IPL 2023ರಲ್ಲಿ ಮತ್ತೆ ಆಡುತ್ತಾರೆ ಜಸ್ಪ್ರೀತ್ ಬುಮ್ರಾ? ಈ ವಿಡಿಯೋ ನೀಡುತ್ತಿದೆ ಮಹಾ ಸುಳಿವು..!
Jasprit Bumrah in IPL 2023: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್’ನ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡವನ್ನು ಬೆಂಬಲಿಸಲು ಜಸ್ಪ್ರೀತ್ ಬುಮ್ರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಉಳಿದ ಆಟಗಾರರೊಂದಿಗೆ ಬುಮ್ರಾ ಕ್ರೀಡಾಂಗಣದಲ್ಲಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ಅವರನ್ನು ನೋಡಿದ್ದೇ ತಡ ಖುಷಿಯಲ್ಲಿ ತೇಲಾಡಿದ್ದಾರೆ.
Jasprit Bumrah in IPL 2023: ಬೆನ್ನುನೋವಿನ ಕಾರಣದಿಂದ ಶಸ್ತ್ರ ಚಿಕಿತ್ಸೆಗೆ ಒಳಗಾದ ಜಸ್ಪ್ರೀತ್ ಬುಮ್ರಾ ಕ್ರಿಕೆಟ್’ನಿಂದ ಸದ್ಯ ದೂರವಿದ್ದಾರೆ. 6 ತಿಂಗಳಿಗೂ ಹೆಚ್ಚು ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ದೇ ತಡ ಅಭಿಮಾನಿಗಳೆಲ್ಲರೂ, ಐಪಿಎಲ್’ನಲ್ಲಿ ಬುಮ್ರಾ ಮತ್ತೆ ಆಡುತ್ತಾರೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: WPL 2023 : ಮೊದಲ WPL ಚಾಂಪಿಯನ್ ತಂಡವಾದ ಮುಂಬೈ : ಧೋನಿಗೆ ಸರಿಸಾಟಿ ಹರ್ಮನ್‌ಪ್ರೀತ್!
ಬುಮ್ರಾ ಐಪಿಎಲ್’ನಲ್ಲಿ ಆಡುತ್ತಾರಾ?
ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್’ನ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡವನ್ನು ಬೆಂಬಲಿಸಲು ಜಸ್ಪ್ರೀತ್ ಬುಮ್ರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಉಳಿದ ಆಟಗಾರರೊಂದಿಗೆ ಬುಮ್ರಾ ಕ್ರೀಡಾಂಗಣದಲ್ಲಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ಅವರನ್ನು ನೋಡಿದ್ದೇ ತಡ ಖುಷಿಯಲ್ಲಿ ತೇಲಾಡಿದ್ದಾರೆ.
ಈಗ ಬುಮ್ರಾ ಐಪಿಎಲ್’ನಲ್ಲಿ ಆಡುತ್ತಾರಾ ಎಂಬುದು ಪ್ರಶ್ನೆ!
ಜಸ್ಪ್ರೀತ್ ಬುಮ್ರಾಗೆ ಇತ್ತೀಚೆಗೆ ನ್ಯೂಜಿಲೆಂಡ್’ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಏಷ್ಯಾಕಪ್ ಅಥವಾ ವಿಶ್ವಕಪ್’ಗಿಂತ ಮೊದಲು ಕ್ರಿಕೆಟ್ ಆಡುವುದನ್ನು ನೋಡುವುದು ಸುಲಭವಲ್ಲ. 2022ರ ಸೆಪ್ಟೆಂಬರ್ 25ರಂದು ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಕೊನೆಯ ಬಾರಿ ಬೌಲಿಂಗ್ ಮಾಡಿದ್ದರು. ಈ ವೇಳೆ ಅವರು ಗಾಯಗೊಂಡಿದ್ದರು.
ವಿಡಿಯೋ ಶೇರ್ ಮಾಡಿದ ಮುಂಬೈ ಇಂಡಿಯನ್ಸ್:
ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಬುಮ್ರಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಬ್ರಬೋರ್ನ್ ಸ್ಟೇಡಿಯಂನದ್ದಾಗಿದೆ. ಈ ವಿಡಿಯೋದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮುಂಬೈ ವೇಗದ ಬೌಲರ್ ಜೋಫ್ರಾ ಆರ್ಚರ್ ಪರಸ್ಪರ ಮಾತನಾಡುತ್ತಿದ್ದಾರೆ.
2022 ರ ಹರಾಜಿನ ಸಮಯದಲ್ಲಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಖರೀದಿಸಿದೆ, ಆದರೆ ಬೆನ್ನುನೋವಿನ ಕಾರಣ ಅವರು ಐಪಿಎಲ್’ನಲ್ಲಿ ಆಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: IPL 2023 : ಮುಂಬೈ ತಂಡಕ್ಕೆ ಅತ್ಯಂತ ಅಪಾಯಕಾರಿ ಬೌಲರ್‌ನ ಎಂಟ್ರಿ..!
ಆರ್‌ಸಿಬಿ ವಿರುದ್ಧ ಮುಂಬೈನ ಮೊದಲ ಪಂದ್ಯ!
ಮುಂಬೈ ಇಂಡಿಯನ್ಸ್ ತನ್ನ IPL 2023 ಅಭಿಯಾನವನ್ನು ಏಪ್ರಿಲ್ 2 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಆದರೆ, ಕಳೆದ ಋತುವಿನಲ್ಲಿ ಮುಂಬೈ ತೀರಾ ಕಳಪೆಯಾಗಿ ಸೋಲು ಕಂಡಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.