Harbhajan Singh: ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ರಾಜಕೀಯಕ್ಕೆ ಬರುತ್ತಾರಾ?
ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಹರ್ಭಜನ್ ಅವರ ಮಾಜಿ ಭಾರತೀಯ ಸಹೋದ್ಯೋಗಿ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಫೋಟೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು.
ನವದೆಹಲಿ: ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ(Harbhajan Singh Retirement) ಘೋಷಿಸಿದ್ದಾರೆ. ಭಾರತ ಪರ ಟೆಸ್ಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಬಜ್ಜಿ ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್(Harbhajan Singh) ರಾಜಕೀಯಕ್ಕೆ ಸೇರುತ್ತಾರೆಂಬ ಊಹಾಪೋಹಗಳು ತೀವ್ರವಾಗಿವೆ. ಮುಂಬರುವ 2022ರ ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Election) ದೃಷ್ಟಿಯಿಂದ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಮಾಡಲಾಗುತ್ತಿದೆ.
ಭಜ್ಜಿ ರಾಜಕೀಯಕ್ಕೆ ಬರುತ್ತಾರಾ?
ನಿವೃತ್ತಿ ಘೋಷಣೆಯ ನಂತರ ಹರ್ಭಜನ್ ಸಿಂಗ್ ಅವರು ರಾಜಕೀಯ(Politics)ಕ್ಕೆ ಸೇರಲು ನನಗೆ ಇಷ್ಟವಿಲ್ಲವೆಂದು ಹೇಳುವುದಿಲ್ಲ, ಆದರೆ ಇಂತಹ ಹೆಜ್ಜೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಕಷ್ಟು ಯೋಚಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2022 Mega Auctionನಲ್ಲಿ ಈ ಆಟಗಾರರಿಗೆ ಖರೀದಿದಾರರೇ ಇಲ್ಲ, ಮುಗಿದೇ ಹೋಯಿತು ಇವರ ವೃತ್ತಿ ಜೀವನ
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಯಾವ ಸ್ಥಾನದಲ್ಲಿದ್ದಾರೆ ವಿರಾಟ್ ಕೊಹ್ಲಿ? ಟಿ 20ಯ ಲಿಸ್ಟ್ ನಿಂದಲೇ ಹೊರಕ್ಕೆ
ಪಂಜಾಬ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ?
ರಾಜಕೀಯಕ್ಕೆ ಸೇರುವ ಬಗ್ಗೆ ಹರ್ಭಜನ್ ಸಿಂಗ್ ಬಹಿರಂಗವಾಗಿ ಇನ್ನೂ ಹೇಳಿಲ್ಲ. ಆದರೆ ಅವರ ತಜ್ಞರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ. ಏಕೆಂದರೆ ಅವರಿಗಿರುವ ಕೆಲವು ಕ್ರಿಕೆಟ್ ಮತ್ತು ಮಾಧ್ಯಮ ಬದ್ಧತೆಗಳು ಅವರನ್ನು ಕಾರ್ಯನಿರತವಾಗಿರಿಸುತ್ತದೆ.
ಭಜ್ಜಿ ಕ್ರಿಕೆಟ್ ಸಂಬಂಧಿತ ಕೆಲಸಗಳಲ್ಲಿ ಮುಂದುವರಿಯಲಿದ್ದಾರೆ
ಹರ್ಭಜನ್ ಸಿಂಗ್, ‘ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಆಟದೊಂದಿಗೆ ಸಂಬಂಧ ಹೊಂದಿದ್ದೇನೆ. ನಾನು ಐಪಿಎಲ್(IPL 2022) ತಂಡಗಳಿಗೆ ತರಬೇತಿ ನೀಡಬಹುದು, ಯಾವುದೋ ಒಂದು ತಂಡದ ಮಾರ್ಗದರ್ಶಕನಾಗಬಹುದು ಅಥವಾ ಕೆಲವು ಅನುಭವಿ ಕ್ರಿಕೆಟ್ ಆಡಬಹುದು’ ಅಂತಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.