ನೆದರ್ಲ್ಯಾಂಡ್ಸ್ ವಿರುದ್ಧ ಅದ್ಭುತ ಶತಕ: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್
David Warner: ವಾರ್ನರ್ ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಿಶ್ವಕಪ್’ನಲ್ಲಿ ಇದು ಅವರ ಆರನೇ ಶತಕವಾಗಿದೆ.
AUS vs NED: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದು ವಾರ್ನರ್ ಅವರ ODI ವೃತ್ತಿಜೀವನದ 22 ನೇ ಶತಕ ಮತ್ತು ಈ ವಿಶ್ವಕಪ್’ನಲ್ಲಿ ಅವರ ಸತತ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ 163 ರನ್’ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಈ ಶತಕದ ಆಧಾರದ ಮೇಲೆ, ವಾರ್ನರ್ ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಿಶ್ವಕಪ್’ನಲ್ಲಿ ಇದು ಅವರ ಆರನೇ ಶತಕವಾಗಿದೆ.
ಇದನ್ನೂ ಓದಿ: ನನಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ನೀವು ಇನ್ನೂ: ವಿರಾಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಹೀಗಂದಿದ್ದೇಕೆ
ಮತ್ತೊಂದೆಡೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್’ನಲ್ಲಿ ಸಚಿನ್ ಅವರ ಹೆಸರಿನಲ್ಲಿ 6 ಶತಕಗಳಿವೆ. ಅಂದಹಾಗೆ ವಿಶ್ವಕಪ್’ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ 7 ಶತಕ ಸಿಡಿಸಿರುವ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
ರೋಹಿತ್ ಶರ್ಮಾ- 7
ಸಚಿನ್ ತೆಂಡೂಲ್ಕರ್- 6
ಡೇವಿಡ್ ವಾರ್ನರ್- 6
ಕುಮಾರ್ ಸಂಗಕ್ಕಾರ- 5
ರಿಕಿ ಪಾಂಟಿಂಗ್- 5
ಸೌರವ್ ಗಂಗೂಲಿ- 4
ವಾರ್ನರ್ ಅವರು ವಿಶ್ವಕಪ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿದ ಆಸ್ಟ್ರೇಲಿಯಾದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾರ್ಕ್ ವಾ, ರಿಕಿ ಪಾಂಟಿಂಗ್ ಮತ್ತು ಮ್ಯಾಥ್ಯೂ ಹೇಡನ್ ಈ ಸಾಧನೆ ಮಾಡಿದ್ದರು. 91 ಎಸೆತಗಳಲ್ಲಿ ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದ ವಾರ್ನರ್ ನಂತರ 104 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದರು.
ಕಡಿಮೆ ಇನ್ನಿಂಗ್ಸ್’ನಲ್ಲಿ ODI ಶತಕಗಳು:
126 - ಹಾಶಿಮ್ ಆಮ್ಲ
143-ವಿರಾಟ್ ಕೊಹ್ಲಿ
153 – ಡೇವಿಡ್ ವಾರ್ನರ್*
186 - ಎಬಿ ಡಿವಿಲಿಯರ್ಸ್
188 - ರೋಹಿತ್ ಶರ್ಮಾ
ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ಪರ ಸತತ ಶತಕ
2 – ಮಾರ್ಕ್ ವಾ (1996)
2 – ರಿಕಿ ಪಾಂಟಿಂಗ್ (2003-07)
2 – ಮ್ಯಾಥ್ಯೂ ಹೇಡನ್ (2007)
2 – ಡೇವಿಡ್ ವಾರ್ನರ್ (2023)*
ವಿಶ್ವಕಪ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ಆರಂಭಿಕ ಆಟಗಾರ
16 - ಸಚಿನ್ ತೆಂಡೂಲ್ಕರ್
11 - ರೋಹಿತ್ ಶರ್ಮಾ
9 - ಆಡಮ್ ಗಿಲ್‌ಕ್ರಿಸ್ಟ್
9 – ಸನತ್ ಜಯಸೂರ್ಯ
9 - ಡೇವಿಡ್ ವಾರ್ನರ್
8 - ಕ್ರಿಸ್ ಗೇಲ್
ಪುರುಷರ ODI ವಿಶ್ವಕಪ್’ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್‌ಗಳು
1767: ಸಚಿನ್ ತೆಂಡೂಲ್ಕರ್
1303 : ಡೇವಿಡ್ ವಾರ್ನರ್
1289: ರೋಹಿತ್ ಶರ್ಮಾ
ಇದನ್ನೂ ಓದಿ: 40 ಎಸೆತಕ್ಕೆ ಗ್ಲೆನ್ ಮ್ಯಾಕ್ಸ್’ವೆಲ್ ಸ್ಪೋಟಕ ಶತಕ! ಅತಿ ವೇಗದ ಸೆಂಚುರಿ ಬಾರಿಸಿದ ಆಸೀಸ್ ಆಟಗಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ