ಅಯ್ಯರ್-ಇಶಾನ್ ಅವರಂತೆ ಹಾರ್ದಿಕ್ ಪಾಂಡ್ಯ ಬಿಸಿಸಿಐ ಒಪ್ಪಂದದಿಂದ ಹೊರಗುಳಿದಿಲ್ಲವೇಕೆ? ಅಸಲಿ ಕಾರಣ ಇದು!
Hardik Pandya: ಬಿಸಿಸಿಐ ಬುಧವಾರ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು.. ಇದು ಹಲವು ಹಿರಿಯ ಆಟಗಾರರಿಗೆ ದೊಡ್ಡ ಶಾಕ್ ನೀಡಿದ್ದು.. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಈ ಒಪ್ಪಂದದಿಂದ ಹೊರಗುಳಿದಿದ್ದಾರೆ.. ಆದರೆ ಇದೀಗ ಬಿಸಿಸಿಐ ಹಾರ್ದಿಕ್ ಪಾಂಡ್ಯ ಅವರನ್ನು ಈ ಒಪ್ಪಂದದಿಂದ ದೂರ ಇಡದೇ ಇರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ..
BCCI Contract List: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದೆ. ಇದರಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಎಂದರೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರು ಈ ಒಪ್ಪಂದಿಂದ ಹೊರಗುಳಿದಿದ್ದಾರೆ.. ಇಬ್ಬರೂ ಕ್ರಿಕೆಟ್ ಮಂಡಳಿಯ ಮಾತನ್ನು ದಿಕ್ಕರಿಸಿ.. ಪತ್ರಗಳನ್ನು ಬರೆದರೂ, ರಣಜಿ ಟ್ರೋಫಿ 2024 ರಲ್ಲಿ ತಂಡಕ್ಕಾಗಿ ಆಡಲಿಲ್ಲ. ಈ ಕಾರಣಕ್ಕೆ ಅವರಿಗೆ ತಕ್ಕ ಪಾಠ ಕಲಿಸಲು ಬಿಸಿಸಿಐ ಅವರನ್ನು ಕೇಂದ್ರ ಗುತ್ತಿಗೆಯಿಂದ ತೆಗೆದುಹಾಕಿದೆ. ಆದರೆ, ಅಷ್ಟರಲ್ಲಿ ಆಡಳಿತ ಮಂಡಳಿ ದ್ವಂದ್ವ ಧೋರಣೆ ಅನುಸರಿಸುತ್ತಿದೆ ಎಂದು ಆರೋಪ ಮಾಡಲಾಗಿತ್ತು..
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ವಿಶ್ವಕಪ್ 2023 ರ ಸಮಯದಲ್ಲಿ ಗಾಯಗೊಂಡು.. ಅಂದಿನಿಂದ ಮೈದಾನದಿಂದ ದೂರ ಉಳಿದಿದ್ದರು. ಇದೆಲ್ಲದರ ಮಧ್ಯೆ ಬರೋಡಾದಲ್ಲಿ ಐಪಿಎಲ್ 2024 ಕ್ಕೆ ತಯಾರಿ ನಡೆಸುತ್ತಿದ್ದಾರೆ ಮತ್ತು ಅವರೊಂದಿಗೆ ಕಿಶನ್ ಕೂಡ ಇದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು.. ಫಿಟ್ ಆದ ನಂತರವೂ ಪಾಂಡ್ಯ ರಣಜಿ ಟ್ರೋಫಿಯಲ್ಲಿ ಆಡದ ಕಾರಣ ಕೇಂದ್ರ ಗುತ್ತಿಗೆಯಿಂದ ಏಕೆ ಕೈಬಿಡಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿತ್ತು.. ಇದೀಗ ಈ ಬಗ್ಗೆ ದೊಡ್ಡ ಅಪ್‌ಡೇಟ್‌ವೊಂದ ಹೊರಬಿದ್ದಿದೆ..
ಇದನ್ನೂ ಓದಿ-IPL 2024 Time Table: ಆರಂಭಿಕ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯದಲ್ಲಿ ಧೋನಿ-ವಿರಾಟ್ ತಂಡಗಳ ಮಧ್ಯೆ ಹಣಾಹಣಿ!
ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಗಳು ದೇಶೀಯ ಕ್ರಿಕೆಟ್ ಆಡುವ ಕುರಿತು ಪಾಂಡ್ಯ ಅವರೊಂದಿಗೆ ಮಾತುಕತೆ ನಡೆಸಿದ್ದು... ವೈಟ್-ಬಾಲ್ ಪಂದ್ಯಾವಳಿಯಲ್ಲಿ ಆಡಲು ಅವರನ್ನು ಕೇಳಲಾಗಿದೆ.. ಪ್ರಸ್ತುತ, ಬಿಸಿಸಿಐ ವೈದ್ಯಕೀಯ ತಂಡದ ಪ್ರಕಾರ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವ ಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ರೆಡ್ ಬಾಲ್ ಕ್ರಿಕೆಟ್ ಆಡಲು ಒತ್ತಾಯಿಸಲಾಗಿಲ್ಲ.. ಇದೇ ಕಾರಣಕ್ಕೆ ಹಾರ್ದಿಕ್ ಅವರು ರಣಜಿ ಟ್ರೋಫಿಯಲ್ಲಿ ಆಡಲಾಗಿಲ್ಲ.. ಯಾವುದೇ ಅಂತರರಾಷ್ಟ್ರೀಯ ಪಂದ್ಯ ನಡೆಯದಿದ್ದರೆ.. ಹಾರ್ದಿಕ್ ಅವರು ವೈಟ್ ಬಾಲ್ ದೇಶೀಯ ಪಂದ್ಯಾವಳಿಯಲ್ಲಿ ಆಡುತ್ತಾರೆ. ಒಂದು ವೇಳೆ ಇದು ಆಗದಿದ್ದರೆ ಅವರ ಕೇಂದ್ರ ಒಪ್ಪಂದವೂ ರದ್ದಾಗುತ್ತದೆ. ತಾವು ಲಭ್ಯವಿದ್ದಾಗ ದೇಶೀಯ ಕ್ರಿಕೆಟ್‌ನಲ್ಲಿ ಆಡುವುದಾಗಿ ಸ್ಟಾರ್ ಆಲ್‌ರೌಂಡರ್ ಭರವಸೆ ನೀಡಿದ್ದಾರೆ.
A ಗ್ರೇಡ್ ಸ್ಥಾನ ಪಡೆದ ಹಾರ್ದಿಕ್ ಪಾಂಡ್ಯ:
ಭಾರತೀಯ ಕ್ರಿಕೆಟ್ ಮಂಡಳಿ ಹಾರ್ದಿಕ್ ಅವರನ್ನು ಗ್ರೇಡ್ A ವರ್ಗಕ್ಕೆ ಸೇರಿಸಿದೆ. ಇದರಡಿ ಬಿಸಿಸಿಐನಿಂದ ವಾರ್ಷಿಕ 5 ಕೋಟಿ ರೂ. ಪಡೆಯುತ್ತಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.