ನವದೆಹಲಿ: ಸದ್ಯ ವಿರಾಟ್ ಕೊಹ್ಲಿ ಅವರ ಫಾರ್ಮ್‍ನ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಆಡುವ 11ರಲ್ಲಿ ಅವರ ಸ್ಥಾನದ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಕಪಿಲ್ ದೇವ್ ಸೇರಿದಂತೆ ಭಾರತೀಯ ಕ್ರಿಕೆಟ್‌ನ ಅನೇಕ ಹಿರಿಯ ಆಟಗಾರರು ಕೊಹ್ಲಿ ಮುಂದೆ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಿದ್ದಾರೆ. ಆದರೆ ಕೆಲವರು ಮುಂಬರುವ ಪಂದ್ಯಗಳಲ್ಲಿ ಕೊಹ್ಲಿ ಉತ್ತಮ ಆಟದ ಮೂಲಕ ಮತ್ತೆ ಫಾರ್ಮ್‍ಗೆ ಮರಳಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವವರು ಇನ್ನೂ ಹುಟ್ಟಿಲ್ಲವೆಂದು ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ರಶೀದ್ ಲತೀಫ್ ಹೇಳಿದ್ದಾರೆ. ಇಂದು ಭಾರತ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‍ನ ಅನೇಕ ಆಟಗಾರರು ಕಳಪೆ ಫಾರ್ಮ್‍ನ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಮತ್ತೆ ಕಮ್‍ಬ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ. ಈ ನಡುವೆ ಮೊತ್ತೊಬ್ಬ ಮಾಜಿ ಆಟಗಾರ ಸಹ ಕೊಹ್ಲಿ ಫಾರ್ಮ್‍ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ: 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯದಲ್ಲಿ ಭಾರೀ ಬದಲಾವಣೆ: ಮತ್ತೆ ಕಣಕ್ಕಿಳಿಯಲಿದ್ದಾರೆ ಈ ಸ್ಟಾರ್‌ ಆಟಗಾರ!


ಕೊಹ್ಲಿ ಸ್ಥಾನ ಪ್ರಶ್ನಿಸುವ ಸಮಯ ಇದಲ್ಲ


ಮಾಜಿ ಕ್ರಿಕೆಟಿಗ ಸಬಾ ಕರೀಮ್ ಅವರು ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಸ್ಥಾನವನ್ನು ಪ್ರಶ್ನಿಸುವ ಸಮಯ ಇದಲ್ಲವೆಂದು ಅವರು ಹೇಳಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೆ ಸಾಕಷ್ಟು ಸಮಯ ಇರುವುದರಿಂದ ಆಡುವ 11ರಲ್ಲಿ ಕೊಹ್ಲಿ ಸ್ಥಾನ ಪ್ರಶ್ನಿಸುವುದು ಸರಿಯಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಕೊಹ್ಲಿ ತಮ್ಮ ಮೊದಲಿನ ಫಾರ್ಮ್‍ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ವಿಶ‍್ವಕಪ್ ಟೂರ್ನಿಗೆ ಸಾಕಷ್ಟು ಸಮಯ ಇರುವುದರಿಂದ ಟೀಂ ಮ್ಯಾನೇಜ್‌ಮೆಂಟ್ ಟೀಕೆಗಳಿಗೆ ಗಮನ ಕೊಡಬಾರದು. ಕೊಹ್ಲಿ ಫಾರ್ಮ್‌ಗೆ ಮರಳುವ ಬಗ್ಗೆ ನಾವು ಭರವಸೆ ಇಟ್ಟುಕೊಳ್ಳಬೇಕು. ದೊಡ್ಡ ಟೂರ್ನಿಯಲ್ಲಿ ಆಡಲು ಟೀಂ ಇಂಡಿಯಾಗೆ ಕೊಹ್ಲಿಯ ಸಾಮರ್ಥ್ಯವು ಪ್ರೋತ್ಸಾಹದಾಯಕವಾಗಿದೆ ಎಂದು ಅವರು ಹೇಳಿದ್ದಾರೆ.   


ಕೊಹ್ಲಿ ಬೆಂಬಲಕ್ಕೆ ನಿಂತ ಸಬಾ ಕರೀಮ್


ಕೊಹ್ಲಿ ತಮ್ಮ ಆಟದತ್ತ ಗಮನಹರಿಸಬೇಕು ಮತ್ತು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಪ್ರದರ್ಶನ ನೀಡಬೇಕೆಂದು ಕರೀಮ್ ಸಲಹೆ ನೀಡಿದ್ದಾರೆ. ಕೊಹ್ಲಿ ಶ್ರೇಷ್ಠ ಆಟಗಾರ. ಅವರು ತಮ್ಮ ಹಿಂದಿನ ಪ್ರದರ್ಶನದಿಂದ ಸಾಕಷ್ಟು ಸಾಧಿಸಿದ್ದಾರೆ, ಅವರ ಮುಂದೆ ಈ ಕಳಪೆ ಪ್ರದರ್ಶನ ಏನೂ ಅಲ್ಲ. ಕೊಹ್ಲಿಗೆ ವಿಶ್ರಾಂತಿ ನೀಡಬಾರದು ಮತ್ತು ಹೆಚ್ಚಿನ ಕ್ರಿಕೆಟ್ ಆಡಲು ಪ್ರೋತ್ಸಾಹಿಸಬೇಕು. ಇದು ಅವರ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ಕರೀಮ್ ಹೇಳಿದ್ದಾರೆ. ಇದೇ ವೇಳೆ ಕೊಹ್ಲಿ ಬೆಂಬಲಿಸಿದ ರೋಹಿತ್ ಶರ್ಮಾರ ತಾಳ್ಮೆಗೆ ಕರೀಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  


ಇದನ್ನೂ ಓದಿ: ಲೆಜೆಂಡ್ಸ್ ಲೀಗ್ ಕ್ರಿಕೆಟ್: ಮತ್ತೆ ಮೈದಾನಕ್ಕಿಳಿಯಲಿದ್ದಾರೆ ನಿಮ್ಮ ನೆಚ್ಚಿನ ಈ ಆಟಗಾರ!


ಕೊಹ್ಲಿ ವಿರುದ್ಧದ ಟೀಕೆಗಳು ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲವೆಂದು ಕರೀಮ್ ಹೇಳಿದ್ದಾರೆ. ತಂಡದಲ್ಲಿ ಉತ್ತಮ ಬಾಂಡಿಂಗ್ ಇದೆ, ವಿರಾಟ್ ಅವರ ಫಾರ್ಮ್ ಬಗ್ಗೆ ನೀವು ರೋಹಿತ್ ಅವರನ್ನು ಕೇಳಿದಾಗಲೆಲ್ಲಾ ಅವರ ಉತ್ತರ ಯಾವಾಗಲೂ ಪಾಸಿಟಿವ್ ಆಗಿರುತ್ತದೆ. ಅಷ್ಟೇ ಅಲ್ಲ ರೋಹಿತ್ ಶರ್ಮಾ ಕೂಡ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದ್ದಾರೆ.  


ರಿಷಭ್ ಪಂತ್‍ ಟೀಂ ಇಂಡಿಯಾದ ಮುಂದಿನ ನಾಯಕನಾಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಕರೀಮ್, ‘ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂತ್ ಆಟದಿಂದ ತಂಡ ಹಲವಾರು ಪಂದ್ಯಗಳನ್ನು ಗೆದ್ದಿದೆ. ಆದರೆ ಪ್ರತಿಯೊಬ್ಬ ಆಟಗಾರನು ಪಂದ್ಯ ಗೆಲ್ಲುವ ಪ್ರದರ್ಶನ ನೀಡುವತ್ತ ಗಮನಹರಿಸಬೇಕೆಂದು ನಾನು ಭಾವಿಸುತ್ತೇನೆ. ಎಲ್ಲವನ್ನೂ ನಾಯಕನಿಗೆ ಬಿಡುವುದು ಸರಿಯಲ್ಲ’ವೆಂದು ಹೇಳಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.