ಏನೇ ಆದ್ರೂ ನಾನು ಬದಲಾಗಲ್ಲ... ಶ್ರೀಲಂಕಾ ವಿರುದ್ಧ ಸೋಲುಂಡ ಬಳಿಕ ರೋಹಿತ್ ಶರ್ಮಾ ಖಡಕ್ ಆಗಿ ಹೀಗಂದಿದ್ದೇಕೆ?
Rohit Sharma Statement: ಈ ಪಂದ್ಯದಲ್ಲಿ ರೋಹಿತ್ ಶರ್ಮಾ 64 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿದ್ದು, ಆ ಪಂದ್ಯ ಟೈ ಆಗಿತ್ತು.
Rohit Sharma Statement: ಕೊಲಂಬೊದಲ್ಲಿ ಮೊದಲ ODI ಟೈ ಆದ ಬಳಿಕ ಆಗಸ್ಟ್ 4 ರಂದು ಎರಡನೇ ODI ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲುಂಡಿತ್ತು. ಈ ಪಂದ್ಯದಲ್ಲಿ ಮೊದಲು ಆಡಿದ ಶ್ರೀಲಂಕಾ ಭಾರತಕ್ಕೆ 241 ರನ್ʼಗಳ ಗುರಿ ನೀಡಿತ್ತು. ಆದರೆ, ಶ್ರೀಲಂಕಾದ ಸ್ಪಿನ್ ಎದುರು ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಕುಸಿದಿತ್ತು.
ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ 64 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿದ್ದು, ಆ ಪಂದ್ಯ ಟೈ ಆಗಿತ್ತು.
ಎರಡನೇ ODI ಸೋಲಿನ ನಂತರ ರೋಹಿತ್ ಶರ್ಮಾಗೆ "ವಿಶೇಷವಾಗಿ ಪವರ್ ಪ್ಲೇನಲ್ಲಿ ತಮ್ಮ ವರ್ತನೆಯನ್ನು ಬದಲಾಯಿಸುವ ಅಗತ್ಯವಿದೆಯೇ?" ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಹೀಗೆಯೇ ಆಡೋದು. ಏನೇ ಆದ್ರೂ ನಾನು ಬದಲಾಗಲ್ಲ. ಬ್ಯಾಟಿಂಗ್ ವಿಧಾನವನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ" ಎಂದು ಹೇಳಿದರು.
"ನನ್ನ ಉದ್ದೇಶದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಪವರ್ ಪ್ಲೇಯ ಲಾಭವನ್ನು ಪಡೆಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಇದರಿಂದ ನಾನು ತಂಡದ ಸ್ಕೋರ್ ಬೋರ್ಡ್ʼನಲ್ಲಿ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಬಹುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದೇನಿದು...? ಮೈದಾನದಲ್ಲೇ ವಾಷಿಂಗ್ಟನ್ ಸುಂದರ್ʼಗೆ ಹೊಡೆಯಲು ಮುಂದಾದ ಕ್ಯಾಪ್ಟನ್ ರೋಹಿತ್ ಶರ್ಮಾ! ಕಾರಣ ಇಲ್ಲಿದೆ
ಶ್ರೀಲಂಕಾ ವಿರುದ್ಧದ 3 ಏಕದಿನ ಸರಣಿಯಲ್ಲಿ ಭಾರತ 0-1 ಅಂತರದಲ್ಲಿ ಹಿನ್ನಡೆಯಲ್ಲಿದೆ. ಆದರೆ, ಕೊನೆಯ ಏಕದಿನ ಪಂದ್ಯದಲ್ಲಿ ಪುನರಾಗಮನಕ್ಕೆ ಅವಕಾಶವಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.