World Cup 2023: ಟೀಂ ಇಂಡಿಯಾಗೆ ಎದುರಾಳಿಯೇ ಇಲ್ಲ, ಸರಿಸಾಟಿ ಅನ್ನೋರು ಇಲ್ಲವೇ ಇಲ್ಲ ಎಂಬಂತಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಭಾರತ ಇಂದೂ ಕೂಡ ಆಂಗ್ಲರ ವಿರುದ್ಧ ಬರೋಬ್ಬರಿ 100 ರನ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.


COMMERCIAL BREAK
SCROLL TO CONTINUE READING

ಈ ಗೆಲುವಿನ ಮೂಲಕ ಟೀಂ ಇಂಡಿಯಾ ಬಹುತೇಕ ಸೆಮಿಫೈನಲ್ ತಲುಪಿದೆ. ಪ್ರಸ್ತುತ ಅಗ್ರ ನಾಲ್ಕರಲ್ಲಿ ಬೇರೆ ತಂಡಗಳಿದ್ದರೂ ಸಹ ಒಂದಲ್ಲ ಒಂದು ಪಂದ್ಯದಲ್ಲಿ ಸೋಲು ಕಂಡಿವೆ. ಅಷ್ಟೇ ಅಲ್ಲದೆ, ಆ ತಂಡಗಳ ಪ್ರದರ್ಶನವು ಟೀಂ ಇಂಡಿಯದಂತೆ ಹೇಳಿಕೊಳ್ಳುವಂತಹದ್ದೇನಲ್ಲ. ಈ ಎಲ್ಲಾ ಲೆಕ್ಕಾಚಾರಗಳ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ ಸಮೀಪದಲ್ಲಿದೆ.


ಇದನ್ನೂ ಓದಿ: ಲಕ್ನೋದಲ್ಲಿ ಟೀಂ ಇಂಡಿಯಾ ಕೈಹಿಡಿದ ‘ಲಕ್’- 20 ವರ್ಷದ ಬಳಿಕ ಆಂಗ್ಲರ ವಿರುದ್ಧ ಗೆದ್ದ ಅಜೇಯ ಭಾರತ ಸೆಮೀಸ್’ಗೆ ಲಗ್ಗೆ!


ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಹೀಗಿರುವಾಗ ವಿಶ್ವಕಪ್ 2023ರ ಸೆಮಿಫೈನಲ್’ಗೆ ಎಂಟ್ರಿ ಪಡೆಯಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಎಂಬ ಗೊಂದಲ ಮೂಡುವುದು ಸಾಮಾನ್ಯ. ಹೀಗಿರುವಾಗಿ ಈ ಕುರಿತು ನಿಮಗೆ ಒಂದಿಷ್ಟು ಮಾಹಿತಿಯನ್ನು ನಾವಿಂದು ನೀಡಲಿದ್ದೇವೆ.


ಈ ಬಾರಿ ವಿಶ್ವಕಪ್‌’ನಲ್ಲಿ 2 ಗುಂಪುಗಳಾಗಿಲ್ಲ. ಬದಲಾಗಿ ಎಲ್ಲಾ ತಂಡಗಳೂ ಎಲ್ಲಾ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಅಂದರೆ ಪ್ರತಿ ತಂಡವು 9 ಪಂದ್ಯಗಳನ್ನು ಆಡಬೇಕು. ಅದರಲ್ಲಿ 7 ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಎಂಟ್ರಿ ಖಚಿತ. ಒಂದು 4ಕ್ಕಿಂತ ಹೆಚ್ಚು ತಂಡಗಳು 7 ಪಂದ್ಯವನ್ನೂ ಅಥವಾ ಏಳಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದರೆ, ಆಗ ನೆಟ್ ರನ್ ರೇಟ್ ಅನುಸಾರ ಸೆಮಿಫೈನಲ್’ಗೆ ಯಾವ ತಂಡ ಪ್ರವೇಶಿಸಬೇಕು ಎಂದು ನಿರ್ಧರಿಸಲಾಗುತ್ತದೆ.


ಅಂದಹಾಗೆ ಸದ್ಯ ಭಾರತ ತನ್ನ 9 ಪಂದ್ಯಗಳಲ್ಲಿ ಆರರಲ್ಲಿ ಅದಾಗಲೆ ಭರ್ಜರಿ ಜಯ ಸಾಧಿಸಿದೆ, ಇನ್ನುಳಿದಿರುವುದು ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಸೆಣಸಾಟ. ಈ ಪಂದ್ಯಗಳಲ್ಲಿ ಉತ್ತಮ ರನ್ ರೇಟ್ ಹೊಂದಿ ಒಂದರಲ್ಲಾದರೂ ಗೆದ್ದರೆ, ಭಾರತಕ್ಕೆ ಸೆಮಿಫೈನಲ್ ಕನ್ಫರ್ಮ್.


ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ನೂತನ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ 


ವಿಶ್ವಕಪ್ ಟೂರ್ನಿಯಲ್ಲಿ 45 ಪಂದ್ಯ ನಡೆಯುತ್ತವೆ. ಅಂತಿಮವಾಗಿ ಪಾಯಿಂಟ್ ಟೇಬಲ್’ನಲ್ಲಿ ಅಗ್ರ 4ರಲ್ಲಿ ಇರುವ 4 ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶ ಪಡೆಯುತ್ತವೆ. ಇನ್ನು ಫೈನಲ್‌ ಎಂಟ್ರಿ ಪಡೆಯಲು 1 ಮತ್ತು 4ನೇ ಸ್ಥಾನದಲ್ಲಿರುವ ಹಾಗೂ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಡಲಿದೆ. ಇಲ್ಲಿ ಗೆದ್ದ ತಂಡಗಳು ಫೈನಲ್‌ ಪ್ರವೇಶಿಸಿ ಟ್ರೋಫಿಗಾಗಿ ಕಾದಾಡಲಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.