ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ )ನ 2020 ರ ಆವೃತ್ತಿ ಟಿ 20 ಪಂದ್ಯಾವಳಿ ಧೋನಿ ಅವರ ಕೊನೆಯ ಪ್ರದರ್ಶನವಾಗಲಿದೆ ಎಂಬ ಊಹಾಪೋಹಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ತೆರೆ ಎಳೆದಿದ್ದಾರೆ.


COMMERCIAL BREAK
SCROLL TO CONTINUE READING

ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ 39 ವರ್ಷದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ತನ್ನ ಫ್ರ್ಯಾಂಚೈಸ್‌ನ ಅಂತಿಮ ಲೀಗ್ ಹಂತದ ಪಂದ್ಯಕ್ಕೂ ಮುನ್ನ ದೃಢಪಡಿಸಿದರು.ಪಂದ್ಯದ ಟಾಸ್ ಸಮಯದಲ್ಲಿ, ನಿರೂಪಕ ಡ್ಯಾನಿ ಮಾರಿಸನ್ ಧೋನಿ ಅವರನ್ನು ಪಂಜಾಬ್ ವಿರುದ್ಧದ ಪಂದ್ಯ ತಮ್ಮ ಕೊನೆಯ ಐಪಿಎಲ್ ಆಟವಾಗಿದೆಯೇ? ಎಂದು ಪ್ರಶ್ನಿಸಿದರು.


'ಇದು ಹಳದಿ ಬಣ್ಣದಲ್ಲಿ ನಿಮ್ಮ ಕೊನೆಯ ಆಟವಾಗಬಹುದೇ?'ಎಂದು ಮೋರಿಸನ್ ಧೋನಿಯನ್ನು ಕೇಳಿದರು.ಇದಕ್ಕೆ ಉತ್ತರಿಸಿದ ಧೋನಿ, "ಖಂಡಿತವಾಗಿಯೂ ಹಳದಿ ಬಣ್ಣದಲ್ಲಿ ನನ್ನ ಕೊನೆಯ ಆಟವಲ್ಲ" ಎಂದು ಹೇಳಿದ್ದಾರೆ.