IPL 2022: ಮುಂಬೈ ಗೆದ್ದರೆ ಆರ್‌ಸಿಬಿಗೆ ಲಾಭ: ಈ ಲೆಕ್ಕಾಚಾರ ಹೇಗೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅದ್ಭುತವಾಗಿ ಮುನ್ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯದ ಹಂತ ತಲುಪಲಿದೆ. ಇಂದು ಟೂರ್ನಿಯ 69ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದರೆ ಆರ್‌ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲಿದೆ. ಈ ಲೆಕ್ಕಾಚಾರ ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇದನ್ನು ಓದಿ: ಬಿಜೆಪಿಗೆ ತೆಲೆ ನೋವಾದ ಬೆಳಗಾವಿ ‘ಬಣ’ ರಾಜಕಾರಣ..!
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ನಿರಾಸೆಯ ಪ್ರದರ್ಶನ ನೀಡಿದೆ. ಟೂರ್ನಿಯಲ್ಲಿ ಆಡಿರುವ ಹದಿಮೂರು ಪಂದ್ಯಗಳ ಪೈಕಿ ಹತ್ತರಲ್ಲಿ ಸೋಲು ಕಂಡಿದ್ದು, ಮೂರರಲ್ಲಿ ಮಾತ್ರ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್ ಮುನ್ನಡೆಸುತ್ತಿದ್ದು, ಆಡಿರುವ ಹದಿಮೂರು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿದ್ದು, ಇನ್ನುಳಿದ ಆರರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.
ಮುಂಬೈ ಗೆಲುವು ಆರ್‌ಸಿಬಿಗೆ ಲಾಭ ಹೇಗೆ!:
ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ಗೆ ಪ್ರವೇಶ ನೀಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಪ್‌ಗೆ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಗೆಲುವು ಸಾಧಿಸಿದರೆ 16 ಅಂಕ ಪಡೆದು ಆರ್‌ಸಿಬಿಗೆ ಸಮಾನವಾಗಿ ನಿಲ್ಲಲಿದೆ. ಆದರೆ ಆರ್‌ಸಿಬಿ ತಂಡಕ್ಕಿಂತ ಡೆಲ್ಲಿ ಕ್ಯಾಪಿಟಲ್ಸ್‌ನ ರನ್‌ರೇಟ್ ಹೆಚ್ಚಿರುವ ಕಾರಣ ಮುಂಬೈ ವಿರುದ್ಧ ಎಷ್ಟೇ ಅಂತರದಲ್ಲಿ ಗೆಲುವು ಸಾಧಿಸಿದರೂ ಡೆಲ್ಲಿ ಪ್ಲೇ ಆಫ್ ಪ್ರವೇಶಿಸುವುದು ಪಕ್ಕಾ ಆಗುತ್ತದೆ. ಆಗ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲಿದೆ.
ಇದನ್ನು ಓದಿ: Gold-Sliver Price: ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ
ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ:
ಮುಂಬೈ ಇಂಡಿಯನ್ಸ್:
ಇಶಾನ್ ಕಿಶನ್ (ವಿ.ಕೀ), ರೋಹಿತ್ ಶರ್ಮಾ (ಕ್ಯಾ), ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಸಂಜಯ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಮಯಾಂಕ್ ಮಾರ್ಕಂಡೆ.
ಡೆಲ್ಲಿ ಕ್ಯಾಪಿಟಲ್ಸ್:
ಡೇವಿಡ್ ವಾರ್ನರ್, ಪೃಥ್ವಿ ಶಾ/ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ಕ್ಯಾ& ವಿ.ಕೀ), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.