ನವದೆಹಲಿ: ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಇದೀಗ ಭರ್ಜರಿ ಫಾರ್ಮ್‍ನಲ್ಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪರ್ ಟೂರ್ನಿಯಲ್ಲಿ ರನ್‍ಗಳ ಸುರಿಮಳೆ ಸುರಿಸುತ್ತಿರುವ ಕಿಂಗ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ 48ನೇ ಏಕದಿನ ಶತಕ ಪೂರೈಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೇವಲ 5 ರನ್‍ಗಳಿಂದ ಶತಕ ವಂಚಿತರಾದ ಕೊಹ್ಲಿ ಬಹುದೊಡ್ಡ ದಾಖಲೆ ನಿರ್ಮಿಸುವುದನ್ನು ತಪ್ಪಿಸಿಕೊಂಡರು.  


COMMERCIAL BREAK
SCROLL TO CONTINUE READING

ಹೌದು, ಕಿವೀಸ್ ವಿರುದ್ಧ ಕೊಹ್ಲಿ ಶತಕ ಪೂರೈಸಿದ್ದರೆ ಏಕದಿನದಲ್ಲಿ 49 ಶತಕ ಬಾರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ ಕೇವಲ ರನ್‍ಗಳಿಂದ ಶತಕ ವಂಚಿತರಾದ ಕೊಹ್ಲಿ ನಿರಾಸೆ ಅನುಭವಿಸಿದರು. ಇದರಿಂದ ಕಿಂಗ್ ಕೊಹ್ಲಿ ಫ್ಯಾನ್ಸ್ ಕೂಡ ಬೇಸರಗೊಂಡಿದ್ದಾರೆ. ಇದೀಗ ಕೊಹ್ಲಿಯವರ 49 ಮತ್ತು 50ನೇ ಶತಕದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮಹತ್ವದ ಭವಿಷ್ಯ ನುಡಿದಿದ್ದಾರೆ.


ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ಆಸ್ಟ್ರೇಲಿಯಾ: ನೆದರ್ಲ್ಯಾಂಡ್ಸ್ ವಿರುದ್ಧ 309 ರನ್’ಗಳ ವಿಜಯ


ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5ಕ್ಕೆ 5 ಗೆಲುವು ಸಾಧಿಸಿರುವ ಭಾರತ ಇನ್ನೂ 4 ಲೀಗ್ ಪಂದ್ಯಗಳನ್ನು ಆಡಲಿದೆ. ಫೈನಲ್ ಪ್ರವೇಶಿಸುವ ಮೊದಲೇ ಕೊಹ್ಲಿಯವರು 49ನೇ ಏಕದಿನ ಶತಕ ಬಾರಿಸಲಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು 50ನೇ ಏಕದಿನ ಶತಕ ಪೂರ್ಣಗೊಳಿಸುತ್ತಾರೆ ಅಂತಾ ವಾನ್ ಹೇಳಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬಲಿಷ್ಠ ತಂಡಗಳನ್ನು ಸೋಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.


ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ 118ರ ಸರಾಸರಿಯಲ್ಲಿ 354 ರನ್ ಗಳಿಸಿದ್ದು, ಟೂರ್ನಿಯಲ್ಲಿಯೇ ಅತಿಹೆಚ್ಚು ರನ್ ಗಳಿಸಿರುವ ಆಟಗಾರನಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಅಜೇಯ 103 ರನ್ ಗಳಿಸಿದ್ದ ಕೊಹ್ಲಿ, ನ್ಯೂಜಿಲ್ಯಾಂಡ್ ವಿರುದ್ಧ 95, ಆಸ್ಟ್ರೇಲಿಯಾ ವಿರುದ್ಧ 85, ಅಫ್ಘಾನಿಸ್ತಾನದ ವಿರುದ್ಧ 55 ಮತ್ತು ಪಾಕಿಸ್ತಾನದ ವಿರುದ್ಧ 16 ರನ್ ಗಳಿಸಿದ್ದಾರೆ.


ಇದನ್ನೂ ಓದಿ: ಸತತ 5 ಪಂದ್ಯ ಗೆದ್ದರೂ ಸೆಮಿಫೈನಲ್ ಪ್ರವೇಶಿಸೋದು ಟೀಂ ಇಂಡಿಯಾಗೆ ಕಷ್ಟ! ಯಾಕೆ ಗೊತ್ತಾ?


ವಿರಾಟ್ ಕೊಹ್ಲಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಾನ್ ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಕಿಂಗ್ ಕೊಹ್ಲಿ ಮೀರಿಸುತ್ತಾರೆ ಎಂದು ಹೇಳಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದ ವೇಳೆಗೆ ಕೊಹ್ಲಿ 49 ಮತ್ತು 50ನೇ ಶತಕಗಳನ್ನು ಪೂರೈಸುತ್ತಾರೆ ಅನ್ನೋದು ನನ್ನ ಅಭಿಪ್ರಾಯವೆಂದು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.