World Cup 2023 Points Table : ವಿಶ್ವಕಪ್ 2023ರ 39 ನೇ ಪಂದ್ಯವು ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯವಾಗಿತ್ತು. ಬಹುತೇಕ ಸೋಲಿನ ಅಂಚಿನಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಗೆಲುವಿನ ದಡ ಸೇರಿಸಿದರು. ಮ್ಯಾಕ್ಸ್‌ವೆಲ್ ಅವರ 201 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು 3 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ಪ್ರದರ್ಶನ ತೋರಿದರು. ಇಷ್ಟು ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ರನ್ ಚೇಸ್ ಇನ್ನಿಂಗ್ಸ್ ಯಾವ ಬ್ಯಾಟ್ಸ್ ಮನ್ ನಿಂದಲೂ ಕಾಣ ಸಿಗಲಿಲ್ಲ. ಆಸ್ಟ್ರೇಲಿಯಾದ ಈ ಗೆಲುವಿನೊಂದಿಗೆ ಒಂದು ತಂಡ ವಿಶ್ವಕಪ್ ನಿಂದ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಜನಮಾನಸದಲ್ಲಿ ಉಳಿಯಲಿದೆ ದ್ವಿಶತಕ : 
ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ 7 ಬ್ಯಾಟ್ಸ್‌ಮನ್‌ಗಳು 91 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ್ದರು. ಇನ್ನು ಕೆಲವೇ ಓವರ್ ಗಳಲ್ಲಿ ಅಫ್ಘಾನಿಸ್ತಾನ ಪಂದ್ಯ ಗೆಲ್ಲಲಿದೆ ಎಂಬ ವಿಶ್ವಾಸ ಕ್ರೀಡಾಂಗಣದಲ್ಲಿ ಕುಳಿತಿದ್ದ ಅಭಿಮಾನಿಗಳಿಂದ ಹಿಡಿದು ಆಟಗಾರರವರೆಗೂ ಇತ್ತು. ಆದರೆ ಆಟದ ದಿಕ್ಕನ್ನೇ ಬದಲಾಯಿಸಿದ್ದು, ಮ್ಯಾಕ್ಸ್‌ವೆಲ್‌. ಒನ್ ಮ್ಯಾನ್ ಆರ್ಮಿಯಂತೆ, ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಗೆಲುವಿನ ದಡ ಸೇರಿಸಿ, ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.  ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 201 ರನ್ ಗಳಿಸಿ ಅಜೇಯ ದ್ವಿಶತಕ  ಬಾರಿಸಿದರು.


ಇದನ್ನೂ ಓದಿ : ಇದೇ ಮೊದಲ ಬಾರಿಗೆ ಇರ್ಫಾನ್ ಪಠಾಣ್ ಮಡದಿಯ ಫೇಸ್ ರಿವೀಲ್! ಏನ್ ಚಂದ ಗುರೂ…ಸೌಂದರ್ಯದ ಗಣಿಯೇ


ಟೂರ್ನಿಯಿಂದ ಈ ಟೀಂ ಔಟ್ : 
ಆಸ್ಟ್ರೇಲಿಯದ ಈ ಗೆಲುವಿನ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿದೆ. ಕಾಂಗರೂ ತಂಡ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಮೂರೂ ತಂಡಗಳು 8-8 ಅಂಕಗಳನ್ನು ಹೊಂದಿದ್ದು, ಇನ್ನೂ 1-1 ಪಂದ್ಯಗಳು ಉಳಿದಿವೆ. ನೆದರ್ಲೆಂಡ್ಸ್ ತಂಡ ಕೂಡಾ ರೇಸ್‌ನಲ್ಲಿದೆ. ಆದರೆ ಅರ್ಹತೆ ಪಡೆಯುವ ಸಾಧ್ಯತೆಗಳು ಅತ್ಯಲ್ಪ. ನೆದರ್ಲೆಂಡ್ಸ್ ತಂಡ ಬಹುತೇಕ ಎಲಿಮಿನೇಷನ್‌ನ ಅಂಚಿನಲ್ಲಿದೆ. ತಂಡವು ಪ್ರಸ್ತುತ 7 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ. ಮುಂಬರುವ ಎರಡು ಪಂದ್ಯಗಳು ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಗೆಲುವು ಸುಲಭವಲ್ಲ. ಹೀಗಾಗಿ ನೆದರ್ಲೆಂಡ್ಸ್ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತರೆ ಟೂರ್ನಿಯಿಂದ ಹೊರಬಿದ್ದ ನಾಲ್ಕನೇ ತಂಡ ಎನಿಸಿಕೊಳ್ಳಲಿದೆ.


ಇದನ್ನೂ ಓದಿ : Photo Gallery: ಆಫ್ಘಾನ್ ವಿರುದ್ಧ ಮ್ಯಾಕ್ಸ್ವೆಲ್ ದಾಖಲೆಯ ದ್ವಿಶತಕ, ಹಲವು ದಾಖಲೆ ಬರೆದ ಐತಿಹಾಸಿಕ ಇನಿಂಗ್ಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ