Indian Cricket Team Ranking: ಟೀ ಇಂಡಿಯಾ ಈ ವರ್ಷ ಏಕದಿನದಲ್ಲಿ ನಂಬರ್-1 ತಂಡವಾಗಲಿದೆಯೇ? ಈ ಕೆಲಸ ಮಾಡಿದ್ರೆ ಇದು ಸಾಧ್ಯ
Indian Cricket Team Ranking: ಭಾರತ ತಂಡ ಪ್ರಸ್ತುತ ICC ODI ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ 110 ಅಂಕ ಹೊಂದಿದೆ. ಭಾರತಕ್ಕಿಂತ ಮೇಲೆ ನ್ಯೂಜಿಲೆಂಡ್ (116), ಇಂಗ್ಲೆಂಡ್ (113) ಮತ್ತು ಆಸ್ಟ್ರೇಲಿಯಾ (112) ತಂಡಗಳು ಕ್ರಮವಾಗಿ ಮೊದಲ, ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ವಿಶೇಷವೆಂದರೆ ನಾಲ್ಕು ತಂಡಗಳ ನಡುವಿನ ಅಂಕಗಳ ಅಂತರ ತೀರಾ ಕಡಿಮೆ.
Indian Cricket Team Ranking: ಮುಂದಿನ ವರ್ಷ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಭಾರತ-ನ್ಯೂಜಿಲೆಂಡ್ ಎರಡೂ ತಂಡಗಳು 2023ರ ODI ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಇಂದು ಮುಂಜಾನೆ 7 ಗಂಟೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಸರಣಿ ಉಳಿಸುವುದರೊಂದಿಗೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ಬಳಸುವ Smartphone ಯಾವುದು ಗೊತ್ತಾ? ಇದರ ಬೆಲೆ ಎಷ್ಟು?
ಭಾರತ ತಂಡ ಪ್ರಸ್ತುತ ICC ODI ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ 110 ಅಂಕ ಹೊಂದಿದೆ. ಭಾರತಕ್ಕಿಂತ ಮೇಲೆ ನ್ಯೂಜಿಲೆಂಡ್ (116), ಇಂಗ್ಲೆಂಡ್ (113) ಮತ್ತು ಆಸ್ಟ್ರೇಲಿಯಾ (112) ತಂಡಗಳು ಕ್ರಮವಾಗಿ ಮೊದಲ, ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ವಿಶೇಷವೆಂದರೆ ನಾಲ್ಕು ತಂಡಗಳ ನಡುವಿನ ಅಂಕಗಳ ಅಂತರ ತೀರಾ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಮೂರನೇ ಏಕದಿನ ಪಂದ್ಯವನ್ನು ಗೆದ್ದರೆ, ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪುತ್ತದೆ. ಜೊತೆಗೆ ಭಾರತವೂ ಕಿವೀಸ್ ವಿರುದ್ಧದ ಸರಣಿಯನ್ನು ಸಮಬಲಗೊಳಿಸುತ್ತದೆ.
ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ತಂಡ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ವರ್ಷ ಶ್ರೇಯಾಂಕದಲ್ಲಿ ಅಗ್ರ 4 ತಂಡಗಳ ಪೈಕಿ ಭಾರತ ಮಾತ್ರ ಏಕದಿನ ಪಂದ್ಯಗಳನ್ನು ಆಡಬೇಕಿದೆ. ಮೂರನೇ ಏಕದಿನ ಪಂದ್ಯದ ಬಳಿಕ ಕಿವೀಸ್ ತಂಡ ವಿಶ್ರಾಂತಿ ಪಡೆಯಲಿದೆ. ಅದೇ ಸಮಯದಲ್ಲಿ, ಪಾಕಿಸ್ತಾನ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿಗಳು ನಡೆಯಲಿವೆ.
ಇದನ್ನೂ ಓದಿ: Pakistan:“ನನ್ನ ಕೈಯಲ್ಲಿ ಬಟ್ಟೆ, ಬೂಟು ಸ್ವಚ್ಚಗೊಳಿಸುತ್ತಿದ್ದ, ಮಸಾಜ್ ಮಾಡಿಸಿಕೊಳ್ಳುತ್ತಿದ್ದ”: ಕ್ರಿಕೆಟಿಗನ ಗಂಭೀರ ಆರೋಪ
ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ನಂತರ ಬಾಂಗ್ಲಾದೇಶ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಬೇಕು. ಹಾಗಾದಾಗ ಮಾತ್ರ ಟೀಂ ಇಂಡಿಯಾ ನ್ಯೂಜಿಲೆಂಡ್‌ನಿಂದ ಹಿಂದಿಕ್ಕಿ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ಇದಕ್ಕಾಗಿ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದ್ದು, ಮಧ್ಯಮ ಕ್ರಮಾಂಕದ ಆಟಗಾರರು ರನ್ ಗಳಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.