸಿಸಿ ಟಿ 20 ವಿಶ್ವಕಪ್ 2021ರ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಕಾತುರತೆ ಹೆಚ್ಚುತ್ತಿದೆ. ಈ ವಲ್ಡ್‌ ಟೂರ್ನಿಯಲ್ಲಿ (ICC T20 World Cup 2021) ಟೀಂ ಇಂಡಿಯಾ ತನ್ನ ರೆಟ್ರೊ ಜರ್ಸಿಯಲ್ಲಿ ಕಾಣಿಸಲಿದೆಯೇ ಅಥವಾ, ಯಾವುದಾದರೂ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.   


COMMERCIAL BREAK
SCROLL TO CONTINUE READING

ಹೊಸ ಜರ್ಸಿಯ  ಘೋಷಣೆ ಯಾವಾಗ ? 
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಪಡೆಯಲಿದ್ದಾರೆ.  ಟೀಂ ಇಂಡಿಯಾದ ಹೊಸ ಜರ್ಸಿಯನ್ನು (Team India Jersey) ಅಕ್ಟೋಬರ್ 13 ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಬಿಸಿಸಿಐ (BCCI) ತನ್ನ ಟ್ವಿಟರ್ ಖಾತೆಯ ಮೂಲಕ ಘೋಷಣೆ ಮಾಡಿದೆ. 


ಇದನ್ನೂ ಓದಿ : IPL 2021: KKRಗೊಂದು ಸಂತಸದ ಸುದ್ದಿ, PlayOffನಲ್ಲಿ ಕಣಕ್ಕಿಳಿಯಲಿದ್ದಾರೆ ಈ ಆಟಗಾರ
 
PAK ವಿರುದ್ಧ ಇಂಡಿಯಾ ಮೊದಲ ಪಂದ್ಯ:
ಐಸಿಸಿ ಟಿ 20 ವಿಶ್ವಕಪ್ 2021ರ  (ICC T20 World Cup 2021) ಅಕ್ಟೋಬರ್ 14 ರಂದು ಆರಂಭವಾಗಲಿದೆ. ಆದರೆ ಟೀಂ ಇಂಡಿಯಾ (team India) ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 24 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Stadium) ಆಡಲಿದೆ. 
 
ಟಿ 20 ವಿಶ್ವಕಪ್‌ಗೆ ಭಾರತ ತಂಡ :
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ


ಸ್ಟ್ಯಾಂಡ್ ಬೈ: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್
ಕೋಚ್: ರವಿ ಶಾಸ್ತ್ರಿ. 
ಮಾರ್ಗದರ್ಶಕ: ಎಂಎಸ್ ಧೋನಿ‌


ಇದನ್ನೂ ಓದಿ Abhimanyu Mithun Retirement: ರಹಸ್ಯವಾಗಿ ನಿವೃತ್ತಿ ಪಡೆದ ಭಾರತೀಯ ಕ್ರಿಕೆಟಿಗ, ಅಭಿಮಾನಿಗಳಿಗೆ ಶಾಕ್


ಐಸಿಸಿ ಟಿ 20 ವಿಶ್ವಕಪ್ 2021 ಕ್ಕೆ ಟೀಂ ಇಂಡಿಯಾ ವೇಳಾಪಟ್ಟಿ :


ಭಾರತ vs ಪಾಕಿಸ್ತಾನ- 24 ಅಕ್ಟೋಬರ್, 7:30 PM IST, ದುಬೈ
ಇಂಡಿಯಾ vs ನ್ಯೂಜಿಲ್ಯಾಂಡ್- 31 ಅಕ್ಟೋಬರ್, 7:30 PM IST, ದುಬೈ
ಇಂಡಿಯಾ vs ಅಫ್ಘಾನಿಸ್ತಾನ- 03 ನವೆಂಬರ್, 7:30 PM IST, ಅಬುಧಾಬಿ
ಇಂಡಿಯಾ vs B1- 05 ನವೆಂಬರ್ , 7:30 PM IST, ದುಬೈ
ಇಂಡಿಯಾ vs A2- ನವೆಂಬರ್ 08, 7:30 PM IST, ದುಬೈ
ಸೆಮಿ-ಫೈನಲ್ 1- ನವೆಂಬರ್ 10, 7:30 PM IST, ಅಬುಧಾಬಿ
ಸೆಮಿಫೈನಲ್ 2- ನವೆಂಬರ್ 10, 7:30 PM IST, ದುಬೈ
ಫೈನಲ್- ನವೆಂಬರ್ 14, 7:30 PM IST, ದುಬೈ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ