India vs Pakistan: 2023ರ ಅಕ್ಟೋಬರ್-ನವೆಂಬರ್‌ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ನಲ್ಲಿ ಭಾಗವಹಿಸಲು ಭಾರತಕ್ಕೆ ತೆರಳಲು ಅಧಿಕೃತ ಅನುಮೋದನೆ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದೆ. ESPN ಕ್ರಿಕ್‌ ಇನ್ಫೋ' ವರದಿಯ ಪ್ರಕಾರ, ಪಿಸಿಬಿ ಈ ಪತ್ರವನ್ನು ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೂ ಕಳುಹಿಸಿದೆ. ರಾಷ್ಟ್ರೀಯ ತಂಡದ ಭಾರತ ಪ್ರವಾಸದ ಕುರಿತು ಮಂಡಳಿ ಸಲಹೆ ಕೇಳಿದೆ. ಪಾಕಿಸ್ತಾನದ ಐದು ಪಂದ್ಯಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆ ಇದೆಯೇ ಎಂದು ಮಂಡಳಿಯು ಕೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಭಾರತ-ಪಾಕ್ ಅಭಿಮಾನಿಗಳಿಗೆ ಬಿಗ್ ನ್ಯೂಸ್! ವಿಶ್ವಕಪ್ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡ PCB


“ಕಳೆದ ಮಂಗಳವಾರ 2023 ರ ODI ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ ತಕ್ಷಣ, ನಾವು ನಮ್ಮ ಪ್ರಧಾನ ಮಂತ್ರಿ ಮುಹಮ್ಮದ್ ಶಹಬಾಜ್ ಷರೀಫ್ ಅವರಿಗೆ ಅಂತರ-ಪ್ರಾಂತೀಯ ಸಮನ್ವಯ ಸಚಿವಾಲಯದ (IPC) ಮೂಲಕ ಪತ್ರ ಬರೆದಿದ್ದೇವೆ. ನಾವು ಈ ಪತ್ರವನ್ನು ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೂ ಕಳುಹಿಸಿದ್ದೇವೆ. 2023ರ ಏಕದಿನ ವಿಶ್ವಕಪ್‌ ನಲ್ಲಿ ಭಾಗವಹಿಸಲು ನಾವು ಅನುಮತಿ ನೀಡುವಂತೆ ಕೋರಿದ್ದೇವೆ” ಎಂದು ಹೇಳಿಕೊಂಡಿದೆ.


“ಭಾರತ ಪ್ರವಾಸ ಕೈಗೊಳ್ಳಲು ಮತ್ತು ನಮ್ಮ ಪಂದ್ಯಗಳ ಸ್ಥಳದಲ್ಲಿ ಆಡಲು ಅನುಮತಿ ನೀಡುವ ನಿರ್ಧಾರವು ಪಾಕಿಸ್ತಾನ ಸರ್ಕಾರದ ಪರಮಾಧಿಕಾರವಾಗಿದೆ” ಎಂದು ಪಿಸಿಬಿ ಹೇಳಿದೆ. “ನಮ್ಮ ಸರ್ಕಾರದ ನಿರ್ಧಾರದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಏನೇ ಸಲಹೆ ನೀಡಿದರೂ ಅದನ್ನು ಪಾಲಿಸುತ್ತೇವೆ. ಮುಂದಿನ ಹಂತದಲ್ಲಿ ನಮಗೆ ಸಲಹೆ ನೀಡುವ ಮೊದಲು ಅವರು ಯಾವ ಪ್ರಕ್ರಿಯೆಯನ್ನು ಅನುಸರಿಸಲು ಬಯಸುತ್ತಾರೆ ಎಂಬುದು ಸಂಪೂರ್ಣವಾಗಿ ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟದ್ದು” ಎಂದಿದೆ.


ಇದನ್ನೂ ಓದಿ: ಗಂಭೀರ ಗಾಯವಾಗಿದ್ರೂ ತಂಡಕ್ಕಾಗಿ ಬ್ಯಾಟ್ ಬೀಸಿದ ಧೀರ ಈ ಕ್ರಿಕೆಟಿಗ! ಬಿಗ್ ಸೆಲ್ಯೂಟ್ ಮ್ಯಾನ್…


“ಸ್ಥಳಗಳನ್ನು ಪರಿಶೀಲಿಸಲು ಮತ್ತು ಸಂಘಟಕರೊಂದಿಗೆ ಸಭೆಗಳನ್ನು ನಡೆಸಲು ಭಾರತಕ್ಕೆ ಮುಂಗಡ ತಂಡವನ್ನು ಕಳುಹಿಸುವ ಅಗತ್ಯವಿದ್ದರೆ, ಅದು ಹಾಗೆ ಮಾಡುತ್ತದೆ. ಈ ನಿರ್ಧಾರವು ಸಂಪೂರ್ಣವಾಗಿ ಸರ್ಕಾರದದಾಗಿರುತ್ತದೆ” ಎಂದಿದೆ ಪಿಸಿಬಿ. ವರದಿಯ ಪ್ರಕಾರ, ಈ ಪತ್ರವನ್ನು ಜೂನ್ 26 ರಂದು ಬರೆಯಲಾಗಿದೆ. ಪಿಸಿಬಿ ಪಾಕಿಸ್ತಾನದ ಪಂದ್ಯಗಳ ವೇಳಾಪಟ್ಟಿಯನ್ನು ಸರ್ಕಾರದೊಂದಿಗೆ ಹಂಚಿಕೊಂಡಿದೆ ಎಂದು ಅದು ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.