ಸತತ 5 ಪಂದ್ಯ ಗೆದ್ದರೂ ಸೆಮಿಫೈನಲ್ ಪ್ರವೇಶಿಸೋದು ಟೀಂ ಇಂಡಿಯಾಗೆ ಕಷ್ಟ! ಯಾಕೆ ಗೊತ್ತಾ?
qualification for World Cup semi finals: ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸಲು 2 ಪಂದ್ಯಗಳನ್ನು ಗೆದ್ದರೆ ಸಾಕು. ಆದರೆ ಸತತ 5 ಪಂದ್ಯಗಳನ್ನು ಭಾರತ ಗೆದ್ದಿದ್ದರೂ ಸಹ ಸೆಮಿಫೈನಲ್ ಹಾದಿ ಕೊಂಚ ಕಠಿಣವಾಗಿದೆ. ಕಾರಣವೇನೆಂದು ಮುಂದೆ ತಿಳಿದುಕೊಳ್ಳೋಣ.
how many matches India need to win to enter semi finals: ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇದುವರೆಗೆ ಯಾವೊಂದು ಪಂದ್ಯದಲ್ಲೂ ಸೋತಿಲ್ಲ. ಈ ಮೂಲಕ ಅಜೇಯ ತಂಡವಾಗಿ ಪಾಯಿಂಟ್ಸ್ ಟೇಬಲ್’ನಲ್ಲಿ ಅಗ್ರಸ್ಥಾನದಲ್ಲಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಟೀಂ ಇಂಡಿಯಾದ 5ನೇ ಹಣಾಹಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು ಭಾರತ.
ಇನ್ನು ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸಲು 2 ಪಂದ್ಯಗಳನ್ನು ಗೆದ್ದರೆ ಸಾಕು. ಆದರೆ ಸತತ 5 ಪಂದ್ಯಗಳನ್ನು ಭಾರತ ಗೆದ್ದಿದ್ದರೂ ಸಹ ಸೆಮಿಫೈನಲ್ ಹಾದಿ ಕೊಂಚ ಕಠಿಣವಾಗಿದೆ. ಕಾರಣವೇನೆಂದು ಮುಂದೆ ತಿಳಿದುಕೊಳ್ಳೋಣ.
ಕಳೆದ ವಿಶ್ವಕಪ್ ಸಂದರ್ಭದಲ್ಲೂ ಭಾರತ ತಂಡ ಉತ್ತಮ ಫಾರ್ಮ್’ನಲ್ಲಿತ್ತು. ಆದರೆ ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋಲು ಕಂಡು, ಫೈನಲ್ ಪ್ರವೇಶದ ಕನಸು ಕೇವಲ ಕನಸಾಗಿಯೇ ಉಳಿಯಿತು. ಇದೇ ಕಾರಣದಿಂದ ಇದುವರೆಗೂ ಉತ್ತಮ ಪ್ರದರ್ಶನ ನೀಡಿದ ಭಾರತ ಮುನ್ನಡೆ ಸಾಧಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಬೇಕಿದೆ.
ಕೊಂಚ ಎಡವಿದರೂ ಐದು ಪಂದ್ಯಗಳನ್ನು ಗೆದ್ದಿರುವ ಭಾರತ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಭಾರತಕ್ಕೆ ಮುಂದಿನ ಎದುರಾಳಿ ಇಂಗ್ಲೆಂಡ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ. ಈ ಮೂರು ತಂಡಗಳ ಪೈಕಿ ದಕ್ಷಿಣ ಆಫ್ರಿಕಾ ಪ್ರಸ್ತುತ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದೆ.
ಭಾರತದ ಮುಂದಿನ ಪಂದ್ಯ ಅಕ್ಟೋಬರ್ 29 ರಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದರೆ, ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ಕಾದಾಡಲಿದೆ. ಆ ಬಳಿಕ ಭಾರತ ನವೆಂಬರ್ 5ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಬ್ಬರಿಸುತ್ತಿದೆ. ಇದೇ ಕಾರಣದಿಂದ ಕೊಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಭಾರತಕ್ಕೆ ಕಠಿಣವಾಗಲಿದೆ.
ಇದನ್ನೂ ಓದಿ: ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ ಇವರೇ…! ಕುಬೇರನ ಸಂಪತ್ತಿಗಿಂತ ಕಡಿಮೆಯಿಲ್ಲ ಇವರ ಬ್ಯಾಲೆನ್ಸ್
ಇನ್ನು ಕೊನೆಯ ಪಂದ್ಯವನ್ನು ಭಾರತ, ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಸೆಮಿಫೈನಲ್ ಪ್ರವೇಶಿಸಬೇಕೆಂದರೆ ಮತ್ತು ಮೊದಲ ಸ್ಥಾನ ಪಡೆಯಬೇಕೆಂದರೆ ಭಾರತ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ