ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಈತನಿಂದಲೇ.. ಈ ಆಟಗಾರನೇ ಮ್ಯಾಚ್ ವಿನ್ನರ್ ಎಂದು ಕೊಂಡಾಡಿದ ರೋಹಿತ್ ಶರ್ಮಾ!
Rohit Sharma Statement: ಭಾರತ 20 ವರ್ಷಗಳ ನಂತರ ವಿಶ್ವಕಪ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ದಾಖಲಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
Rohit Sharma Statement on Victory: ಭಾರತ ಕ್ರಿಕೆಟ್ ತಂಡವು ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್’ನಲ್ಲಿ ಸತತ 5 ನೇ ಗೆಲುವು ದಾಖಲಿಸಿದೆ. ಅದ್ಭುತ ಓಪನರ್ ರೋಹಿತ್ ಶರ್ಮಾ ಸಾರಥ್ಯದ ಈ ತಂಡವು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ!
20 ವರ್ಷಗಳ ನಂತರ ಗೆಲುವು…
ಈ ಗೆಲುವಿನ ಮೂಲಕ ಭಾರತ 20 ವರ್ಷಗಳ ನಂತರ ವಿಶ್ವಕಪ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ದಾಖಲಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟ್ ಬೀಸಿದ ಕೀವೀಸ್ ತಂಡ 273 ರನ್ ಗಳಿಸಿತ್ತು. ಇನ್ನು ಭಾರತ ತಂಡ 48 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ಸಾಧಿಸಿತು.
ವಿಶ್ವಕಪ್’ನಲ್ಲಿ ಭಾರತ 2003ರ ನಂತರ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 104 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಂತೆ 95 ರನ್’ಗಳ ಅಮೋಘ ಇನ್ನಿಂಗ್ಸ್ ಆಡಿದರು.
ಇವರಲ್ಲದೆ ನಾಯಕ ರೋಹಿತ್ 46 ರನ್, ರವೀಂದ್ರ ಜಡೇಜಾ ಅಜೇಯ 39 ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆಎಲ್ ರಾಹುಲ್ 27 ರನ್ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು.
ಗೆಲುವಿನ ಬಳಿಕ ರೋಹಿತ್ ಹೇಳಿದ್ದೇನು?
ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, “ಟೂರ್ನಿಯಲ್ಲಿ ಶುಭಾರಂಭ. ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಸಮತೋಲಿತವಾಗಿರುವುದು ಮುಖ್ಯ. ತುಂಬಾ ಮುಂದೆ ಯೋಚಿಸಬಾರದು. ವರ್ತಮಾನದಲ್ಲಿ ಉಳಿಯುವುದು ಮುಖ್ಯ” ಎಂದರು.
ವೇಗಿ ಮೊಹಮ್ಮದ್ ಶಮಿ ಅವರನ್ನು ಹೊಗಳಿದ ರೋಹಿತ್ ಶರ್ಮಾ, ಅವರನ್ನು ಕ್ಲಾಸ್ ಪ್ಲೇಯರ್ ಎಂದು ಬಣ್ಣಿಸಿದ್ದಾರೆ. ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಸಿಕ್ಕ ಅವಕಾಶವನ್ನು ಶಮಿ ಎರಡೂ ಕೈಗಳಿಂದ ಸದುಪಯೋಗಪಡಿಸಿಕೊಂಡರು ಎಂದು ರೋಹಿತ್ ಹೇಳಿದ್ದಾರೆ. “ಅವನಿಗೆ ಅನುಭವವಿದೆ. ಒಂದು ಸಮಯದಲ್ಲಿ 300ಕ್ಕಿಂತ ಹೆಚ್ಚು ಅಂಕ ಗಳಿಸಬಹುದು ಎಂದುಕೊಂಡಿದ್ದೆವು. ಆದರೆ ಪಂದ್ಯ ತಿರುವು ಪಡೆಯಿತು. ಇದರ ಶ್ರೇಯ ನಮ್ಮ ಬೌಲರ್’ಗಳಿಗೆ ಸಲ್ಲುತ್ತದೆ” ಎಂದರು.
ಇದನ್ನೂ ಓದಿ: ಒತ್ತಡ ತಡೆಯೋ ತಾಕತ್ ಇಲ್ಲಾಂದ್ರೆ ಭಾರತಕ್ಕೆ ಬರಬೇಡಿ: ಪಾಕ್ ಆಟಗಾರರಿಗೆ ಶ್ರೀಶಾಂತ್ ಹೀಗಂದಿದ್ದೇಕೆ?
ಕೊಹ್ಲಿ-ಜಡೇಜಾ ಗೆಲುವಿಗೆ ಕಾರಣ:
“ನಾನು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಗೆಲುವಿನಿಂದ ಸಂತೋಷವಾಗಿದೆ. ವಿರಾಟ್ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಹಲವು ವರ್ಷಗಳಿಂದ ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ. ಅವನು ಕೆಲಸ ಮಾಡಲು ಸಿದ್ಧನಾಗಿರುತ್ತಾನೆ. ಕೆಲವು ವಿಕೆಟ್’ಗಳ ಪತನದಿಂದ ಕೊನೆಯಲ್ಲಿ ಸ್ವಲ್ಪ ಒತ್ತಡವಿತ್ತು, ಆದರೆ ಕೊಹ್ಲಿ ಮತ್ತು ಜಡೇಜಾ ನಮಗೆ ಗೆಲುವು ನೀಡಿದರು. ಇಂದು ಫೀಲ್ಡಿಂಗ್ ಅಷ್ಟೊಂದು ಚೆನ್ನಾಗಿರಲಿಲ್ಲ. ಕೆಲವು ಕ್ಯಾಚ್’ಗಳು ಮಿಸ್ ಆಗಿದ್ದವು. ಅದೊಂದು ಬಿಟ್ಟರೆ ಎಲ್ಲವೂ ಚೆನ್ನಾಗಿದೆ” ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.