Cristiano Ronaldo Smartphone: ಕ್ರೀಡಾ ಜಗತ್ತಿನಲ್ಲಿಯೇ ಅತೀ ಪ್ರಸಿದ್ಧಿ ಪಡೆದಿರುವ ಪಂದ್ಯಾವಳಿ ಅಂದ್ರೆ ಅದು ಫಿಫಾ ವಿಶ್ವಕಪ್. ಸದ್ಯ ಈ ಬಾರಿ ಫಿಫಾ ಕತಾರ್ನಲ್ಲಿ ಆಯೋಜನೆಗೊಂಡಿದೆ. ಫಿಫಾ ವಿಶ್ವಕಪ್ ನಲ್ಲಿ 32 ದೇಶಗಳು ಭಾಗಿಯಾಗಿದ್ದು, ಕಪ್ ಗೆಲ್ಲಲು ಹೋರಾಟ ನಡೆಸುತ್ತಿವೆ. ಈ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೇಮರ್ ಮತ್ತು ಹ್ಯಾರಿ ಕೇನ್ ಕೂಡ ಇದ್ದಾರೆ.
ಇದನ್ನೂ ಓದಿ: Viral Video: ರಣರಂಗವಾಯ್ತು ಫುಟ್ಬಾಲ್ ಮೈದಾನ: ಆಟಗಾರರ ಮಧ್ಯೆ ಮಾರಾಮಾರಿ
ಭಾರತದಲ್ಲಿ ಫುಟ್ಬಾಲ್ ಅಷ್ಟೊಂದು ಜನಪ್ರಿಯ ಕ್ರೀಡೆಯಲ್ಲದಿದ್ದರೂ ಸಹ ಪೋರ್ಚುಗಲ್‌ನ ಸೂಪರ್‌ಸ್ಟಾರ್ ಫುಟ್‌ಬಾಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಅಭಿಮಾನಿಗಳು ರೊನಾಲ್ಡೊ ಜೀವನ ಶೈಲಿಯನ್ನು ಬಹಳಷ್ಟು ಅನುಸರಿಸುತ್ತಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಕಾರುಗಳು ಮತ್ತು ಗ್ಯಾಜೆಟ್‌ಗಳ ಬಗ್ಗೆ ಎಷ್ಟು ಒಲವು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ರೊನಾಲ್ಡೊ ಯಾವ ಸ್ಮಾರ್ಟ್‌ಫೋನ್ ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಇದರಲ್ಲಿರುವ ವೈಶಿಷ್ಟ್ಯಗಳು ಮತ್ತು ಅದರ ಬೆಲೆಯ ಬಗ್ಗೆ ಕೇಳಿದ್ರೆ ನಿಮಗೂ ಆಶ್ಚರ್ಯವಾಗುತ್ತದೆ.
ಕ್ರಿಸ್ಟಿಯಾನೋ ರೊನಾಲ್ಡೊ ಅವರ ಒಂದು ಫೋಟೋ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಹುವಾವೇ ಫೋನ್ ಬಳಸುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೈಬೊದಲ್ಲಿ ಸಿನಾ ಡಿಜಿಟಲ್ ಪೋಸ್ಟ್ ಮಾಡಿದೆ. ಕಾರಿನಲ್ಲಿ ಇರಿಸಲಾಗಿರುವ ಮೊಬೈಲ್ Huawei Mate RS ಪೋರ್ಷೆ ವಿನ್ಯಾಸ ಆವೃತ್ತಿಯಂತೆ ಕಾಣುತ್ತದೆ. ಈ ಫೋಟೋವನ್ನು 2021 ರಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ವೈರಲ್ ಆಗುತ್ತಿರುವ ಫೋಟೋ:
ಕ್ರಿಸ್ಟಿಯಾನೋ ರೊನಾಲ್ಡೊ 8 ಸ್ಮಾರ್ಟ್ ಫೋನ್ ಬಳಸುತ್ತಾರೆ ಎನ್ನಲಾಗಿದೆ. ಹುವಾವೇ ಮೇಟ್ ಆರ್ಎಸ್ ಪೋರ್ಷೆ ಡಿಸೈನ್ ಎಡಿಷನ್ ಫೋನ್ ನ್ಯಾವಿಗೇಷನ್ ಉದ್ದೇಶಕ್ಕಾಗಿ ಬಳಸುತ್ತಿರಬಹುದು. ಇನ್ನುಳಿದ ಫೋನ್‌ಗಳು ಆಪಲ್ ಉತ್ಪನ್ನಗಳಾಗಿರಬಹುದು ಎಂದು ಊಹಿಸಲಾಗಿದೆ. ರೊನಾಲ್ಡೊ (ಕ್ರಿಸ್ಟಿಯಾನೊ ರೊನಾಲ್ಡೊ) ಪೋರ್ಷೆ ಕಾರನ್ನು ಓಡಿಸುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದು ಮತ್ತು ಹುವಾವೇ ಮೇಟ್ ಆರ್ಎಸ್ ಪೋರ್ಷೆ ಡಿಸೈನ್ ಎಡಿಷನ್ ಫೋನ್ ಅನ್ನು ಮೇಲ್ಭಾಗದಲ್ಲಿ ಇರಿಸಲಾಗಿದೆ.
ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮೊದಲ ಆಯ್ಕೆ ಪೋರ್ಷೆ:
ರೊನಾಲ್ಡೊ (ಕ್ರಿಸ್ಟಿಯಾನೋ ರೊನಾಲ್ಡೊ) ಪೋರ್ಷೆ ಕಾರನ್ನು ತುಂಬಾ ಇಷ್ಟಪಡುತ್ತಾರೆ. 2018 ರಲ್ಲಿ, Huawei ಪೋರ್ಷೆ 911nGT 3 RS ನೊಂದಿಗೆ ಪೋರ್ಷೆ ವಿನ್ಯಾಸದ ಫೋನ್ ಅನ್ನು ಬಿಡುಗಡೆ ಮಾಡಿತ್ತು. Huawei ಪೋರ್ಷೆಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಈ ಕಾರಿಗೆ ಫೋನ್ ಅನ್ನು ಕಸ್ಟಮೈಸ್ ಮಾಡಿದೆ. ಪೋರ್ಷೆ ಕಾರಿನ ಜೊತೆಗೆ ಫೋನ್ ಕೂಡ ನೀಡುವ ಸಾಧ್ಯತೆ ಇದೆ.
Huawei Mate RS ಪೋರ್ಷೆ ವಿನ್ಯಾಸ ಆವೃತ್ತಿಯು 40MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಫೋನ್ 6GB RAM + 512 ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ, ಇದರ ಬೆಲೆ 12,999 ಯುವಾನ್ (ರೂ. 1,47,217).
ಇದನ್ನೂ ಓದಿ: Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್! ರುತುರಾಜ್ ಕಾಯಕ್ವಾಡ್ ವಿಶ್ವದಾಖಲೆ
ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕೊನೆಯ FIFA ವಿಶ್ವಕಪ್ ಎಂದು ಹೇಳಲಾಗುತ್ತಿದೆ. ಅವರ ತಂಡ ಪೋರ್ಚುಗಲ್ ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಎರಡನ್ನೂ ಗೆದ್ದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.