WPL 2023 Final: ಮಹಿಳಾ ಪ್ರೀಮಿಯರ್ ಲೀಗ್‌’ನ ಫೈನಲ್ ಪಂದ್ಯ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 131 ರನ್ ಗಳಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಬಳಿಕ ಗುರಿ ಬೆನ್ನತ್ತಿದ ಹರ್ಮನ್‌ ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಪಡೆ 19.3 ಓವರ್’ನಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶೇಷ ವ್ಯಕ್ತಿ ಜೊತೆ ಮಾವಿನಹಣ್ಣು ತಿಂದ Sachin Tendulkar! ಯಾರು ಗೊತ್ತಾ ಆ ಸ್ಪೆಷಲ್ ಪರ್ಸನ್!


ಡೆಲ್ಲಿ 79 ರನ್‌ ಕಲೆ ಹಾಕುವಷ್ಟರಲ್ಲಿ ತನ್ನ 9 ವಿಕೆಟ್‌’ಗಳನ್ನು ಕಳೆದುಕೊಂಡಿತ್ತು. ನಂತರ ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಕೊನೆಯ ವಿಕೆಟ್‌’ಗೆ ಅಜೇಯ 52 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಶಿಖಾ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಗಳಿಸಿದ್ದಾರೆ. ರಾಧಾ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ ಸಿಕ್ಸರ್‌ ಬಾರಿಸಿದರು. 27 ರನ್ ಗಳಿಸಿ ಅಜೇಯರಾಗಿ ಮರಳಿದರು. ಮುಂಬೈ ಪರ ಇಸ್ಸಿ ವಾಂಗ್ ಮತ್ತು ಹ್ಯಾಲಿ ಮ್ಯಾಥ್ಯೂಸ್ ತಲಾ ಮೂರು ವಿಕೆಟ್ ಪಡೆದರು.


ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸ್ವಲ್ಪ ಹೊತ್ತು ಹಿಡಿತ ಸಾಧಿಸಲು ಯತ್ನಿಸಿದರು. ಮರಿಜ್ನೆ ಕ್ಯಾಪ್ (18) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 38 ರನ್ ಸೇರಿಸಿದರು. ಇಬ್ಬರೂ ಸೇರಿ ದೆಹಲಿಯನ್ನು 70ರ ಗಡಿ ದಾಟಿಸಿದರು.


ಡೆಲ್ಲಿ ಕ್ಯಾಪಿಟಲ್ಸ್ ಕೆಟ್ಟ ಆರಂಭವನ್ನು ಪಡೆಯಿತು ಎನ್ನಬಹುದು. ಕೇವಲ 12 ರನ್ ಗಳಿಗೆ ದೆಹಲಿಯ 2 ವಿಕೆಟ್ ಪತನವಾಗಿತ್ತು. ಇನಿಂಗ್ಸ್‌’ನ ಎರಡನೇ ಓವರ್‌’ನಲ್ಲಿ ಪೇಸರ್ ಇಸ್ಸಿ ವಾಂಗ್ ಡೆಲ್ಲಿಗೆ 2 ಆಘಾತ ನೀಡಿದ್ದರು. ಮೂರನೇ ಎಸೆತದಲ್ಲಿ ಶೆಫಾಲಿ ವರ್ಮಾ (11) ಅವರನ್ನು ಬೇಟೆಯಾಡಿದರೆ, 5ನೇ ಎಸೆತದಲ್ಲಿ ಆಲಿಸ್ ಕ್ಯಾಪ್ಸಿ (0) ವಿಕೆಟ್ ಕಿತ್ತರು.


ಇದನ್ನೂ ಓದಿ: ಈ ಬಾರಿಯ IPLನಲ್ಲಿ Virat Kohli ಮಾಡಲಿದ್ದಾರೆ ಹಲವು ದಾಖಲೆಗಳು! ಈ ಅಂಕಿಅಂಶ ನೋಡಿ ಗೊತ್ತಾಗುತ್ತೆ


ಪ್ಲೇಯಿಂಗ್ ಇಲೆವೆನ್’ನಲ್ಲಿ ಒಂದೇ ಒಂದು ಬದಲಾವಣೆ:


ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌’ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಪೂನಂ ಯಾದವ್ ಬದಲಿಗೆ ಮೀನು ಮಣಿ ದೆಹಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದರೆ ಫೈನಲ್’ಗೆ ಎಂಟ್ರಿ ಕೊಟ್ಟಿದ್ದರೆ, ದೆಹಲಿ ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಕಾರಣ ನೇರವಾಗಿ ಫೈನಲ್ ತಲುಪಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ