ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ ಇವರೇ…! ಕುಬೇರನ ಸಂಪತ್ತಿಗಿಂತ ಕಡಿಮೆಯಿಲ್ಲ ಇವರ ಬ್ಯಾಂಕ್ ಬ್ಯಾಲೆನ್ಸ್

List of Bollywood Richest Actors and Actress: ಈ ನಟ-ನಟಿಯರು ತಮ್ಮ ಕಠಿಣ ಪರಿಶ್ರಮ ಮತ್ತು ಅದೃಷ್ಟದಿಂದ ಅಪಾರ ಸಂಪತ್ತನ್ನು ಗಳಿಸಿದ್ದಾರೆ. ಅಂತಹ ನಟ-ನಟಿಯರ ಪೈಕಿ ಅತ್ಯಂತ ಶ್ರೀಮಂತರು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

Written by - Bhavishya Shetty | Last Updated : Oct 26, 2023, 09:59 AM IST
    • ಹಲವಾರು ವರ್ಷಗಳಿಂದ ಬಾಲಿವುಡ್ ಅನ್ನು ಆಳುತ್ತಿರುವ ಅನೇಕ ನಟರಿದ್ದಾರೆ
    • ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ ಯಾರು ಗೊತ್ತಾ?
    • ನಟ-ನಟಿಯರ ಪೈಕಿ ಅತ್ಯಂತ ಶ್ರೀಮಂತರು ಯಾರೆಂದು ತಿಳಿಯೋಣ
ಬಾಲಿವುಡ್’ನ ಅತ್ಯಂತ ಶ್ರೀಮಂತ ನಟ ಇವರೇ…! ಕುಬೇರನ ಸಂಪತ್ತಿಗಿಂತ ಕಡಿಮೆಯಿಲ್ಲ ಇವರ ಬ್ಯಾಂಕ್ ಬ್ಯಾಲೆನ್ಸ್ title=
Bollywood Rich Actor Actresses

Bollywood Richest Actors and Actress: ಹಲವಾರು ವರ್ಷಗಳಿಂದ ಬಾಲಿವುಡ್ ಅನ್ನು ಆಳುತ್ತಿರುವ ಅನೇಕ ನಟರಿದ್ದಾರೆ, ಈ ನಟ-ನಟಿಯರು ತಮ್ಮ ಕಠಿಣ ಪರಿಶ್ರಮ ಮತ್ತು ಅದೃಷ್ಟದಿಂದ ಅಪಾರ ಸಂಪತ್ತನ್ನು ಗಳಿಸಿದ್ದಾರೆ. ಅಂತಹ ನಟ-ನಟಿಯರ ಪೈಕಿ ಅತ್ಯಂತ ಶ್ರೀಮಂತರು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಇದನ್ನೂ ಓದಿ: ಇನ್ನೇನು 5 ದಿನದಲ್ಲಿ ತೆರೆಯಲಿದೆ ಈ ರಾಶಿಯ ಅದೃಷ್ಟದ ಬಾಗಿಲು: ತುಂಬಲಿದೆ ಸಂಪತ್ತಿನ ಕಣಜ, ಉದ್ಯೋಗದಲ್ಲಿ ಬಡ್ತಿ- ವಿದೇಶ ಪ್ರಯಾಣ ಯೋಗ

ಶಾರುಖ್ ಖಾನ್: ಈ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಅಗ್ರಸ್ಥಾನದಲ್ಲಿದೆ. ಶಾರುಖ್ ಬಾಲಿವುಡ್’ನ ಶ್ರೀಮಂತ ನಟ. ಬಾಲಿವುಡ್’ನಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ನಟರ ಟಾಪ್ ಲಿಸ್ಟ್’ನಲ್ಲಿ ಇವರ ಹೆಸರಿದೆ. ಶಾರುಖ್ ಖಾನ್ ಚಲನಚಿತ್ರಗಳು ಮತ್ತು ವ್ಯಾಪಾರದ ಮೂಲಕವೇ ಕುಬೇರ ಸಂಪತ್ತನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಕಳೆದ 30 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಸಿನಿಮಾಗಳಲ್ಲದೆ ವ್ಯಾಪಾರದ ಮೂಲಕವೂ ಅಪಾರ ಸಂಪತ್ತು ಗಳಿಸಿದ್ದಾರೆ. ವಿಶೇಷವೆಂದರೆ ಸಲ್ಮಾನ್ ಇನ್ನೂ ಮದುವೆಯಾಗಿಲ್ಲ, ಹೀಗಾಗಿ ಅವರ ಅಪಾರ ಸಂಪತ್ತಿನ ವಾರಸುದಾರ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಮೀರ್ ಖಾನ್: ಅಮೀರ್ ಖಾನ್ ಕೂಡ ಇಂಡಸ್ಟ್ರಿಯಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಕಳೆದಿರುವ ಮಿಸ್ಟರ್ ಪರ್ಫೆಕ್ಷನಿಸ್ಟ್. ಇವರ ಆಸ್ತಿ ಮೌಲ್ಯ ಕೂಡ ಸಾಕಷ್ಟಿದೆ.

ಅಕ್ಷಯ್ ಕುಮಾರ್: ಸಾಮಾಜಿಕ ಸಂದೇಶಗಳನ್ನೇ ಸಾರುವ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸುವುದು ಹೆಚ್ಚು. ಇನ್ನು ಇಂತಹ ಸಿನಿಮಾಗಳಲ್ಲಿ ಅಭಿನಯಿಸಲು ಅವರು ಹೆಚ್ಚು ಸಂಭಾವನೆ ಪಡೆಯುತ್ತಾರಂತೆ. ಇದಲ್ಲದೇ ಅವರು ಕೋಟಿಗಟ್ಟಲೆ ಗಳಿಸುವ ವ್ಯವಹಾರಗಳನ್ನು ಹೊಂದಿದ್ದಾರೆ. ಇದೇ ಕಾರಣದಿಂದ ಬಾಲಿವುಡ್‌’ನ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ:ಡಿವೋರ್ಸ್ ಬಳಿಕ ಪೋಸ್ಟ್ ಶೇರ್ ಮಾಡಿ ಕಿರಿಕ್ ಕೀರ್ತಿ ಹೇಳಿದ್ದೇನು..?

ಐಶ್ವರ್ಯಾ ರೈ: ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಕೂಡ ಗಳಿಕೆಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಐಶ್ವರ್ಯಾ ನಟನೆ ಮಾತ್ರವಲ್ಲದೆ ಅನೇಕ ಅಂತರರಾಷ್ಟ್ರೀಯ ಬ್ರಾಂಡ್‌’ಗಳ ರಾಯಭಾರಿ ಕೂಡ ಆಗಿದ್ದಾರೆ. ಅನೇಕ ಜಾಗತಿಕ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ಐಶ್ವರ್ಯಾ, ಸಿನಿಮಾ ಮಾಡದಿದ್ದರೂ ವಾರ್ಷಿಕ ಆದಾಯ ಕೋಟಿಯಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News