IND vs SL ODI: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯ ಟೈ ಆಗಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 231 ರನ್‌ಗಳ ಗುರಿ ನೀಡಿತು. ಆದರೆ ಭಾರತ ತಂಡ 230 ರನ್‌ʼಗಳಿಗೆ ಆಲೌಟ್ ಆಗುವ ಮೂಲಕ ರೋಚಕ ಟೈನಲ್ಲಿ ಕೊನೆಗೊಂಡಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಅವನೆಂದರೆ ನನಗಿಷ್ಟ": ಡಿವೋರ್ಸ್ ಬೆನ್ನಲ್ಲೇ ಅಣ್ಣನ ಗೆಳೆಯನ ಮೇಲೆಯೇ ಖ್ಯಾತ ನಟಿಗೆ ಪ್ರೀತಿ! ಸೆನ್ಸೇಷನಲ್‌ ಹೇಳಿಕೆ ವೈರಲ್


ಈಗ ಎರಡನೇ ಪಂದ್ಯ ಆಗಸ್ಟ್ 4 ರಂದು ಅಂದರೆ ನಾಳೆ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಅತಿ ದೊಡ್ಡ ಮ್ಯಾಚ್ ವಿನ್ನರ್ ತಂಡಕ್ಕೆ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.


ಎರಡನೇ ಏಕದಿನ ಪಂದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಎಂಟ್ರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಮೊದಲ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಹೊರಗುಳಿದಿದ್ದರು. ಇದಕ್ಕೂ ಮುನ್ನ ಪಂತ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಸರಣಿ ಗೆಲ್ಲಬೇಕಾದರೆ ಭಾರತ ಎರಡನೇ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕು.


ಇದನ್ನೂ ಓದಿ: ಐಶ್ವರ್ಯಾಗಾಗಿ ಬಾಲಿವುಡ್‌ʼನ ಇಬ್ಬರು ಸ್ಟಾರ್‌ ನಟರ ಮಧ್ಯೆ ನಡೆಯಿತಾ ಹೊಡೆದಾಟ!?


ಇನ್ನೊಂದೆಡೆ ಎರಡನೇ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ ಶಿವಂ ದುಬೆ ಹೊರಗುಳಿಯುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯದಲ್ಲಿ ದುಬೆ 4 ಓವರ್‌ʼಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇನ್ನು ಬ್ಯಾಟಿಂಗ್ʼನಲ್ಲಿ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 25 ರನ್ ಗಳಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ