40 ಎಸೆತಕ್ಕೆ ಗ್ಲೆನ್ ಮ್ಯಾಕ್ಸ್’ವೆಲ್ ಸ್ಪೋಟಕ ಶತಕ! ವಿಶ್ವಕಪ್’ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ ಆಸೀಸ್ ಆಟಗಾರ

Glenn Maxwell: ಏಡನ್ ಮಾರ್ಕ್ರಾಮ್ ಅವರ ದಾಖಲೆಯನ್ನು ಬ್ರೇಕ್ ಮಾಡುವ ಮೂಲಕ ಮ್ಯಾಕ್ಸ್‌ವೆಲ್ ಈ ದೊಡ್ಡ ಸಾಧನೆ ಮಾಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಸಕ್ತ ವಿಶ್ವಕಪ್‌’ನಲ್ಲಿ ಶ್ರೀಲಂಕಾ ವಿರುದ್ಧ ಮಾರ್ಕ್ರಾಮ್ 49 ಎಸೆತಗಳಲ್ಲಿ ಶತಕ ಗಳಿಸಿದ್ದರು.

Written by - Bhavishya Shetty | Last Updated : Oct 25, 2023, 06:50 PM IST
    • ಬಿರುಸಿನ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಗ್ಲೆನ್ ಮ್ಯಾಕ್ಸ್‌’ವೆಲ್
    • ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ ಆಸೀಸ್ ಆಟಗಾರ
    • ODI ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್
40 ಎಸೆತಕ್ಕೆ ಗ್ಲೆನ್ ಮ್ಯಾಕ್ಸ್’ವೆಲ್ ಸ್ಪೋಟಕ ಶತಕ! ವಿಶ್ವಕಪ್’ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ ಆಸೀಸ್ ಆಟಗಾರ title=
Glenn Maxwell

AUS vs NED: ಏಕದಿನ ವಿಶ್ವಕಪ್ 2023ರಲ್ಲಿ, ಗ್ಲೆನ್ ಮ್ಯಾಕ್ಸ್‌’ವೆಲ್ ನೆದರ್ಲ್ಯಾಂಡ್ಸ್ ವಿರುದ್ಧ ಬಿರುಸಿನ ಶತಕ ಬಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಮ್ಯಾಕ್ಸ್‌ವೆಲ್ ಏಕದಿನ ವಿಶ್ವಕಪ್‌’ನ ವೇಗದ ಶತಕ ಸಿಡಿಸಿದ್ದಾರೆ.

ಏಡನ್ ಮಾರ್ಕ್ರಾಮ್ ಅವರ ದಾಖಲೆಯನ್ನು ಬ್ರೇಕ್ ಮಾಡುವ ಮೂಲಕ ಮ್ಯಾಕ್ಸ್‌ವೆಲ್ ಈ ದೊಡ್ಡ ಸಾಧನೆ ಮಾಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಸಕ್ತ ವಿಶ್ವಕಪ್‌’ನಲ್ಲಿ ಶ್ರೀಲಂಕಾ ವಿರುದ್ಧ ಮಾರ್ಕ್ರಾಮ್ 49 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಇದನ್ನೂ ಓದಿ: ಲಂಕಾ ದಿಗ್ಗಜ ಕುಮಾರ್ ಸಂಗಕ್ಕಾರರ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

ವಿಶ್ವಕಪ್‌’ನಲ್ಲಿ ಅತಿ ವೇಗದ ಶತಕ:

  • 40 – ಗ್ಲೆನ್ ಮ್ಯಾಕ್ಸ್‌ವೆಲ್ (vs ನೆದರ್ಲ್ಯಾಂಡ್ಸ್) ದೆಹಲಿ- 2023
  • 49 - ಏಡೆನ್ ಮಾರ್ಕ್ರಾಮ್ (vs ಶ್ರೀಲಂಕಾ) ದೆಹಲಿ-2023
  • 50 – ಕೆವಿನ್ ಒ'ಬ್ರಿಯಾನ್ (vs ಇಂಗ್ಲೆಂಡ್) ಬೆಂಗಳೂರು-2011
  • 51 - ಗ್ಲೆನ್ ಮ್ಯಾಕ್ಸ್‌ವೆಲ್ (vs ಶ್ರೀಲಂಕಾ) ಸಿಡ್ನಿ -2015
  • 52 - ಎಬಿ ಡಿವಿಲಿಯರ್ಸ್ (vs ವೆಸ್ಟ್ ಇಂಡೀಸ್) ಸಿಡ್ನಿ- 2015

ವೇಗದ ಏಕದಿನ ಶತಕ:

  • 31 ಎಸೆತಗಳು- ಎಬಿ ಡಿವಿಲಿಯರ್ಸ್
  • 36 ಎಸೆತಗಳು- ಕೋರಿ ಆಂಡರ್ಸನ್
  • 37 ಎಸೆತಗಳು- ಶಾಹಿದ್ ಅಫ್ರಿದಿ
  • 40 ಎಸೆತಗಳು - ಗ್ಲೆನ್ ಮ್ಯಾಕ್ಸ್‌ವೆಲ್

ಮ್ಯಾಕ್ಸ್‌ವೆಲ್ ಪ್ಯಾಟ್ ಕಮ್ಮಿನ್ಸ್ ಅವರೊಂದಿಗೆ 47 ಎಸೆತಗಳಲ್ಲಿ 103 ರನ್‌;ಗಳ ಜೊತೆಯಾಟವನ್ನು ಆಡಿದ್ದಾರೆ. ಅದರ ಆಧಾರದ ಮೇಲೆ ಆಸ್ಟ್ರೇಲಿಯಾ 50 ಓವರ್‌’ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 399 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ನೆದರ್ಲೆಂಡ್ಸ್‌’ನ ಬಾಸ್ ಡಾಲಿಡೇ 10 ಓವರ್‌’ಗಳಲ್ಲಿ 115 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡರು ಬಾಸ್ ಡಾಲಿಡೇ.

  • ODI ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್
  • 115 - ಬಾಸ್ ಡಾಲಿಡೇ (vs ಆಸ್ಟ್ರೇಲಿಯಾ) 2023
  • 113 – ಮಿಕ್ ಲೆವಿಸ್ (vs ದಕ್ಷಿಣ ಆಫ್ರಿಕಾ) 2006
  • 113 – ಆಡಮ್ ಝಂಪಾ (vs ದಕ್ಷಿಣ ಆಫ್ರಿಕಾ) 2023
  • 110 - ವಹಾಬ್ ರಿಯಾಜ್ (vs ಇಂಗ್ಲೆಂಡ್) 2016
  • 110 - ರಶೀದ್ ಖಾನ್ (vs ಇಂಗ್ಲೆಂಡ್) 2019

ಇದನ್ನೂ ಓದಿ: ನನಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ನೀವು ಇನ್ನೂ: ವಿರಾಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಹೀಗಂದಿದ್ದೇಕೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.thre

Trending News