Rohit Sharmas statement: ವಿಶ್ವಕಪ್‌’ನಲ್ಲಿ ಭಾರತಕ್ಕೆ ಇದು ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡ 9 ಬೌಲರ್‌’ಗಳನ್ನು ಬೌಲಿಂಗ್’ಗೆ ಇಳಿಸಿದ್ದು ಮಾತ್ರ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ಇದರ ಹಿಂದಿನ ನಿಜವಾದ ಕಾರಣವನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತದ ಬೌಲಿಂಗ್ ಓಪನಿಂಗ್ ಮಾಡಿದರು. ಆ ಬಳಿಕ ಮೊಹಮ್ಮದ್ ಸಿರಾಜ್ ಆಗಮಿಸಿದರು, ಇಬ್ಬರೂ ಕೂಡ ತಲಾ ಎರಡು ವಿಕೆಟ್ ಪಡೆದರು. ಈ ಬಳಿಕ ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ಬೌಲಿಂಗ್ ಮಾಡಿದರು. ಇವರಿಷ್ಟು ಮಂದಿ ಭಾರತದ ಬೌಲಿಂಗ್ ಸ್ಕ್ವಾಡ್’ನಲ್ಲಿರುವ ಚತುರ ಮಣಿಗಳು.


ಇದನ್ನೂ ಓದಿ: ವಿಶ್ವಕಪ್’ನಲ್ಲಿ ಮಹತ್ವದ ದಾಖಲೆ ಬರೆದ ಟೀಂ ಇಂಡಿಯಾ- 16 ವರ್ಷಗಳ ಬಳಿಕ ಮೊದಲ ಬಾರಿ ನಡೆಯಿತು ಈ ಘಟನೆ


ಆದರೆ ಇವರ ಹೊರತಾಗಿ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಬೌಲಿಂಗ್ ಮಾಡಿದ್ದರು. ಈ ನಾಲ್ವರಲ್ಲಿ ವಿರಾಟ್ ಮತ್ತು ರೋಹಿತ್ ವಿಕೆಟ್ ಪಡೆದರು.


ಭಾರತದ ಒಂಬತ್ತನೇ ಪಂದ್ಯದಲ್ಲಿ 9 ಬೌಲರ್‌’ಗಳನ್ನು ಕಣಕ್ಕಿಳಿಸಿದ್ದೇಕೆ ಎಂಬುದೇ ಸದ್ಯದ ಪ್ರಶ್ನೆ. ಇದಕ್ಕೆ ಉತ್ತರಿಸಿದ ರೋಹಿತ್, "ನಾವು ಈ ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ 9 ಬೌಲರ್‌’ಗಳನ್ನು ಬಳಸಿದ್ದೇವೆ. ಈ ಪಂದ್ಯದಲ್ಲಿ ನಮಗೆ ಆ ಅವಕಾಶ ಸಿಕ್ಕಿತು. ಹಾಗಾಗಿ ನಾವು ಪ್ರಯೋಗ ಮಾಡಲು ಸಾಧ್ಯವಾಯಿತು. ತಂಡದಲ್ಲಿ ವಿಭಿನ್ನ ಬೌಲಿಂಗ್ ಆಯ್ಕೆಗಳು ಇರಬೇಕು. ಇನ್ನು ಈ ಪಂದ್ಯದಲ್ಲಿ ಅಯ್ಯರ್ ಮತ್ತು ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದರು.


“ನಾವು ಹಿಡಿತ ಸಾಧಿಸಿದ್ದೇವೆ. ಅದೇ ಸಮಯದಲ್ಲಿ ಬೌಲಿಂಗ್‌’ನಲ್ಲಿ ಸಾಕಷ್ಟು ವೈವಿಧ್ಯತೆಯನ್ನು ನೋಡಬೇಕಾಗಿದೆ. ನಾವು ಈ ಪಂದ್ಯದಲ್ಲಿ 9 ಬೌಲರ್‌’ಗಳನ್ನು ಬಳಸಿದ್ದೇವೆ. ಈ ಮೂಲಕ ವೈವಿಧ್ಯತೆ ಕಾಣಲು ಸಾಧ್ಯವಾಯಿತು. ಈ ಮೂಲಕ ನಾವು ಅನೇಕ ಬೌಲಿಂಗ್ ಆಯ್ಕೆಗಳನ್ನು ಹೊಂದಿದ್ದೇವೆ ಎಂಬುದು ಖಚಿತವಾಯಿತು. ಇದು ಖಂಡಿತವಾಗಿಯೂ ನಮಗೆ ಪ್ರಯೋಜನವನ್ನು ನೀಡುತ್ತದೆ" ಎಂದರು.


ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 160 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ ಸತತ ಒಂಬತ್ತನೇ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ 18 ಅಂಕಗಳೊಂದಿಗೆ ಲೀಗ್ ಪಂದ್ಯಗಳನ್ನು ಮುಗಿಸಿದ್ದು, ಮುಂದೆ ಮುಂಬೈನಲ್ಲಿ ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.


ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಕ್ಕ ದುಡ್ಡು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ದಂಗಾಗೋದು ಗ್ಯಾರಂಟಿ


ಈ ಗೆಲುವಿನ ಬಳಿಕ ಮಾತನಾಡಿದ ಕ್ಯಾಪ್ಟನ್, “ಇದೊಂದು ಅದ್ಭುತ ಪ್ರದರ್ಶನ” ಎಂದು ಬಣ್ಣಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪಂದ್ಯಾವಳಿಯಲ್ಲಿ ಹೆಚ್ಚನ್ನು ಏನೂ ನಿರೀಕ್ಷಿಸಿರಲಿಲ್ಲ. ಒಂದು ಸಮಯದಲ್ಲಿ ಒಂದು ಪಂದ್ಯದ ಬಗ್ಗೆ ಯೋಚಿಸುವುದು ಉತ್ತಮ. ನಾವು ಇಲ್ಲಿಯವರೆಗೆ ಮಾಡಿದ ಪ್ರದರ್ಶನವು ಅದ್ಭುತವಾಗಿದೆ. ನಮ್ಮ ಅನೇಕ ಆಟಗಾರರು ಪ್ರತಿ ಪಂದ್ಯದಲ್ಲೂ ಮುಂದೆ ಬಂದು ಜವಾಬ್ದಾರಿಯಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿನ ಪರಿಸ್ಥಿತಿಗಳು ನಮಗೆ ತಿಳಿದಿವೆ ಆದರೆ ಬೇರೆ ಬೇರೆ ತಂಡಗಳ ವಿರುದ್ಧ ಆಡುವುದು ಎಂದಿಗೂ ಸುಲಭವಲ್ಲ” ಎಂದು ಹೇಳಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ