“ನಿನಗೆ ಹುಚ್ಚು ಹಿಡಿದಿದೆಯೇ..?”: ಸಾರ್ವಜನಿಕ ಸ್ಥಳದಲ್ಲಿಯೇ ಶುಭ್ಮನ್’ಗೆ ಹೀಗೆಂದಿದ್ದೇಕೆ ರೋಹಿತ್ ಶರ್ಮಾ..!

Rohit Sharma-Shubman Gill Argument: ಇಂದು ಅಂದರೆ ಭಾನುವಾರ, ಸೆಪ್ಟೆಂಬರ್ 17 ರಂದು, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ ಟ್ರೋಫಿಗಾಗಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

Written by - Bhavishya Shetty | Last Updated : Sep 17, 2023, 08:58 AM IST
    • ಶ್ರೀಲಂಕಾ ವಿರುದ್ಧ ಭಾರತ ಇಂದು ಅಂದರೆ ಸೆಪ್ಟೆಂಬರ್ 17 ರಂದು ಆಡಬೇಕಿದೆ
    • ಭಾರತ ಸೂಪರ್-4ರಲ್ಲಿ ಅಗ್ರಸ್ಥಾನ ಪಡೆದು ಫೈನಲ್‌’ಗೆ ಲಗ್ಗೆ ಇಟ್ಟಿದೆ
    • ವೈರಲ್ ಆಗುತ್ತಿರುವ ವೀಡಿಯೊ ಎಲ್ಲಿಯದು? ಯಾವ ಸಂದರ್ಭದ್ದು? ಎಂಬುದು ಖಿಚಿತವಾಗಿಲ್ಲ.
“ನಿನಗೆ ಹುಚ್ಚು ಹಿಡಿದಿದೆಯೇ..?”: ಸಾರ್ವಜನಿಕ ಸ್ಥಳದಲ್ಲಿಯೇ ಶುಭ್ಮನ್’ಗೆ ಹೀಗೆಂದಿದ್ದೇಕೆ ರೋಹಿತ್ ಶರ್ಮಾ..!  title=
Rohit Sharma-Shubman Gill Video

Rohit Sharma-Shubman Gill Argument: ಪ್ರಬಲ ಆರಂಭಿಕ ಆಟಗಾರ ರೋಹಿತ್ ಶರ್ಮಾ ಪ್ರಸ್ತುತ ಕೊಲಂಬೊದಲ್ಲಿದ್ದಾರೆ, ಟೀಮ್ ಇಂಡಿಯಾ ಏಷ್ಯಾ ಕಪ್’ನ ಅಂತಿಮ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಇಂದು ಅಂದರೆ ಸೆಪ್ಟೆಂಬರ್ 17 ರಂದು ಆಡಬೇಕಿದೆ. ಈ ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ಯಾರೂ ನಂಬಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: 13 ವರ್ಷಗಳ ಬಳಿಕ ಏಷ್ಯಾಕಪ್ ಫೈನಲ್’ನಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಆಟಗಾರರು

ಇಂದು ಅಂದರೆ ಭಾನುವಾರ, ಸೆಪ್ಟೆಂಬರ್ 17 ರಂದು, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ ಟ್ರೋಫಿಗಾಗಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 17 ರಂದು ಆಟವನ್ನು ಪೂರ್ಣಗೊಳಿಸಲಾಗದಿದ್ದರೆ ಅದನ್ನು ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 18 ರಂದು ಮುಂದುವರಿಸಲಾಗುತ್ತದೆ.

ಭಾರತ ಸೂಪರ್-4ರಲ್ಲಿ ಅಗ್ರಸ್ಥಾನ ಪಡೆದು ಫೈನಲ್‌’ಗೆ ಲಗ್ಗೆ ಇಟ್ಟಿದೆ. ಇದೇ ವೇಳೆ ದಸುನ್ ಶನಕ ನಾಯಕತ್ವದ ತಂಡ ಪಾಕಿಸ್ತಾನವನ್ನು ಸೋಲಿಸಿ ಫೈನಲ್ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ.

ರೋಹಿತ್ ಮತ್ತು ಗಿಲ್ ವಿಡಿಯೋ…

 

ವೈರಲ್ ಆಗುತ್ತಿರುವ ವೀಡಿಯೊ ಎಲ್ಲಿಯದು? ಯಾವ ಸಂದರ್ಭದ್ದು? ಎಂಬುದು ಖಿಚಿತವಾಗಿಲ್ಲ. ಆದರೆ ಇದರಲ್ಲಿ ಶುಭಮನ್ ಮತ್ತು ರೋಹಿತ್ ಕಾಣಿಸಿಕೊಂಡಿದ್ದಾರೆ. ಲಿಫ್ಟ್ ಬಳಿ ನಿಂತಿದ್ದ ರೋಹಿತ್ ಬಳಿಗೆ ಹೋಗಿ ಶುಭ್‌ಮನ್ ಏನೋ ಹೇಳಿದಾಗ, ಕೋಪಗೊಂಡ ರೋಹಿತ್  “ನಿನಗೆ ಹುಚ್ಚು ಹಿಡಿದಿದೆಯೇ?” ಎಂದು ಹೇಳಿದ್ದಾರೆ. ರೋಹಿತ್‌’ಗೆ ಕೋಪ ತರಿಸುವಂತೆ ಶುಭ್ಮನ್ ಏನು ಹೇಳಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ.

ಇದನ್ನೂ ಓದಿ: 2026ರವರೆಗೆ ಈ ರಾಶಿಯವರಿಗೆ ಸಿರಿವಂತಿಕೆ ಭಾಗ್ಯ: ನಗ ನಾಣ್ಯ ಉಕ್ಕಿ ಬರಲಿದೆ-ಕಷ್ಟವೇ ಇಲ್ಲದ ಸುಖಜೀವನ ನೀಡಿ ಹರಸುವರು ಶನಿ-ಬುಧ

ರೋಹಿತ್ ಮತ್ತು ಗಿಲ್ ಇದುವರೆಗೆ ಏಷ್ಯಾಕಪ್‌’ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೂಪರ್-4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗಿಲ್ ಶತಕ ಸಿಡಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 6 ರನ್‌’ಗಳಿಂದ ಸೋತಿತ್ತು. ಇನ್ನು, ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಸತತ 3 ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News