India vs Sri Lanka, Number 5 in Asia Cup Final: ವೇದಿಕೆ ಸಿದ್ಧವಾಗಿದೆ… ತಂಡಗಳು ಬದ್ಧವಾಗಿವೆ… ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಪ್ರೋತ್ಸಾಹ ನೀಡಲು ಕಾಯುತ್ತಿದ್ದಾರೆ. ಹೌದು, ಕಡೆಗೂ ಏಷ್ಯಾಕಪ್ ಫೈನಲ್ ಬಂದೇಬಿಡ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್-2023 ರ ಫೈನಲ್ ಪಂದ್ಯ ಇಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಈ ಪಂದ್ಯದಲ್ಲಿ ಭಾರತದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ 5 ನೇ ಸ್ಥಾನದಲ್ಲಿರುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 13 ವರ್ಷಗಳ ಬಳಿಕ ಏಷ್ಯಾಕಪ್ ಫೈನಲ್’ನಲ್ಲಿ ಒಟ್ಟಾಗಿ ಆಡಲಿದ್ದಾರೆ ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಆಟಗಾರರು!


ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಏಷ್ಯಾ ಕಪ್ ಟ್ರೋಫಿಗಾಗಿ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ತೊಂದರೆ ಉಂಟುಮಾಡಬಹುದು ಎಂದು ಹೇಳಲಾಗುತ್ತಿದೆ. ಶೇ. 80ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಒಂದು ವೇಳೆ ಸೆಪ್ಟೆಂಬರ್ 17 ರಂದು ಪೂರ್ಣಗೊಳಿಸಲಾಗದಿದ್ದರೆ, ಅದನ್ನು ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 18ಕ್ಕೆ ವಿಸ್ತರಿಸಲಾಗುತ್ತದೆ.


ರೋಹಿತ್ ಶರ್ಮಾ ನಾಯಕತ್ವದ ತಂಡ ಸೂಪರ್-4ರಲ್ಲಿ ಅಗ್ರಸ್ಥಾನ ಪಡೆದು ಫೈನಲ್‌’ಗೆ ಲಗ್ಗೆ ಇಟ್ಟಿತು. ಮತ್ತೊಂದೆಡೆ ಶ್ರೀಲಂಕಾವು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಫೈನಲ್‌ಗೆ ಟಿಕೆಟ್ ಗೆದ್ದುಕೊಂಡಿತು.


ಪ್ಲೇಯಿಂಗ್ 11ರಲ್ಲಿ ಬದಲಾವಣೆ:


ಶ್ರೀಲಂಕಾ ವಿರುದ್ಧದ ಪಂದ್ಯದ ಪ್ಲೇಯಿಂಗ್-11 ನಲ್ಲಿ ಬದಲಾವಣೆಗಳಾಗಿವೆ ಎಂದು ಹೇಳಲಾಗುತ್ತಿದೆ. ಇನ್ನು ಬಾಂಗ್ಲಾದೇಶ ವಿರುದ್ಧದ ಸೂಪರ್-4 ಸುತ್ತಿನ ಕೊನೆಯ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ತಿಲಕ್ ವರ್ಮಾ ಚೊಚ್ಚಲ ಅವಕಾಶ ಪಡೆದರೆ, ಸೂರ್ಯಕುಮಾರ್ ಯಾದವ್ ಕೂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು.


4 ಮತ್ತು 5 ನೇ ಕ್ರಮಾಂಕದಲ್ಲಿ ಆಡುವವರಾರು?


ಈ ಪಂದ್ಯದಲ್ಲಿ 4 ಮತ್ತು 5ನೇ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಈಗ ಪ್ರಶ್ನೆಯಾಗಿದೆ. ಶ್ರೇಯಸ್ ಅಯ್ಯರ್ ಅವರನ್ನು 4ನೇ ಕ್ರಮಾಂಕಕ್ಕೆ ಎಂದು ಪರಿಗಣಿಸಲಾಗಿತ್ತು. ಆದರೆ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ, ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಹುಲ್ ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದ್ದರು. ಇದೀಗ ಫೈನಲ್‌’ನಲ್ಲಿ 4 ನೇ ಸ್ಥಾನವನ್ನು ಖಚಿತಪಡಿಸಿದ್ದಾರೆ.


ಏಷ್ಯಾಕಪ್‌’ನ ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ 5ನೇ ಸ್ಥಾನದಲ್ಲಿ ನಿಲ್ಲುವುದು ಖಚಿತ ಎಂದು ಹೇಳಲಾಗಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ ಮತ್ತು ಅಯ್ಯರ್ ಅನುಪಸ್ಥಿತಿಯಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಇವರನ್ನು ಇಳಿಸುವ ಸಾಧ್ಯತೆ ಇದೆ.


25 ವರ್ಷದ ಇಶಾನ್ ಪಾಕಿಸ್ತಾನ ವಿರುದ್ಧ 82 ರನ್ ಮತ್ತು ಶ್ರೀಲಂಕಾ ವಿರುದ್ಧ 33 ರನ್ ಸೇರಿಸಿದರು. ಬಾಂಗ್ಲಾದೇಶ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.


ಇದನ್ನೂ ಓದಿ:“ನಿನಗೆ ಹುಚ್ಚು ಹಿಡಿದಿದೆಯೇ..?”: ಸಾರ್ವಜನಿಕ ಸ್ಥಳದಲ್ಲಿಯೇ ಶುಭ್ಮನ್’ಗೆ ಹೀಗೆಂದಿದ್ದೇಕೆ ರೋಹಿತ್ ಶರ್ಮಾ..!


ಏಷ್ಯಾಕಪ್ ಫೈನಲ್‌’ಗೆ ಭಾರತದ ಸಂಭಾವ್ಯ ಪ್ಲೇಯಿಂಗ್-11:


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ