Virat Kohli: ಜಗತ್ತು ಕಂಡ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಭಾರತೀಯ ತಂಡಕ್ಕೆ ಸೇರಿದ ಆರಂಭಿಕ ದಿನಗಳಲ್ಲಿ ಇವರು ಅದೆಷ್ಟೋ ಜನರ ನಿದ್ದೆಗೆಡಿಸಿದ್ದರು. ಅಷ್ಟೇ ಅಲ್ಲ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಅನೇಕ ನಿರ್ಣಾಯಕ ಕ್ಷಣಗಳನ್ನು ಅನುಭವಿಸಿದ್ದಾರೆ. ಆದರೆ ಕೊಹ್ಲಿ ಪ್ರಕಾರ, ಅವರ ಜೀವನವನ್ನು ಬದಲಾಯಿಸಿದ ಕ್ಷಣವೆಂದರೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾದ ದಿನವಂತೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ಟ್ಯಾಂಡ್‌ನಲ್ಲಿ ಫ್ಯಾನ್‌ ಹಿಡಿದ ಕ್ಯಾಚ್ ನೋಡಿ ಗಿಲ್‌ ಶಾಕ್? ವೈರಲ್‌ ಆಯ್ತು ಎಕ್ಷ್‌ಪ್ರೇಷನ್‌!‌


RCB ಪಾಡ್‌’ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಕೊಹ್ಲಿ, ತಮ್ಮ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತನ್ನ ತಂದೆಯ ನಿಧನದ ನಂತರ ಪರಿಸ್ಥಿತಿ ಹೇಗೆ ತಿರುವು ಪಡೆದುಕೊಂಡಿತು ಎಂಬುದನ್ನು ನೆನಪಿಸಿಕೊಂಡ ಕೊಹ್ಲಿ, ‘ವಿಷಯಗಳ ಬಗ್ಗೆ ದೃಷ್ಟಿಕೋನವು ಬದಲಾಗಿದೆ ಹೊರತಾಗಿ ನನ್ನ ಜೀವನ ಬದಲಾಗಿಲ್ಲ’ ಎಂದು ಹೇಳಿದರು.


"ನನ್ನ ತಂದೆ ತೀರಿಕೊಂಡಾಗ ವಿಷಯಗಳ ಬಗ್ಗೆ ನನ್ನ ದೃಷ್ಟಿಕೋನ ಬದಲಾಯಿತು, ಆದರೆ ನನ್ನ ಜೀವನವು ಬದಲಾಗಲಿಲ್ಲ. ಸುತ್ತಮುತ್ತಲಿನ ಜೀವನವು ಮೊದಲಿನಂತೆಯೇ ಇತ್ತು. ಈ ಘಟನೆಯು ನನಗೆ ಸಾಕಷ್ಟು ಪಾಠ ಕಲಿಸಿತು, ಯಾವುದರ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕೆಂದು ತಿಳಿಸಿತು. ನನ್ನ ಕನಸನ್ನು ನನಸಾಗಿಸಲು ಬಹಳಷ್ಟು ಪ್ರೇರಣೆ ನೀಡಿತು. ಆದರೆ ಅದು ಜೀವನವನ್ನು ಬದಲಾಯಿಸಲಿಲ್ಲ. ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೆ. ನಾನು ಇನ್ನೂ ನಾನು ಏನನ್ನೋ ಮಾಡಬೇಕಾಗಿತ್ತು. ಅಂದಿನ ವಾತಾವರಣ ಸಾಕಷ್ಟು ಹೋಲಿಕೆಯಾಗುತ್ತಿದೆ" ಅವರು ಹೇಳಿದರು.


@eatsurenow ಪ್ರೆಸೆಂಟ್ಸ್ #RCBPodcast ನಲ್ಲಿ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾದ ನಂತರ ವಿರಾಟ್ ಅವರ ಜೀವನ ಹೇಗೆ ಬದಲಾಯಿತು ಎಂಬುದರ ಕುರಿತು ಮಾತನಾಡಿದ್ದಾರೆ.!


'ಜೀವನ ಬದಲಾಯಿಸುವ' ಕ್ಷಣದ ಕುರಿತು ಮಾತನಾಡಿದ ಕೊಹ್ಲಿ, ಅನುಷ್ಕಾ ಅವರನ್ನು ಭೇಟಿಯಾದ ನಂತರ ನಾನು ಜೀವನವನ್ನು ವಿಭಿನ್ನ ರೀತಿಯಲ್ಲಿ ನೋಡಿದ್ದೇನೆ ಎಂದು ಹೇಳಿದರು.


ಇದನ್ನೂ ಓದಿ: Astro Tips: ವಾರದ ಈ 3 ದಿನ ತಪ್ಪಿಯೂ ಉಗುರು ಕತ್ತರಿಸಬಾರದು, ಗ್ರಹ ದೋಷ ಕಾಡುತ್ತೆ.!


"ನಾನು ಅನುಷ್ಕಾಳನ್ನು ಭೇಟಿಯಾದಾಗ ಅದು ಜೀವನವನ್ನು ಬದಲಾಯಿಸುವ ಕ್ಷಣ ಎಂದು ನಾನು ಹೇಳುತ್ತೇನೆ, ಏಕೆಂದರೆ ನಾನು ಜೀವನದ ವಿಭಿನ್ನ ಮುಖವನ್ನು ನೋಡಿದೆ. ಇದು ವಿಭಿನ್ನ ದೃಷ್ಟಿಕೋನ, ನೀವು ಪ್ರೀತಿಯಲ್ಲಿ ಬಿದ್ದಾಗ, ನೀವು ಆ ಬದಲಾವಣೆಗಳನ್ನು ನಿಮ್ಮೊಳಗೆ ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ನೀವು ಬಹಳಷ್ಟು ವಿಷಯಗಳನ್ನು ಒಪ್ಪಿಕೊಳ್ಳಬೇಕು, ಮತ್ತು ಅದು ನನ್ನ ಜೀವನವನ್ನು ಬದಲಾಯಿಸಿತು” ಎಂದು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.