World Cup : ಟಾಪ್ 4 ರಲ್ಲಿ ಈ ತಂಡಗಳು ! ಪಾಯಿಂಟ್ ಟೇಬಲ್ ಸ್ಪಷ್ಟ ಚಿತ್ರಣ ಇಲ್ಲಿದೆ
World Cup 2023 Updated Points Table:ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಆದರೆ ಇದರೊಂದಿಗೆ ಟಾಪ್ -4 ಅನ್ನು ಪ್ರವೇಶಿಸುವ ಉಳಿದ ಮೂರು ತಂಡಗಳ ಚಿತ್ರಣವೂ ಸ್ಪಷ್ಟವಾಗುತ್ತಿದೆ
World Cup 2023 Updated Points Table : ನಿನ್ನೆ ಲಕ್ನೋದ ಇಕಾನಾ ಕ್ರೀಡಾಂಗಣದಲ್ಲಿ ಇಂಡಿಯಾ ... ಇಂಡಿಯಾ ಎನ್ನುವ ಘೋಷ ನಿರಂತರವಾಗಿ ಕೇಳಿಸುತ್ತಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ವಿಶೇಷ ಫಾರ್ಮ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ಬೌಲರ್‌ಗಳ ಅಬ್ಬರವಿತ್ತು. ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಸಾರಥ್ಯದ ಭಾರತ 9 ವಿಕೆಟ್‌ಗೆ 229 ರನ್ ಗಳಿಸಿತು. ಆದರೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ಸೋಲೋಪ್ಪಿಕೊಂಡಿತು. ಭಾರತದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು 129 ರನ್‌ಗಳಿಗೆ ಕಟ್ಟಿ ಹಾಕಿ, ತಂಡಕ್ಕೆ 100 ರನ್‌ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ.
ಸೆಮಿಫೈನಲ್‌ಗೆ ಒಂದೆ ಹೆಜ್ಜೆ ಬಾಕಿ :
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಜಯ ದಾಖಲಿಸುವ ಮೂಲಕ ತನ್ನ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ತಂಡ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ ಇದುವರೆಗೂ ಆತಿಥೇಯ ಭಾರತ ಯಾವ ಪಂದ್ಯವನ್ನೂ ಸೋತಿಲ್ಲ. ನೇರ ಟಾಪ್-4ಗೆ ಪ್ರವೇಶಿಸಲು ಭಾರತ ಉಳಿದ ಮೂರರಲ್ಲಿ ಕೇವಲ 1 ಪಂದ್ಯವನ್ನು ಗೆಲ್ಲಬೇಕು. ಭಾರತದ ಮುಂದಿನ ಪಂದ್ಯ ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ.
ಇದನ್ನೂ ಓದಿ : ಟೀಂ ಇಂಡಿಯಾದ ಬೌಲರ್‌ಗಳು ........! ಶಮಿ, ಬುಮ್ರಾ ಬಗ್ಗೆ ವಾಸಿಂ ಅಕ್ರಂ ಹೇಳಿದ್ದೇನು ?
ಟಾಪ್-4ಗೆ ಪ್ರಬಲ ಸ್ಪರ್ಧಿ ಈ ತಂಡಗಳು :
ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಆದರೆ ಇದರೊಂದಿಗೆ ಟಾಪ್ -4 ಅನ್ನು ಪ್ರವೇಶಿಸುವ ಉಳಿದ ಮೂರು ತಂಡಗಳ ಚಿತ್ರಣವೂ ಸ್ಪಷ್ಟವಾಗುತ್ತಿದೆ. ದಕ್ಷಿಣ ಆಫ್ರಿಕಾ (10 ಅಂಕ), ನ್ಯೂಜಿಲೆಂಡ್ (8 ಅಂಕ) ಮತ್ತು ಆಸ್ಟ್ರೇಲಿಯಾ (8 ಅಂಕ) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಈ ಮೂರು ತಂಡಗಳು ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ಮೂರರಲ್ಲಿ ಎರಡರಲ್ಲಿ ಗೆದ್ದರೆ ಸೆಮಿಫೈನಲ್ ಸ್ಥಾನ ಖಚಿತ.
ಈ ತಂಡಗಳು ಆಟವನ್ನು ಹಾಳುಮಾಡಬಹುದು :
ದಕ್ಷಿಣ ಆಫ್ರಿಕಾ ಟಾಪ್ 4 ತಲುಪುವುದು ಬಹುತೇಕ ಖಚಿತವಾಗಿದೆ. ಆದರೆ ಇತರ ತಂಡಗಳು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಆಟವನ್ನು ಹಾಳುಮಾಡಬಹುದು. ಟೂರ್ನಿಯಿಂದ ಹೊರಬಿದ್ದಿರುವ ಇಂಗ್ಲೆಂಡ್ ಆಸ್ಟ್ರೇಲಿಯ ವಿರುದ್ಧ ಪಂದ್ಯ ಆಡಬೇಕಿದೆ. ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯಗಳಲ್ಲಿನ ಸೋಲು ಕೂಡಾ ಟಾಪ್ 4 ನಿಂದ ತಂಡವನ್ನು ಕೆಳಕ್ಕೆ ಬೀಳಿಸಬಹುದು. ಪಾಯಿಂಟ್ ಪಟ್ಟಿಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಟಾಪ್ 4ರ ಹೊರತಾಗಿ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಕೂಡಾ ಸೆಮಿಫೈನಲ್ ರೇಸ್‌ನಲ್ಲಿವೆ. ಈ ತಂಡಗಳು 4 ಅಂಕಗಳನ್ನು ಹೊಂದಿವೆ. ಆದರೆ ಟಾಪ್-4 ಗಾಗಿ, ಈ ತಂಡಗಳು ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು ಅದು ಅಂದುಕೊಂಡಷ್ಟು ಸುಲಭವಲ್ಲ.
ಇದನ್ನೂ ಓದಿ : ವಿಶ್ವಕಪ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್ ಗೆ ಈಗ ಚಾಂಪಿಯನ್ ಟ್ರೋಪಿಯದ್ದೇ ಚಿಂತೆ..? ಕಾರಣವೇನು ಗೊತ್ತೇ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ