S Sreesanth Statement on Pakistan: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ 2023ರಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು ಕಳಪೆ ಪ್ರದರ್ಶನವನ್ನು ನೀಡುತ್ತಿದೆ. ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಸೋಲಿನ ನಂತರ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು ನಡೆದ ಪಂದ್ಯದಲ್ಲಿ ಭಾರತದ ಬೌಲರ್’ಗಳ ಮುಂದೆ ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ಕುಗ್ಗಿಹೋಗಿತ್ತು ಎಲ್ಲರಿಗೂ ತಿಳಿದೇ ಇದೆ.
ಇದನ್ನೂ ಓದಿ: 20 ವರ್ಷಗಳ ಬಳಿಕ ಕೀವೀಸ್ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ: ಕೊಹ್ಲಿ-ಶಮಿ ಮೋಡಿಗೆ ಅಜೇಯ ‘ಭಾರತ’ಕ್ಕೆ ಭರ್ಜರಿ ಗೆಲುವು
ಪಂದ್ಯದ ಆರಂಭದಲ್ಲಿ ಪಾಕಿಸ್ತಾನದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 155 ರನ್ ಆಗಿತ್ತು. ಆದರೆ ಮಧ್ಯಮ ಓವರ್’ಗಳಲ್ಲಿ ಬೌಲರ್’ಗಳ ದಾಳಿಗೆ ಸಿಲುಕಿದ ಪಾಕಿಸ್ತಾನ, ಉಳಿದ ಎಂಟು ವಿಕೆಟ್’ಗಳನ್ನು ಕೇವಲ 36 ರನ್’ಗಳಿಗೆ ಕಳೆದುಕೊಂಡಿತ್ತು. ಈ ಮೂಲಕ ಪಾಕಿಸ್ತಾನ ತಂಡ 191 ರನ್’ಗಳಿಗೆ ಆಲೌಟ್ ಆಯಿತು.
ಈ ಬಳಿಕ ಭಾರತ ತಂಡ ಗೆಲುವಿನ ಗುರಿ ಬೆನ್ನತ್ತಿತ್ತು. ನಾಯಕ ರೋಹಿತ್ ಶರ್ಮಾ ಅವರ ಅದ್ಭುತ ಇನ್ನಿಂಗ್ಸ್’ನಿಂದ 63 ಎಸೆತಗಳಲ್ಲಿ 86 ರನ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದಿಂದಾಗಿ ಭಾರತ 30.3 ಓವರ್’ಗಳಲ್ಲಿ ಪಂದ್ಯ ಪೂರ್ಣಗೊಳಿಸಿತು.
ಪಂದ್ಯದ ನಂತರ ಈ ಸೋಲಿನ ಬಗ್ಗೆ ಮಾತನಾಡಿದ ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಅಹಮದಾಬಾದ್’ನ ಕ್ರೀಡಾಂಗಣದಲ್ಲಿ ತಂಡದ ತಂತ್ರ ಅಥವಾ ಬ್ಯಾಟ್ಸ್‌ಮನ್’ಗಳ ಕಳಪೆ ಶಾಟ್ ಆಯ್ಕೆಗಿಂತ ಪಾಕಿಸ್ತಾನದ ಬೆಂಬಲದ ಕೊರತೆಯ ಬಗ್ಗೆ ಮಾತನಾಡಿದರು.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಇಂದು ರಾತ್ರಿ ಐಸಿಸಿ ಈವೆಂಟ್’ನಂತೆ ಅನಿಸಿರಲಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ಕಾಣುತ್ತಿತ್ತು. ಇದು ಬಿಸಿಸಿಐ ಕಾರ್ಯಕ್ರಮದಂತೆ ಕಾಣುತ್ತದೆ. ಇಂದು ರಾತ್ರಿ ದಿಲ್ ದಿಲ್ ಪಾಕಿಸ್ತಾನ್ ಕೇಳಲಿಲ್ಲ” ಎಂದಿದ್ದರು.
ಈ ಅಸಂಬದ್ಧ ಹೇಳಿಕೆಯ ನಂತರ, ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಂ ಜೊತೆಗೆ ಅನೇಕ ಮಾಜಿ ಆಟಗಾರರು ಆರ್ಥರ್ ಅವರನ್ನು ಟೀಕಿಸಿದರು. ಇವರಷ್ಟೇ ಅಲ್ಲದೆ, 2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಎಸ್ ಶ್ರೀಶಾಂತ್ ಕೂಡ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಉಡೀಸ್: ವಿಶ್ವಕಪ್’ನಲ್ಲಿ ಇದುವರೆಗೆ ಯಾರೂ ಬರೆಯದ ದಾಖಲೆ
ಭಾರತದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಮಾತನಾಡುತ್ತಾ, “ನೋಡಿ, ನೀವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನೀವು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆಯುತ್ತೀರಿ. ನೀವು ಕಳಪೆ ಪ್ರದರ್ಶನ ನೀಡಿದರೆ ನಿಮ್ಮನ್ನು ಟೀಕಿಸಲಾಗುತ್ತದೆ. ತಂಡವಾಗಿ ನೀವು ಎರಡಕ್ಕೂ ಸಿದ್ಧರಾಗಿರಬೇಕು. ಮಹಿ ಭಾಯ್ ಯಾವಾಗಲೂ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಲು ಹೇಳುತ್ತಿದ್ದರು ಏಕೆಂದರೆ ಯಾವಾಗಲೂ ಒತ್ತಡವಿರುತ್ತದೆ. ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಭಾರತಕ್ಕೆ ಬರಬೇಡಿ. ತಿರುಗಿ ಹೋಗಿ” ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.