ನವದೆಹಲಿ: ಬಿಸಿಸಿಐ ಶೀಘ್ರದಲ್ಲಿಯೇ ದೊಡ್ಡ ಬದಲಾವಣೆ ಮಾಡಲಿದೆ. ಮಾರ್ಚ್ 2ರಂದು ಬಿಸಿಸಿಐ ಸಭೆ ನಡೆಯಲಿದ್ದು, ಇದರಲ್ಲಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ(Sourav Ganguly) ಭವಿಷ್ಯ ನಿರ್ಧಾರವಾಗಲಿದೆ. ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐನಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು.


COMMERCIAL BREAK
SCROLL TO CONTINUE READING

ಮಾರ್ಚ್ 2ರಂದು ಬಿಸಿಸಿಐ ಸಭೆ


ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಆಡಳಿತ ಮಂಡಳಿ ಸಭೆ ನಡೆಸಲಾಗಲಿಲ್ಲ. ಇದೀಗ ಬಿಸಿಸಿಐ ಸಭೆ(BCCI Meeting)ಯಲ್ಲಿ ಸೌರವ್ ಗಂಗೂಲಿ ಮುಖ್ಯಸ್ಥ ಸ್ಥಾನದ ಮುಂದುವರಿಕೆ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಬಗ್ಗೆ ಚರ್ಚೆಯಾಗಬಹುದು. ಸೌರವ್ ಗಂಗೂಲಿ ಮುಖ್ಯಸ್ಥರಾಗಿದ್ದಾಗ ಬಿಸಿಸಿಐ ಹಲವು ಪ್ರಮುಖ ಬದಲಾವಣೆಗಳನ್ನು ಕಂಡಿದೆ. ಅವರ ನಾಯಕತ್ವದಲ್ಲಿ ಆಡಿದ ಹೆಚ್ಚಿನ ಆಟಗಾರರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಯಿತು. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿದೆ. ವಿವಿಎಸ್ ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಜೊತೆ ಗಂಗೂಲಿ ವಾಗ್ವಾದ ನಡೆಯಿತು. ಈ ಮಹತ್ವದ ಸಭೆಯ ನಂತರ ಕ್ರಿಕೆಟ್ ಅಭಿಮಾನಿಗಳು ಬಹಳಷ್ಟು ಬದಲಾವಣೆಗಳನ್ನು ನೋಡಬಹುದು.


ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಮೂವರು ಭಾವಿ ನಾಯಕರನ್ನು ಹೆಸರಿಸಿದ ರೋಹಿತ್ ಶರ್ಮಾ...!


ಸೌರವ್ ಬದಲಿಗೆ ಇಬ್ಬರು ಸ್ಪರ್ಧಿಗಳಿದ್ದಾರೆ


ಸೌರವ್ ಗಂಗೂಲಿ ಅವರ ಕಾಲ ಅಸಾಧಾರಣ ಬ್ಯಾಟ್ಸ್‌ಮನ್ ಮತ್ತು ವರ್ಚಸ್ವಿ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡವು ವಿದೇಶಕ್ಕೆ ಹೋಗಿ ಅನೇಕ ಸರಣಿ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿತ್ತು. ನಿವೃತ್ತಿಯ ನಂತರ ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು, ನಂತರ ಅವರು ಬಿಸಿಸಿಐ ಮುಖ್ಯಸ್ಥರಾದರು. ಅವರ ಅಧಿಕಾರಾವಧಿಯು ವಿವಾದಗಳಿಂದ ಸುತ್ತುವರಿದಿದೆ. ಮಾರ್ಚ್ 2ರಂದು ನಡೆಯಲಿರುವ ಸಭೆಯಲ್ಲಿ ಬಿಸಿಸಿಐನ ಮುಂದಿನ ಮುಖ್ಯಸ್ಥರು ಯಾರು ಎಂಬುದು ನಿರ್ಧಾರವಾಗಲಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಅನೇಕ ಸ್ಪರ್ಧಿಗಳಿದ್ದಾರೆ. ಈ ರೇಸ್‌ನಲ್ಲಿ ಅವರ ಸ್ಥಾನವನ್ನು ಬಿಸಿಸಿಐ ಕಾರ್ಯದರ್ಶಿ ಮತ್ತು ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ(Jay Shah) ಪಡೆದುಕೊಳ್ಳಬಹುದು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರ ಹೆಸರೂ ರೇಸ್‌ನಲ್ಲಿದೆ. ರಾಜೀವ್ ಶುಕ್ಲಾ ಐಪಿಎಲ್‌ನ ಅಧ್ಯಕ್ಷರೂ ಆಗಿದ್ದಾರೆ. ಇದಲ್ಲದೆ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.


ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದು


ಮಾರ್ಚ್ 2ರಂದು ನಡೆಯಲಿರುವ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ರೂಪುರೇಷೆ ಮತ್ತು ಆಟಗಾರರ ಬಗ್ಗೆಯೂ ಚರ್ಚಿಸಬಹುದು. ಕಳಪೆ ಫಾರ್ಮ್ ತೋರಿದ ಆಟಗಾರರಿಗೆ ಗೇಟ್ ಪಾಸ್ ನೀಡಬಹುದು. ಇದೇ ವೇಳೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಗ್ರೇಡ್ ಕೂಡ ಕಡಿಮೆಯಾಗಬಹುದು. ಬಿಸಿಸಿಐ ಮುಖ್ಯಸ್ಥ(BCCI President)ರಾಗಿ ಸೌರವ್ ಗಂಗೂಲಿಯವರೇ ಮುಂದುವರೆಯುತ್ತಾರೋ ಅಥವಾ ಹೊಸ ಮುಖ ಎಂಟ್ರಿಯಾಗುತ್ತದೋ ಕಾದು ನೋಡಬೇಕಿದೆ.


ಇದನ್ನೂ ಓದಿ: 'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.