India vs South Africa : ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾ ಬಹು-ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ದೊಡ್ಡ ನಿರೀಕ್ಷೆ. ಟೇಬಲ್ ಟಾಪರ್ ಆಗಿರುವ ಎರಡೂ ತಂಡಗಳ ನಡುವಿನ ಈ ಪಂದ್ಯವನ್ನು ವಿಶ್ವಕಪ್ ಟೂರ್ನಿಯ ಮಿನಿ ಸೆಮಿಫೈನಲ್ ಪಂದ್ಯ ಎಂದೂ ಕರೆಯಬಹುದು. ಇದುವರೆಗೂ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಅದರಂತೆ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿದೆ. ನಾಳಿನ ಭಾರತ ವಿರುದ್ಧದ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವನ್ನು ತಂಡ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ನಾವು ಭಾರತ ನೆಲದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದೇವೆ. ಈ ವಿಶ್ವಕಪ್ ಸವಾಲನ್ನು ಎದುರು ನೋಡುತ್ತಿದ್ದೇವೆ ಎಂದು ದಕ್ಷಿಣ ಆಫ್ರಿಕಾದ ಆಟಗಾರ ವಾಂಡರ್ ಡಸ್ಸೆನ್ ಹೇಳಿದ್ದಾರೆ. ಇದಕ್ಕೆ ಕಾರಣ, ದಕ್ಷಿಣ ಆಫ್ರಿಕಾವು ಭಾರತವನ್ನು ಏಕದಿನದಲ್ಲಿ ಹೆಚ್ಚು ಬಾರಿ ಸೋಲಿಸಿದೆ. ವಿಶ್ವಕಪ್‌ನಲ್ಲೂ ಭಾರತದ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೆಚ್ಚು ಗೆಲುವು ಸಾಧಿಸುತ್ತಿದೆ.


ಇದನ್ನೂ ಓದಿ:ಶ್ವಕಪ್’ನಲ್ಲಿ ಧೂಳೆಬ್ಬಿಸ್ತಿರೋ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಕೂಡ ಭಾರತೀಯಳೇ…! ಯಾರು ಗೊತ್ತಾ ಆ ಸುಂದರಿ?


ಭಾರತ ತಂಡ ಕಳೆದ ಎರಡು ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದು, ಈ ಬಾರಿಯೂ ಅದನ್ನು ಮುಂದುವರಿಸುವ ಗುರಿ ಹೊಂದಿದೆ. ವಿಶೇಷವಾಗಿ 2019 ರಲ್ಲಿ, ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಾರಣದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿದ್ದು ಗಮನಾರ್ಹ.


ಅಂದಿನ ಮ್ಯಾಚ್‌ನಲ್ಲಿ ರೋಹಿತ್ ಶರ್ಮಾ 144 ಎಸೆತಗಳಲ್ಲಿ 122 ರನ್ ಗಳಿಸಿದರು. ಶತಕದ ಜೊತೆಗೆ ವಿಶ್ವಕಪ್‌ನಲ್ಲಿ ಒಟ್ಟು 5 ಶತಕಗಳನ್ನು ಬಾರಿಸುವ ಮೂಲಕ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಆದ್ದರಿಂದ ಈ ಬಾರಿಯೂ ಸಹ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಎಂದಿನ ಸ್ಟಾರ್ ಪ್ರದರ್ಶನ ತೋರುವ ನಿರೀಕ್ಷೆಯಿದೆ. 


ರೋಹಿತ್‌ ಅದೇ ರಿತಿ ತಮ್ಮ ಆಟವನ್ನು ಮುಂದುವರಿಸಿದರೆ ದಕ್ಷಿಣ ಆಫ್ರಿಕಾ ತಂಡ ನೆಲಕಚ್ಚುವುದಂತೂ ಖಂಡಿತ. ಅಲ್ಲದೆ ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಅಲ್ಲದೆ, ನಾಳೆ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡಗಳೇ ವಿಶ್ವಕಪ್‌ ಚಾಂಪಿಯನ್‌ ಆಗುತವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.