World Cup 2023 Venue:2023 ರ ODI ವಿಶ್ವಕಪ್ ಈ ಬಾರಿ ಭಾರತದ ನೆಲದಲ್ಲಿ ಆಯೋಜಿಸಲಾಗಿದೆ. ಆದರೆ, ಈ ಬಾರಿ ನಡೆಯಬೇಕಿರುವ  ಐಸಿಸಿ ಏಕದಿನ ವಿಶ್ವಕಪ್ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ.  ODI ವಿಶ್ವಕಪ್ 2023 ಪಂದ್ಯಗಳು ಭಾರತದಲ್ಲಿ 12 ಮೈದಾನಗಳಲ್ಲಿ ನಡೆಯಲಿವೆ. ಈ ಟೂರ್ನಿಯ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಲ್ಲದೇ ಸೆಮಿಫೈನಲ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Opposition Unity: 'ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಒಂದು ಮದುವೆ ಸಮಾರಂಭವಾಗಿತ್ತು, ಸೌಜನ್ಯಕ್ಕಾಗಿ ಕಾಂಗ್ರೆಸ್ ಭಾಗವಹಿಸಿದೆ'


ಈ ಮೈದಾನದಲ್ಲಿ ವಿಶ್ವ ಪಂದ್ಯಗಳು ನಡೆಯಲಿವೆ.
ಅಹಮದಾಬಾದ್ ಹೊರತುಪಡಿಸಿ, ODI ವಿಶ್ವಕಪ್ 2023 ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಧರ್ಮಶಾಲಾ, ಲಕ್ನೋ, ಪುಣೆ, ತಿರುವನಂತಪುರ ಮತ್ತು ಗುವಾಹಟಿಯಲ್ಲಿ ನಡೆಯಲಿದೆ. ಈ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. 2023 ರ ವಿಶ್ವಕಪ್‌ನ ಪ್ರಶಸ್ತಿ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆಯೋಜನೆಗೊಳ್ಳುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಒಂದು ವೇಳೆ ಭಾರತ ತಂಡ ಸೆಮಿಫೈನಲ್ ತಲುಪಿದರೆ, ಪಾಯಿಂಟ್ ಟೇಬಲ್ ಅಥವಾ ಗುಂಪಿನಲ್ಲಿ ಟೀಮ್ ಇಂಡಿಯಾ ಯಾವುದೇ ಸ್ಥಾನದಲ್ಲಿರಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದೆ.


ಇದನ್ನೂ ಓದಿ-Indian Economy: ವೇಗದಲ್ಲಿ ಚೀನಾಗಿಂತ ಮುಂದೆ ಇರಲಿದೆ ಭಾರತೀಯ ಅರ್ಥವ್ಯವಸ್ಥೆ, ಅಂದಾಜು ವ್ಯಕ್ತಪಡಿಸಿದ ಎಸ್ ಅಂಡ್ ಪಿ


ಬಿಸಿಸಿಐ ಅಧಿಕಾರಿಗಳ ಸಭೆ
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಟಿಸಿರುವ ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಗಳು ಮತ್ತು ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಸೋಮವಾರ ಅನೌಪಚಾರಿಕ ಸಭೆ ನಡೆಸಲಾಗಿದೆ. ಆದರೆ, ಈ ಸಭೆಯಲ್ಲಿ ಐಸಿಸಿಯ ನಿಯಮಗಳ ಹೊರತಾಗಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. 2023 ರ ODI ವಿಶ್ವಕಪ್ ಅನ್ನು ಭಾರತದಲ್ಲಿ 12 ಮೈದಾನಗಳಲ್ಲಿ ಆಡಲಾಗುವುದು ಎನ್ನಲಾಗಿದೆ. ಈ ಟೂರ್ನಿಯ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಲ್ಲದೇ ಸೆಮಿಫೈನಲ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ವೇಳೆ ಭಾರತ ತಂಡ ಸೆಮಿಫೈನಲ್ ತಲುಪಿದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದೆ. ವಾಸ್ತವದಲ್ಲಿ, ಕಳೆದ ಹಲವಾರು ದಿನಗಳಿಂದ ODI ವಿಶ್ವಕಪ್ 2023 ರ ಸ್ಥಳಗಳು ಶೀಘ್ರದಲ್ಲಿಯೇ ಘೋಷಣೆಯಾಗಳಲಿವೆ ಎಂದು ನಿರೀಕ್ಷಿಸಲಾಗುತ್ತಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.