ಐಶ್ವರ್ಯಾಗಾಗಿ ಬಾಲಿವುಡ್‌ʼನ ಇಬ್ಬರು ಸ್ಟಾರ್‌ ನಟರ ಮಧ್ಯೆ ನಡೆಯಿತಾ ಹೊಡೆದಾಟ!? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸಂಗತಿ ಬಯಲು

Entertainment News: ಬಾಲಿವುಡ್‌ ಕಿಂಗ್ ಶಾರುಖ್ ಖಾನ್ ಮತ್ತು ಭಾಯಿಜಾನ್ ಸಲ್ಮಾನ್ ಖಾನ್ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿದ್ದ ಕಾಲವೊಂದಿತ್ತು.

Written by - Bhavishya Shetty | Last Updated : Aug 3, 2024, 07:41 PM IST
    • ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ
    • ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸಂಬಂಧವು 1990 ರ ದಶಕದಲ್ಲಿ ಚರ್ಚೆಯ ವಿಷಯವಾಗಿತ್ತು.
    • ಐಶ್ವರ್ಯಾ ಈ ಹಿಂದೆ ಶಾರುಖ್ ಖಾನ್ ಜೊತೆ ಚಲ್ತೇ ಚಲ್ತೆ ಚಿತ್ರದಲ್ಲಿ ನಟಿಸಿದ್ದರು
ಐಶ್ವರ್ಯಾಗಾಗಿ ಬಾಲಿವುಡ್‌ʼನ ಇಬ್ಬರು ಸ್ಟಾರ್‌ ನಟರ ಮಧ್ಯೆ ನಡೆಯಿತಾ ಹೊಡೆದಾಟ!? ವಿಚ್ಛೇದನ ವದಂತಿ ನಡುವೆ ಶಾಕಿಂಗ್‌ ಸಂಗತಿ ಬಯಲು title=
File Photo

Entertainment News: ಬಾಲಿವುಡ್ʼನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿರುವುದು ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ. ಈ ಎಲ್ಲದರ ಮಧ್ಯೆ ಇದೀಗ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದ್ದು, ಐಶ್ವರ್ಯಾಗಾಗಿ ಇಬ್ಬರು ನಟರ ಮಧ್ಯೆ ಜಗಳವಾಗಿತ್ತು ಎಂಬುದು.

ಇದನ್ನೂ ಓದಿ: "ಅವನೆಂದರೆ ನನಗಿಷ್ಟ": ಡಿವೋರ್ಸ್ ಬೆನ್ನಲ್ಲೇ ಅಣ್ಣನ ಗೆಳೆಯನ ಮೇಲೆಯೇ ಖ್ಯಾತ ನಟಿಗೆ ಪ್ರೀತಿ! ಸೆನ್ಸೇಷನಲ್‌ ಹೇಳಿಕೆ ವೈರಲ್

ಬಾಲಿವುಡ್‌ ಕಿಂಗ್ ಶಾರುಖ್ ಖಾನ್ ಮತ್ತು ಭಾಯಿಜಾನ್ ಸಲ್ಮಾನ್ ಖಾನ್ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿದ್ದ ಕಾಲವೊಂದಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಸೆಲೆಬ್ರಿಟಿಗಳಿಗೆ ದೀರ್ಘಕಾಲದ ಸಂಬಂಧ ಮುರಿದುಬಿದ್ದಿತ್ತು. ಅವರ ಈ ಜಗಳ ವೃತ್ತಿಪರ ಜೀವನದ ವಿಷಯಗಳು ಮಾತ್ರವಲ್ಲದೆ,  ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತ್ತು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ʼನಿಂದ ಹೊರಬರ್ತಿದ್ದಾರೆ ಹಾರ್ದಿಕ್‌ ಪಾಂಡ್ಯ!? ಒಂದೇ ವರ್ಷಕ್ಕೆ ಸಾಕಾಯ್ತಾ ಸಹವಾಸ

ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸಂಬಂಧವು 1990 ರ ದಶಕದಲ್ಲಿ  ಚರ್ಚೆಯ ವಿಷಯವಾಗಿತ್ತು. ಐಶ್ವರ್ಯಾ ಈ ಹಿಂದೆ ಶಾರುಖ್ ಖಾನ್ ಜೊತೆ ಚಲ್ತೇ ಚಲ್ತೆ ಚಿತ್ರದಲ್ಲಿ ನಟಿಸಿದ್ದರು. ನಂತರ ಅವರ ಸ್ಥಾನಕ್ಕೆ ರಾಣಿ ಮುಖರ್ಜಿ ಬಂದರು. ಶೂಟಿಂಗ್ ವೇಳೆ ಸಲ್ಮಾನ್ ಸಾಕಷ್ಟು ಗಲಾಟೆ ಸೃಷ್ಟಿಸಿದ್ದರು ಎನ್ನಲಾಗಿದೆ. ಶಾರುಖ್ ಐಶ್ವರ್ಯಾ ಜೊತೆ ತುಂಬಾ ಸ್ನೇಹದಿಂದ ವರ್ತಿಸಿರುವುದೇ ಇದಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಐಶ್ವರ್ಯಾ ವಿಚಾರದಲ್ಲಿ ಬಹಳಷ್ಟು ಪೊಸೆಸಿವ್‌ ಆಗಿದ್ದರಂತೆ ಸಲ್ಮಾನ್‌ ಖಾನ್.‌ ಈ ವಿಚಾರದಲ್ಲಿ ನೊಂದಿದ್ದ ಐಶ್‌ ಅವರ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರು ಎಂದೂ ಸಹ ಚಾಲ್ತಿಯಲ್ಲಿದ್ದ ವಿಚಾರ. ಈ ವರದಿಗಳು ಸತ್ಯಕ್ಕೆ ಎಷ್ಟು ಸಮೀಪ ಎಂಬುದು ತಿಳಿಯದ ಸಂಗತಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News