Top 5 Highest Paid Indian Cricketers: ಭಾರತೀಯ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಕ್ರೇಜ್ ಹೊಂದಿದೆ. ಇನ್ನು ಈ ಕ್ರೀಡೆ ಕೇವಲ ಮನರಂಜನೆ ಮಾತ್ರವಲ್ಲ, ಲಾಭದಾಯಕ ವೃತ್ತಿಯಾಗಿಯೂ ಮಾರ್ಪಾಡಾಗಿದೆ. ಇನ್ನು ನಾವಿಂದು ಈ ಲೇಖನದಲ್ಲಿ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ಭಾರತೀಯ ಕ್ರಿಕೆಟಿಗರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿ, ರೋಹಿತ್, ಗಿಲ್ ವಿರುದ್ಧ ಕೆಂಡಕಾರಿದ ಟೀಂ ಇಂಡಿಯಾ ಫ್ಯಾನ್ಸ್


ಭಾರತೀಯ ಕ್ರಿಕೆಟಿಗರು ಕಳೆದ 12 ತಿಂಗಳ ಪ್ರದರ್ಶನದ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಮೂಲ ವೇತನ 7 ಕೋಟಿ ರೂ. ಇದೆ. A+ ಒಪ್ಪಂದದಲ್ಲಿರುವ ವಿರಾಟ್, ಭಾರತದ ನಾಯಕರಾಗಿದ್ದ ಸಂದರ್ಭದಲ್ಲಿ ಟೆಸ್ಟ್‌ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಗೆಲುವುಗಳು ಸಾಧಿಸಿದ್ದರು (68 ರಲ್ಲಿ 40).


ಇನ್ನು ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಇವರೂ ಕೂಡ A+ ಒಪ್ಪಂದದಲ್ಲಿರುವ ಆಟಗಾರ, ಇವರು ಒಂದು ಪಂದ್ಯಕ್ಕೆ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನು ಮೂರು ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರನಾಗಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಐದು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್.


ರವೀಂದ್ರ ಜಡೇಜಾ ಮೂಲ ವೇತನ INR 7 ಕೋಟಿ ಇದ್ದು, ಇವರು ಕೂಡ A+ ಒಪ್ಪಂದದಲ್ಲಿರುವ ಆಟಗಾರರಾಗಿದ್ದಾರೆ. ಭಾರತೀಯ ಎಡಗೈ ಸ್ಪಿನ್ನರ್‌’ನಿಂದ ಅತ್ಯಧಿಕ ಟೆಸ್ಟ್ ವಿಕೆಟ್‌’ಗಳನ್ನು ಕಬಳಿಸಿದ್ದಾರೆ (268).


ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮೂಲ ವೇತನ 7 ಕೋಟಿ ರೂ. ಇದೆ. ಇವರು ಕೂಡ A+ ಒಪ್ಪಂದದಲ್ಲಿರುವ ಆಟಗಾರ. T20I ಗಳಲ್ಲಿ ವೇಗವಾಗಿ 50 ವಿಕೆಟ್‌ ಕಬಳಿಸಿದ ಭಾರತೀಯ ಬೌಲರ್ ಬುಮ್ರಾ 11 ತಿಂಗಳ ಬಳಿಕ ಟೀಂ ಇಂಡಿಯಾಗೆ ಇದೀಗ ಮರಳಿದ್ದಾರೆ.


ಇದನ್ನೂ ಓದಿ: “ಧೋನಿ ಅಲ್ಲ, ಈತನೇ ನನ್ನ ವೃತ್ತಿಜೀವನದ ಫೇವರಿಟ್ ಕ್ಯಾಪ್ಟನ್”: ವೇಗಿ ಇಶಾಂತ್ ಶರ್ಮಾ


ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎ ವರ್ಗದ ಒಪ್ಪಂದದಲ್ಲಿರುವ ಆಟಗಾರ. ಇವರ ಮೂಲ ವೇತನ INR 5 ಕೋಟಿ. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಅಶ್ವಿನ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ