ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ

ICC Awards: ಭಾರತದ ಸ್ವಾಶ್‌ಬಕ್ಲಿಂಗ್ ಓಪನರ್ ಸ್ಮೃತಿ ಮಂಧಾನ ಅವರನ್ನು ಐಸಿಸಿ ವರ್ಷದ ಮಹಿಳಾ ಕ್ರಿಕೆಟಿರ್ ಎಂದು ಸೋಮವಾರ ಘೋಷಿಸಿದೆ.

Edited by - Chetana Devarmani | Last Updated : Jan 24, 2022, 04:30 PM IST
  • ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ
  • 2021 ರಲ್ಲಿ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಓಪನರ್
  • ಭಾರತದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಸ್ಮೃತಿ
ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ  title=
ಸ್ಮೃತಿ ಮಂಧಾನ

ನವದೆಹಲಿ: 2021 ರಲ್ಲಿ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಸೂಪರ್ ಸುಪ್ರೀಂ ಪ್ರದರ್ಶನ ತೋರಿದ ಭಾರತದ ಸ್ವಾಶ್‌ಬಕ್ಲಿಂಗ್ ಓಪನರ್ ಸ್ಮೃತಿ ಮಂಧಾನ (Smriti Mandhana) ಅವರನ್ನು ಐಸಿಸಿ ವರ್ಷದ ಮಹಿಳಾ ಕ್ರಿಕೆಟಿರ್ (ICC Women's Cricketer of the Year) ಎಂದು ಸೋಮವಾರ ಘೋಷಿಸಿದೆ.

ಭಾರತದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ಸ್ಮೃತಿ ಕಳೆದ ವರ್ಷ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಅತ್ಯದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅದಕ್ಕಾಗಿಯೇ ಐಸಿಸಿ (ICC) ಅವರನ್ನು ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಗೆ (The Rachael Heyhoe Flint Trophy) ಆಯ್ಕೆ ಮಾಡಿದೆ. 

ಇದನ್ನೂ ಓದಿ: Virat Kohli:ರಾಷ್ಟ್ರಗೀತೆಗೆ ಅಗೌರವ ತೋರಿದ್ದಕ್ಕಾಗಿ ಟ್ರೋಲ್ ಆದ ವಿರಾಟ್​ ಕೊಹ್ಲಿ

ಭಾರತೀಯ ಮಹಿಳಾ ಕ್ರಿಕೆಟ್ ತಂಡವು (Indian women's cricket team) 2021 ರಲ್ಲಿ ಮಿಶ್ರ ಪ್ರದರ್ಶನ ನೀಡಿದೆ. ಆದರೆ ಸ್ಮೃತಿ ಮಂಧಾನ ವರ್ಷವಿಡೀ ಉತ್ತಮ ಆಟ ಆಡಿದ್ದಾರೆ. ಭಾರತವು ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಿತ್ತು. ಎಂಟು ಪಂದ್ಯಗಳಲ್ಲಿ ಭಾರತ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿತು. ಆದರೆ ಎರಡೂ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಪಾತ್ರ ಮಹತ್ವದ್ದಾಗಿತ್ತು.

ಭಾರತ ಎರಡನೇ ODIನಲ್ಲಿ 158 ರನ್‌ಗಳನ್ನು ಬೆನ್ನಟ್ಟಿದ ಕಾರಣ ಅವರು ಅಜೇಯ 80 ರನ್ ಗಳಿಸಿದರು, ಅದು ಅವರಿಗೆ ಸರಣಿಯನ್ನು ಸಮಗೊಳಿಸಲು ಸಹಾಯ ಮಾಡಿತು. ಸರಣಿಯ ಕೊನೆಯ T20 ಪಂದ್ಯದಲ್ಲಿ ಅಜೇಯ 48 ರನ್ ಗಳಿಸಿದರು.

 

 

25 ವರ್ಷ ವಯಸ್ಸಿನ ಮಂಧಾನ ಡ್ರಾನಲ್ಲಿ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್‌ಗಳ ಗಳಿಸಿದರು. ಏಕದಿನ ಸರಣಿಯಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು. ಇದರಲ್ಲಿ 49 ರನ್ ಗಳಿಸಿದ್ದರು. 

ಇಂಗ್ಲೆಂಡ್ ಪ್ರವಾಸದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮಂಧಾನ 86 ರನ್ ಗಳಿಸಿದ್ದರು. ಆಸ್ಟ್ರೇಲಿಯ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಟೆಸ್ಟ್‌ನಲ್ಲಿ ಸ್ಮೃತಿ ಪಡೆದ ಮೊದಲ ಶತಕ ಇದಾಗಿತ್ತು.

ಇದನ್ನೂ ಓದಿ: Watch:'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಕ್ರಿಕೆಟರ್​ ಡೇವಿಡ್​ ವಾರ್ನರ್

ಸ್ಮೃತಿ ಮಂಧಾನ ಭಾರತ ಪರ ನಾಲ್ಕು ಟೆಸ್ಟ್, 62 ODI ಮತ್ತು 84 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 46.42 ಸರಾಸರಿಯಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳು ಸೇರಿ 325 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 41.70 ಸರಾಸರಿಯಲ್ಲಿ ನಾಲ್ಕು ಶತಕಗಳು ಮತ್ತು 19 ಅರ್ಧ ಶತಕಗಳನ್ನು ಸೇರಿ 2377 ರನ್ ಗಳಿಸಿದ್ದಾರೆ. T20ಯಲ್ಲಿ 25.93 ಸರಾಸರಿಯಲ್ಲಿ ನಾಲ್ಕು ಅರ್ಧ ಶತಕ ಸೇರಿ 1971 ರನ್ ಗಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News