How many matches Team India need to win to enter World Cup semi final: ವಿಶ್ವಕಪ್’ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. 12 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ, ಈ ಎಲ್ಲದರ ಮಧ್ಯೆ ಇನ್ನೆಷ್ಟು ಪಂದ್ಯಗಳನ್ನು ಗೆದ್ದರೆ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶ ಪಡೆಯುತ್ತೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲವಾದರೆ ಈ ವರದಿಯಲ್ಲಿ ನಾವಿಂದು ಮಾಹಿತಿಯನ್ನು ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್ ಮುಂದಿನ ಪಂದ್ಯದಿಂದ ಟೀಂ ಇಂಡಿಯಾದ ಈ ಮ್ಯಾಚ್ ವಿನ್ನರ್ ಔಟ್ ! ಹಾಗಿದ್ದರೆ ಯಾರಿಗೆ ಸ್ಥಾನ ? 


ಈ ಬಾರಿಯ ವಿಶ್ವಕಪ್‌ 2023 ಟೂರ್ನಿಯನ್ನು ಎರಡು ವಿಭಾಗಗಳಾಗಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ತಂಡವು 9 ಪಂದ್ಯಗಳನ್ನು ಆಡಬೇಕು. ಅದರಲ್ಲಿ ಕನಿಷ್ಠ 7 ಪಂದ್ಯವನ್ನಾದರು ಗೆದ್ದರೆ ಆ ತಂಡ ಸೆಮಿಫೈನಲ್‌ ಪ್ರವೇಶಿಸುತ್ತದೆ. ಒಂದು ವೇಳೆ 7 ಪಂದ್ಯವನ್ನು 4ಕ್ಕಿಂತ ಹೆಚ್ಚಿನ ತಂಡಗಳು ಸಮಾನವಾಗಿ ಗೆದ್ದರೆ, ಆಗ ನೆಟ್ ರನ್ ರೇಟ್ ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.


ಇನ್ನು ಭಾರತ ತಂಡ ಈಗಾಗಲೇ ನಾಲ್ಕು ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲೂ ಬಲಿಷ್ಠ ತಂಡಗಳನ್ನು ಸೋಲಿಸಿದೆ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ,


ಅಂದಹಾಗೆ ಮೇಲಿನ ಲೆಕ್ಕಾಚಾರದ ಅನುಸಾರ ನೋಡುವುದಾದರೆ, ಟೀಂ ಇಂಡಿಯಾ ಇನ್ನು ಮೂರು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಪ್ರವೇಶಿಸುತ್ತದೆ. ಈಗಾಗಲೇ ಭಾರತವನ್ನು ವಿಶ್ವಕಪ್ ಗೆಲ್ಲುವ ತಂಡಗಳ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ,


ಇದನ್ನೂ ಓದಿ: ಮೊದಲ ಬಾರಿಗೆ ಮಹಿಳಾ ಪೋಲೀಸರಿಂದ ಎನ್ ಕೌಂಟರ್ ! ನವರಾತ್ರಿ ವೇಳೆ ದುರ್ಗೆ ರೂಪ ತಾಳಿ ದುಷ್ಟರಿಗೆ ಶಿಕ್ಷೆ 


ಕೊನೆಯದಾಗಿ ಪಾಯಿಂಟ್ ಟೇಬಲ್’ನಲ್ಲಿರುವ ಟಾಪ್‌ 4 ತಂಡಗಳ ನಡುವೆ ಸೆಮಿ ಫೈನಲ್ ನಡೆಯಲಿದೆ. ಅದರಲ್ಲಿ ಫೈನಲ್’ಗಾಗಿ 1 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಹಾಗೂ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಡಲಿದೆ. ಇಲ್ಲಿ ಗೆದ್ದ 2 ತಂಡಗಳು ಫೈನಲ್‌ ಪ್ರವೇಶಿಸಿ ಟ್ರೋಫಿ ಗೆಲ್ಲಲು ಹೋರಾಡಲಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್