ನವದೆಹಲಿ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದರೆ, ಆ್ಯಶಸ್ ಸರಣಿಯಲ್ಲಿನ ಅಮೋಘ ಫಾರ್ಮ್ನಿಂದಾಗಿ ಇಂಗ್ಲೆಂಡ್ ನಾಯಕ ಜೋ ರೂಟ್ ಬದಲಿಗೆ ಆಸ್ಟ್ರೇಲಿಯಾದ ಮಾರ್ನಸ್ ಲಬುಸ್ಚಾಗ್ನೆ ವಿಶ್ವದ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್ಗಳ ಪೈಕಿ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
ರ್ಯಾಂಕಿಂಗ್ನಲ್ಲಿ ಕೊಹ್ಲಿ ಸ್ಥಾನ ?
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಆಡಿದ ಕೊಹ್ಲಿ (Virat Kohli) ಮೊದಲು, ಆರನೇ ಸ್ಥಾನದಲ್ಲಿದ್ದರು. ಆದರೆ ಈಗ 756 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಆಶಸ್ ಸರಣಿಯಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ತನ್ನ ಅದ್ಬುತ ಪ್ರದರ್ಶನದ ನಂತರ ಮೊದಲ ಬಾರಿಗೆ ಬ್ಯಾಟ್ಸ್ ಮೆನ್ ಗಳ ಐಸಿಸಿ ಶ್ರೇಯಾಂಕದಲ್ಲಿ (ICC Ranking) ಲ್ಯಾಬುಸ್ಚಾಗ್ನೆ ಅಗ್ರಸ್ಥಾನಕ್ಕೆ ಏರಿದ್ದಾರೆ. ವೃತ್ತಿಜೀವನದ ಅತ್ಯುತ್ತಮ 912 ರೇಟಿಂಗ್ ಅಂಕಗಳೊಂದಿಗೆ, ರೂಟ್ ಅವರನ್ನು ಎರಡನೇ ಸ್ಥಾನಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : South Africa Series: ದಕ್ಷಿಣ ಆಫ್ರಿಕಾ ಪ್ರವಾಸ; ಸರಣಿ ಆರಂಭಕ್ಕೂ ಮೊದಲೇ ರದ್ದುಗೊಳ್ಳುತ್ತದೆಯೇ?
ಲ್ಯಾಬುಸ್ಚಾಗ್ನೆ ಅದ್ಭುತ ಪ್ರದರ್ಶನ :
ಲ್ಯಾಬುಸ್ಚಾಗ್ನೆ (Marnus Labushagne) ಸರಣಿಗೂ ಮೊದಲು ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಬ್ರಿಸ್ಬೇನ್ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾದ ಗೆಲುವಿನಲ್ಲಿ 74 ರನ್ ಗಳಿಸಿದ ನಂತರ ಎರಡು ಸ್ಥಾನ ಮೇಲಕ್ಕೆ ಏರಿದ್ದಾರೆ. ಅಡಿಲೇಡ್ನಲ್ಲಿ ಶತಕ ಮತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಇಂಗ್ಲೆಂಡ್ ಅನ್ನು 275 ರನ್ಗಳಿಂದ ಸೋಲಿಸಿ ಆಶಸ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಇನ್ನು ಮಿಚೆಲ್ ಸ್ಟಾರ್ಕ್ ಎರಡನೇ ಟೆಸ್ಟ್ನಲ್ಲಿ 80 ರನ್ ನೀಡಿ 6 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿ, ಟೆಸ್ಟ್ ಬೌಲರ್ಗಳ ಶ್ರೇಯಾಂಕದ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ20ಯಲ್ಲಿ ಬಾಬರ್ ಕಮಾಲ್ :
ಟಿ20 ಅಂತಾರಾಷ್ಟ್ರೀಯ ಆಟಗಾರರ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam) ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊದಲ ಸ್ಥಾನವನ್ನು ಕಳೆದುಕೊಂಡ ಒಂದು ವಾರದ ನಂತರ ಮತ್ತೆ ತಮ್ಮ ಪ್ರದರ್ಶನದ ಮೂಲಕ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯ ಮತ್ತು ಏಳು ರನ್ ಗಳಿಸಿದ ನಂತರ ಕಳೆದ ವಾರದ ಶ್ರೇಯಾಂಕದ ನವೀಕರಣದಲ್ಲಿ ಅವರು ಎರಡು ಸ್ಥಾನಗಳನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಂತಿಮ T20 ನಲ್ಲಿ, 79 ರನ್ಗಳ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದರು. ಈ ಮೂಲಕ ಪಾಕಿಸ್ತಾನವು ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತು.
ಇದನ್ನೂ ಓದಿ : IPL Mega Auction: ಈ ಆಟಗಾರರನ್ನು ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಬೇಕೆಂದು ಆಕಾಶ್ ಚೋಪ್ರಾ ಬಯಸಿದ್ದಾರೆ
ಇದರೊಂದಿಗೆ, ಅವರು ಡೇವಿಡ್ ಮಲಾನ್ ಅವರೊಂದಿಗೆ ಜಂಟಿಯಾಗಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ ಬ್ಯಾಟ್ಸ್ ಮ್ಯಾನ್ ಗಳ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ 798 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ಸೀಮಿತ ಓವರ್ಗಳ ತಂಡದ ನೂತನ ಉಪನಾಯಕ ಕೆಎಲ್ ರಾಹುಲ್ (KL Rahul) ಐದನೇ ಶ್ರೇಯಾಂಕದ ಅತ್ಯುತ್ತಮ ಭಾರತೀಯ ಆಟಗಾರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.