ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್‌ ಮತ್ತು ಏಕದಿನ ಸರಣಿ ಕಳೆದುಕೊಂಡಿದ್ದರೂ ಭಯಪಡುವ ಅಗತ್ಯವಿಲ್ಲ. ಈ ತಾತ್ಕಾಲಿಕ ಆಘಾತದಿಂದ ತಂಡವು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಎಲ್ಲಾ 3 ಮಾದರಿಯ ನಾಯಕತ್ವದಿಂದ ಕೆಳಗಿಳಿದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಆದರೆ ರಾಹುಲ್ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸೋಲು ಅನುಭವಿಸುವ ಮೂಲಕ ವೈಟ್ ವಾಶ್ ಆಗಿದೆ. ಟೆಸ್ಟ್ ಸರಣಿಯಲ್ಲಿಯೂ 1-2 ಅಂತರದಲ್ಲಿ ಸೋಲು ಕಂಡಿತ್ತು.


COMMERCIAL BREAK
SCROLL TO CONTINUE READING

 ಟೀಂ ಇಂಡಿಯಾ ಏಕಾಏಕಿ ಕೆಟ್ಟದಾಗಿ ಆಡುತ್ತಿರುವುದೇಕೆ?


ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ, ‘ಸರಣಿ ಸೋತ ನಂತರ ಜನರು ಟೀಕಿಸಲು ಪ್ರಾರಂಭಿಸುತ್ತಾರೆ. ಪ್ರತಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಸೋಲು ಗೆಲುವುಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಸೋತಿರಬಹುದು. ಆದರೆ ಇಡೀ ತಂಡದ ಪ್ರದರ್ಶನ ಮಟ್ಟ ಕುಸಿದಿದೆ ಎಂದು ನಂಬಲು ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.


ಇದನ್ನೂ ಓದಿ: ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ


ಈ ದೊಡ್ಡ ಕಾರಣ ನೀಡಿದ ರವಿಶಾಸ್ತ್ರಿ


ಮುಂದುವರಿದು ಮಾತನಾಡಿರುವ ರವಿಶಾಸ್ತ್ರಿ, ‘ಭಾರತ ತಂಡದ ಪ್ರದರ್ಶನ ಇದ್ದಕ್ಕಿದ್ದಂತೆ ಹೇಗೆ ಕುಸಿಯುತ್ತದೆ? 5 ವರ್ಷಗಳಿಂದ ಟೀಂ ಇಂಡಿಯಾ ವಿಶ್ವದ ನಂ.1 ತಂಡವಾಗಿತ್ತು. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಮತ್ತು ಈ ವೈಫಲ್ಯವು ತಾತ್ಕಾಲಿಕವಾಗಿದೆ. ಕಳೆದ 5 ವರ್ಷಗಳಿಂದ ಗೆಲುವಿನ ಪ್ರಮಾಣ ಶೇ.65ರಷ್ಟಿದ್ದು, ಇದರ ಬಗ್ಗೆ ಚಿಂತಿಸಲು ಏನಿದೆ. ಎದುರಾಳಿ ತಂಡಗಳು ಚಿಂತಿಸಬೇಕಷ್ಟೇ. ಟೆಸ್ಟ್ ಸರಣಿಯಲ್ಲಿ ಸೋತ 1 ದಿನದ ನಂತರ ತಂಡದ ನಾಯಕತ್ವದಿಂದ ಕೆಳಗಿಳಿಯಲು ಕೊಹ್ಲಿ ನಿರ್ಧರಿಸಿದರು. ಇದು ವೈಯಕ್ತಿಕ ನಿರ್ಧಾರವಾಗಿದ್ದು, ಅಂತಹ ನಿರ್ಧಾರಗಳನ್ನು ಗೌರವಿಸಬೇಕು’ ಅಂತಾ ಹೇಳಿದ್ದಾರೆ.   


‘ಇದು ಕೊಹ್ಲಿ ತೆಗೆದುಕೊಂಡ ನಿರ್ಧಾರ. ಅವರ ನಿರ್ಧಾರವನ್ನು ನಾವೆಲ್ಲರೂ ಗೌರವಿಸಬೇಕು. ಎಲ್ಲದಕ್ಕೂ ಒಂದು ಸಮಯವಿದೆ. ಈ ಹಿಂದೆಯೂ ಅನೇಕ ದೊಡ್ಡ ಆಟಗಾರರು ತಮ್ಮ ಬ್ಯಾಟಿಂಗ್‌ನತ್ತ ಗಮನಹರಿಸಲು ನಾಯಕತ್ವವನ್ನು ತೊರೆದಿದ್ದಾರೆ. ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಅಥವಾ ಎಂ.ಎಸ್.ಧೋನಿ ಮತ್ತು ಈಗ ವಿರಾಟ್ ಕೊಹ್ಲಿ ಆಗಿದ್ದಾರೆಂದು ಶಾಸ್ತ್ರಿ ಹೇಳಿದ್ದಾರೆ.


ಇದನ್ನೂ ಓದಿ: IPL 2022 ಗೆ ಎಂಟ್ರಿ ನೀಡಲು ಲಕ್ನೋ ಫ್ರಾಂಚೈಸ್ ಹೆಸರು ಫೈನಲ್! ಕೆಎಲ್ ರಾಹುಲ್ ಟೀಂ ಕ್ಯಾಪ್ಟನ್


ಕೊಹ್ಲಿ ಬಾಡಿ ಲಾಂಗ್ವೇಜ್ ಬದಲಾಗಿದೆಯೇ?


ನಾಯಕತ್ವ ತೊರೆದ ಬಳಿಕ ಕೊಹ್ಲಿ ಬಾಡಿ ಲಾಂಗ್ವೇಜ್ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ‘ನಾನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಒಂದೂ ಪಂದ್ಯವನ್ನೂ ವೀಕ್ಷಿಸಿಲ್ಲ. ಆದರೆ ವಿರಾಟ್ ಕೊಹ್ಲಿ ಹೆಚ್ಚು ಬದಲಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. 7 ವರ್ಷಗಳ ನಂತರ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದೇನೆ. ನಾನು ಸಾರ್ವಜನಿಕವಾಗಿ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಅಧಿಕಾರಾವಧಿ ಮುಗಿದ ದಿನದಿಂದಲೇ ಸಾರ್ವಜನಿಕ ವೇದಿಕೆಯಲ್ಲಿ ಆಟಗಾರರ ಬಗ್ಗೆ ನಾನು ಮಾತನಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದೆ’ ಅಂತಾ ಹೇಳಿದ್ದಾರೆ.


ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲದ ವಿಚಾರವಾಗಿ ಮಾತನಾಡಿದ ರವಿಶಾಸ್ತ್ರಿ ‘ ಅನೇಕ ದಿಗ್ಗಜ ಆಟಗಾರರು ಕೂಡ ವಿಶ್ವಕಪ್ ಗೆಲ್ಲಲಿಲ್ಲ. ಇದರಿಂದ ಏನಾಯಿತು? ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಕೂಡ ಗೆಲ್ಲಲಿಲ್ಲ. ಹೀಗಾಗಿ ಅವರನ್ನು ಕಳಪೆ ಆಟಗಾರರು ಎನ್ನಲಾಗುತ್ತದೆಯೇ? ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲದಿದ್ದ ಮಾತ್ರಕ್ಕೆ ಕಳಪೆ ಕ್ಯಾಪ್ಟನ್ ಹೇಗಾಗುತ್ತಾರೆ?’ ಅಂತಾ ಶಾಸ್ತ್ರಿ ಹೇಳಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.