ಟೀಂ ಇಂಡಿಯಾದ ಬೌಲರ್‌ಗಳು ........! ಶಮಿ, ಬುಮ್ರಾ ಬಗ್ಗೆ ವಾಸಿಂ ಅಕ್ರಂ ಹೇಳಿದ್ದೇನು ?

Wasim Akram On Team India Bowlers : ಲಕ್ನೋದ ಇಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ರೋಚಕ ಪಂದ್ಯ ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು  ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.   

Written by - Ranjitha R K | Last Updated : Oct 30, 2023, 12:52 PM IST
  • ಭಾರತ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
  • ಒಂದು ಪಂದ್ಯವನ್ನು ಗೆದ್ದರೆ ಭಾರತ ಸೆಮಿ ಫೈನಲ್ ಗೆ
  • ಭಾರತ ತಂಡದ ಬಗ್ಗೆ ವಾಸಿಂ ಅಕ್ರಂ ಹೇಳಿದ್ದೇನು
ಟೀಂ ಇಂಡಿಯಾದ ಬೌಲರ್‌ಗಳು ........! ಶಮಿ, ಬುಮ್ರಾ ಬಗ್ಗೆ ವಾಸಿಂ ಅಕ್ರಂ ಹೇಳಿದ್ದೇನು ? title=

Wasim Akram On Team India Bowlers : 2023ರ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 100 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಇನ್ನು ಕೇವಲ ಒಂದು ಪಂದ್ಯವನ್ನು ಗೆದ್ದರೆ ಭಾರತ ಸೆಮಿ ಫೈನಲ್ ತಲುಪುವುದು ಸಾಧ್ಯವಾಗುತ್ತದೆ. ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹೇಳಿಕೆ ನೀಡಿದ್ದಾರೆ. ತಂಡದ ಬೌಲರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. 

ವಾಸಿಂ ಅಕ್ರಂ  ಹೇಳಿದ್ದೇನು ? : 
ಪಾಕಿಸ್ತಾನದ ಅನುಭವಿ ಬೌಲರ್ ವಾಸಿಂ ಅಕ್ರಮ್ ಇಂಗ್ಲೆಂಡ್ ವಿರುದ್ಧ ಭಾರತದ ಅದ್ಭುತ ಪ್ರದರ್ಶನಡ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾವನ್ನು ಹಾಡಿ ಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಭಾರತೀಯ ಫಾಸ್ಟ್ ಬೌಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅಕ್ರಮ್, 'ಟೀಮ್ ಇಂಡಿಯಾದ  ಫಾಸ್ಟ್ ಬೌಲರ್‌ಗಳು ಅದ್ಭುತ  ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವದ ಅತ್ಯಂತ ಯಶಸ್ವಿ ಬೌಲರ್‌ಗಳ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಬುಮ್ರಾ ಮತ್ತು ಸಿರಾಜ್ ಅತ್ಯುತ್ತಮ ಬೌಲಿಂಗ್ ಅನ್ನು ಕೊಂಡಾಡಿದ್ದಾರೆ. 

ಇದನ್ನೂ ಓದಿ : ವಿಶ್ವಕಪ್’ನಲ್ಲಿ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ: ಸಚಿನ್, ಕೊಹ್ಲಿ ಬಳಿಕ ಈ ಸಾಧನೆಗೈದ 5ನೇ ಕ್ರಿಕೆಟಿಗ

ಇಂಗ್ಲೆಂಡ್ ಗೆಲ್ಲಬಹುದಿತ್ತು : 
ರೋಹಿತ್ ಬ್ಯಾಟಿಂಗ್ ಬಗ್ಗೆ ಕೂಡಾ ಅಕ್ರಂ  ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲುತ್ತದೆ ಎಂದು ಭಾವಿಸಿದ್ದೆವು. ಆದರೆ ಹಾಗಾಗಲಿಲ್ಲ. ಬ್ಯಾಟಿಂಗ್ ಇಲ್ಲಿ ಅಷ್ಟು ಸುಲಭವಾಗಿರಲಿಲ್ಲ ಎಂದಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 87 ರನ್‌ ಗಳಿಸಿದ್ದು, ಭಾರತ 229 ರನ್‌ಗಳನ್ನು ತಲುಪುವುದು ಸಾಧ್ಯವಾಯಿತು. 

ಕೆಳ ಕ್ರಮಾಂಕ ಬ್ಯಾಟ್ಸ್‌ಮನ್‌ಗಳ ಬಗ್ಗೆಯೂ ಮೆಚ್ಚುಗೆ : 
ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನೂ ಅಕ್ರಂ ಹೊಗಳಿದ್ದಾರೆ.  ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ 49 ರನ್ ಗಳಿಸಿದರು. ಭಾರತದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬುಮ್ರಾ ಮತ್ತು ಕುಲದೀಪ್ 9ನೇ ವಿಕೆಟ್‌ಗೆ 21 ರನ್ ಸೇರಿಸಿದರು. ಈ 21 ರನ್‌ಗಳು  50-60 ರನ್‌ಗಳಿಗೆ ಸಮಾನ ಎಂದು ಹೊಗಳದ್ದಾರೆ.  

ಇದನ್ನೂ ಓದಿ : ತೊಡೆಯ ಗಾಯಕ್ಕೆ ತುತ್ತಾದ ಮ್ಯಾಚ್ ವಿನ್ನರ್ ವಿಶ್ವಕಪ್’ನಿಂದ ರೂಲ್ಡೌಟ್! 31ರ ಹರೆಯದ ಬಲಗೈ ಫಾಸ್ಟ್ ಬೌಲರ್’ಗೆ ಬದಲಿ ಸ್ಥಾನ

ಪಂದ್ಯ ಹೀಗಿತ್ತು: 
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಇದರಲ್ಲಿ ರೋಹಿತ್ ಶರ್ಮಾ 87 ರನ್ ಮತ್ತು ಸೂರ್ಯಕುಮಾರ್ ಯಾದವ್ 49 ರನ್ ಸೇರಿದ್ದರು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಭಾರತದ ಬೌಲರ್‌ಗಳನ್ನು ಎದುರಿಸಲಾಗದೆ 129 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಶಮಿ ಗರಿಷ್ಠ 4 ವಿಕೆಟ್ ಪಡೆದರು. ಇವರಲ್ಲದೆ, ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್  ಕಬಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News