WPL 2023 : ಮೊದಲ WPL ಚಾಂಪಿಯನ್ ತಂಡವಾದ ಮುಂಬೈ : ಧೋನಿಗೆ ಸರಿಸಾಟಿ ಹರ್ಮನ್‌ಪ್ರೀತ್!

Harmanpreet Kaur : ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್ ವರೆಗೂ ಪಂದ್ಯ ಗೆಲ್ಲುವ ಭರವಸೆಯನ್ನು ಕೈ ಬಿಟ್ಟಿರಲಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ ಗೆದ್ದ ಮೊದಲ ವಿಜೇತ ಕ್ಯಾಪ್ಟನ್ ಆಗಿ ಹರ್ಮನ್ ಹೊರಹೊಮ್ಮಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕರಾಗಿದ್ದ ಧೋನಿಯನ್ನೂ ಸರಿಗಟ್ಟಿದ್ದಾರೆ.

Written by - Channabasava A Kashinakunti | Last Updated : Mar 27, 2023, 07:33 AM IST
  • ಎಂಎಸ್ ಧೋನಿ ಸಮಾನ ಹರ್ಮನ್ ಪ್ರೀತ್
  • ಮೊದಲ ಮಹಿಳಾ ಪ್ರಶಸ್ತಿ ಮುಡಿಗೇರಿಕೊಂಡ ಮುಂಬೈ
  • ವಾಂಗ್-ಮ್ಯಾಥ್ಯೂಸ್ ಅದ್ಬುತ ಅದ್ಭುತ ಪ್ರದರ್ಶನ
WPL 2023 : ಮೊದಲ WPL ಚಾಂಪಿಯನ್ ತಂಡವಾದ ಮುಂಬೈ : ಧೋನಿಗೆ ಸರಿಸಾಟಿ ಹರ್ಮನ್‌ಪ್ರೀತ್! title=

Mumbai Indians Champion : ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ 2023 ರ ಫೈನಲ್ ಪಂದ್ಯದಲ್ಲಿ ಹರ್ಮನ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆದರೆ, ಪಂದ್ಯ ಮಾತ್ರ ರೋಚಕವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್ ವರೆಗೂ ಪಂದ್ಯ ಗೆಲ್ಲುವ ಭರವಸೆಯನ್ನು ಕೈ ಬಿಟ್ಟಿರಲಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ ಗೆದ್ದ ಮೊದಲ ವಿಜೇತ ಕ್ಯಾಪ್ಟನ್ ಆಗಿ ಹರ್ಮನ್ ಹೊರಹೊಮ್ಮಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕರಾಗಿದ್ದ ಧೋನಿಯನ್ನೂ ಸರಿಗಟ್ಟಿದ್ದಾರೆ.

ಎಂಎಸ್ ಧೋನಿ ಸಮಾನ ಹರ್ಮನ್ ಪ್ರೀತ್

ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಅದ್ಭುತ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಇಡೀ ಸೀಸನ್ ನಲ್ಲಿ, ಮುಂಬೈ ನಾಯಕಿ ಹರ್ಮನ್ ಅನೇಕ ಅತ್ಯುತ್ತಮ ಇನ್ನಿಂಗ್ಸ್ಗಳನ್ನು ಆಡಿದ್ದಾರೆ, ಅದರ ಆಧಾರದ ಮೇಲೆ ಮುಂಬೈ ಫೈನಲ್ ತಲುಪಲು ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್‌ಗೆ ಧೋನಿಗೆ ಸರಿಸಾಟಿಯಾಗುವ ಉತ್ತಮ ಅವಕಾಶವಿತ್ತು, ಅದನ್ನು ಹರ್ಮನ್ ಕೂಡ ಪೂರ್ಣಗೊಳಿಸಿದರು. ಐಪಿಎಲ್‌ನಲ್ಲಿ ಟ್ರೋಫಿ ಗೆದ್ದ ಮೊದಲ ಭಾರತೀಯ ನಾಯಕ ಧೋನಿ. ಹರ್ಮನ್ ಫೈನಲ್ ಪಂದ್ಯವನ್ನೂ ಗೆದ್ದು ತಂಡ ಚಾಂಪಿಯನ್ ಆದರು. ಹರ್ಮನ್ ಡಬ್ಲ್ಯುಪಿಎಲ್‌ನಲ್ಲಿ ಟ್ರೋಫಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ, ಈ ಮೂಲಕ ಧೋನಿಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ : Team India : ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ! ತಂಡದಿಂದ ಕೈಬಿಟ್ಟ ಆಯ್ಕೆಗಾರರು

ಮೊದಲ ಮಹಿಳಾ ಪ್ರಶಸ್ತಿ ಮುಡಿಗೇರಿಕೊಂಡ ಮುಂಬೈ 

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 131 ರನ್ ಗಳಿಸಿತು. ಇದಾದ ಬಳಿಕ ನಟಾಲಿ ಬ್ರಂಟ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು. ನಟಾಲಿ 55 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿ ಅಜೇಯ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು, ಜೊತೆಗೆ ಅವರ ನಾಯಕಿ ಹರ್ಮನ್‌ಪ್ರೀತ್ ಕೌರ್ 39 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 37 ರನ್ ಗಳಿಸಿದರು.

ವಾಂಗ್-ಮ್ಯಾಥ್ಯೂಸ್ ಅದ್ಬುತ ಅದ್ಭುತ ಪ್ರದರ್ಶನ

ಡೆಲ್ಲಿ ಕ್ಯಾಪಿಟಲ್ಸ್ ಕೆಟ್ಟ ಆರಂಭವನ್ನು ಪಡೆಯಿತು. ಕೇವಲ 12 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪೇಸರ್ ಇಸ್ಸಿ ವಾಂಗ್ ಡೆಲ್ಲಿಗೆ 2 ಆಘಾತ ನೀಡಿದರು. ಅವರು ಮೂರನೇ ಎಸೆತದಲ್ಲಿ ಶೆಫಾಲಿ ವರ್ಮಾ (11) ಅವರನ್ನು ಬೇಟೆಯಾಡಿದರೆ, 5ನೇ ಎಸೆತದಲ್ಲಿ ಆಲಿಸ್ ಕ್ಯಾಪ್ಸಿ (0) ಇದ್ದರು. ಮುಂಬೈ ಪರ ಗರಿಷ್ಠ 3 ವಿಕೆಟ್ ಪಡೆದರು. ಹ್ಯಾಲಿ ಮ್ಯಾಥ್ಯೂಸ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದರು ಮತ್ತು ಅವರು ತಮ್ಮ ಹೆಸರಿನಲ್ಲಿ 3 ವಿಕೆಟ್ಗಳನ್ನು ಪಡೆದರು.

ಇದನ್ನೂ ಓದಿ : World Record: ವಿಶ್ವಕ್ರಿಕೆಟ್’ನಲ್ಲಿ ಇಲ್ಲಿವರೆಗೆ ಮಾಡಿಲ್ಲ ಇಂಥಾ ದಾಖಲೆ! ಟಿ20ನಲ್ಲಿ ಗಳಿಸಿದ ಈ ಸ್ಕೋರ್ ನೋಡಿದ್ರೆ ತಲೆ ಗಿರ್ರ್…ಅನ್ನುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News