ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಯಾರು? ಈ ಪಟ್ಟಿಯಲ್ಲಿ ಧೋನಿ ಶಿಷ್ಯನೇ ಅಗ್ರಸ್ಥಾನಿ
Highest wicket taker in Asia Cup: 34 ವರ್ಷದ ಸ್ಪಿನ್ನರ್ ರವೀಂದ್ರ ಜಡೇಜಾ, 18 ಇನ್ನಿಂಗ್ಸ್’ಗಳಲ್ಲಿ 24 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಭಾರತ ಮಾಜಿ ಸ್ಟಾರ್ ಬೌಲರ್ ಇರ್ಫಾನ್ ಪಠಾಣ್ ಅವರ 12 ಇನ್ನಿಂಗ್ಸ್’ಗಳಲ್ಲಿ 22 ವಿಕೆಟ್ ಪಡೆದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Highest wicket taker in Asia Cup history: ಭಾರತದ ಆಲ್’ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್’ನ ಏಕದಿನ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಜಡೇಜಾ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ ಫೈನಲ್’ಗೆ ಭಾರತ.. ಸೋಲಿನ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದೇ ಈ 5 ಟ್ವಿಸ್ಟ್’ಗಳು
34 ವರ್ಷದ ಸ್ಪಿನ್ನರ್ ರವೀಂದ್ರ ಜಡೇಜಾ, 18 ಇನ್ನಿಂಗ್ಸ್’ಗಳಲ್ಲಿ 24 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಭಾರತ ಮಾಜಿ ಸ್ಟಾರ್ ಬೌಲರ್ ಇರ್ಫಾನ್ ಪಠಾಣ್ ಅವರ 12 ಇನ್ನಿಂಗ್ಸ್’ಗಳಲ್ಲಿ 22 ವಿಕೆಟ್ ಪಡೆದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಪಂದ್ಯದ ಸಂಕ್ಷಿಪ್ತ ವಿಶ್ಲೇಷಣೆ:
ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 213 ರನ್’ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಶ್ರೀಲಂಕಾ ಪರ ದುನಿತ್ ವೆಲಾಲಗೆ ಗರಿಷ್ಠ 5 ವಿಕೆಟ್ ಪಡೆದರು. ಈ ಪಿಚ್’ನಲ್ಲಿ ಶುಭ್ಮನ್ ಗಿಲ್ (19), ವಿರಾಟ್ ಕೊಹ್ಲಿ (3), ರೋಹಿತ್ ಶರ್ಮಾ (53), ಕೆಎಲ್ ರಾಹುಲ್ (39) ಮತ್ತು ಹಾರ್ದಿಕ್ ಪಾಂಡ್ಯ (5) ರನ್ ಗಳಿಸಲಷ್ಟೇ ಶಕ್ತರಾದರು. ಇನ್ನು ಈ ಆರಂಭಿಕ ದಿಗ್ಗಜರನ್ನು ಪೆವಿಲಿಯನ್’ಗೆ ಕಳುಹಿಸಿದ್ದು, 20 ಹರೆಯದ ಸ್ಪಿನ್ನರ್ ದುನಿತ್ ವೆಲಾಲಗೆ.
ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, 172 ರನ್’ಗಳಿಗೆ ಕುಸಿದಿತ್ತು. ಶ್ರೀಲಂಕಾ ಪರ ದುನಿತ್ ವೆಲಾಲಗೆ ಅಜೇಯ 42 ರನ್ ಗಳಿಸಿದರೆ, ಧನಂಜಯ್ ಡಿ ಸಿಲ್ವಾ 41 ರನ್ ಕಲೆಹಾಕಿದ್ದರು. ಇವರಿಬ್ಬರು 7ನೇ ವಿಕೆಟ್’ಗೆ 63 ರನ್’ಗಳ ಜೊತೆಯಾಟ ನೀಡಿದರು. ಭಾರತದ ಪರ ಕುಲದೀಪ್ ಯಾದವ್ 4, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದ್ದಾರೆ.
ODI ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿ
1. ರವೀಂದ್ರ ಜಡೇಜಾ - 18 ಪಂದ್ಯಗಳಲ್ಲಿ 24 ವಿಕೆಟ್
2. ಇರ್ಫಾನ್ ಪಠಾಣ್ - 12 ಪಂದ್ಯಗಳಲ್ಲಿ 22 ವಿಕೆಟ್
3. ಕುಲದೀಪ್ ಯಾದವ್ - 10 ಪಂದ್ಯಗಳಲ್ಲಿ 19 ವಿಕೆಟ್
4. ಸಚಿನ್ ತೆಂಡೂಲ್ಕರ್ - 23 ಪಂದ್ಯಗಳಲ್ಲಿ 19 ವಿಕೆಟ್
5. ಕಪಿಲ್ ದೇವ್ - 7 ಪಂದ್ಯಗಳಲ್ಲಿ 15 ವಿಕೆಟ್
6. ರವಿಚಂದ್ರನ್ ಅಶ್ವಿನ್ - 7 ಪಂದ್ಯಗಳಲ್ಲಿ 14 ವಿಕೆಟ್
ಇದನ್ನೂ ಓದಿ: “ಭಾರತ ಗೆಲುವಿನ ಹೀರೋಗಳು ಈ ಇಬ್ಬರು ಆಟಗಾರರು”… ಸಂತಸದಲ್ಲಿ ರೋಹಿತ್ ಶರ್ಮಾ ಹೇಳಿಕೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ