ಲಕ್ನೋದಲ್ಲಿ ಟೀಂ ಇಂಡಿಯಾ ಕೈಹಿಡಿದ ‘ಲಕ್’- 20 ವರ್ಷದ ಬಳಿಕ ಆಂಗ್ಲರ ವಿರುದ್ಧ ಗೆದ್ದ ಅಜೇಯ ಭಾರತ ಸೆಮೀಸ್’ಗೆ ಲಗ್ಗೆ!

India vs England Live Score World Cup 2023: ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಭಾರತ ತಂಡ ನಿಗದಿತ 50 ಓವರ್‌’ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 229 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ನಾಯಕ ರೋಹಿತ್ ಶರ್ಮಾ 87 ರನ್‌’ಗಳ ಗರಿಷ್ಠ ಕೊಡುಗೆ ನೀಡಿದರು.

Written by - Bhavishya Shetty | Last Updated : Oct 29, 2023, 09:20 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯ
    • ಈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
    • 20 ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಂಡ ಭಾರತ
ಲಕ್ನೋದಲ್ಲಿ ಟೀಂ ಇಂಡಿಯಾ ಕೈಹಿಡಿದ ‘ಲಕ್’- 20 ವರ್ಷದ ಬಳಿಕ ಆಂಗ್ಲರ ವಿರುದ್ಧ ಗೆದ್ದ ಅಜೇಯ ಭಾರತ ಸೆಮೀಸ್’ಗೆ ಲಗ್ಗೆ!  title=
Team India

India vs England Live Score World Cup 2023: ವಿಶ್ವಕಪ್‌’ನ 29 ನೇ ಪಂದ್ಯವು ಭಾರತ ಮತ್ತು ಇಂಗ್ಲೆಂಡ್ ನಡುವೆ ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್’ಗೆ ಬಹುತೇಕ ಲಗ್ಗೆ ಇಟ್ಟಿದೆ.

ಇದನ್ನೂ ಓದಿ: ದೀಪಾವಳಿಗೂ ಮುನ್ನ ಈ ರಾಶಿಗೆ ಶುಕ್ರದೆಸೆ ಶುರು: ಕನಸೆಲ್ಲಾ ನನಸಾಗಿಸಿ ಒಂದೂವರೆ ವರ್ಷ ಸಂಪತ್ತಿನ ಮಳೆ ಸುರಿಸಲಿದ್ದಾನೆ ಶನಿ

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಭಾರತ ತಂಡ ನಿಗದಿತ 50 ಓವರ್‌’ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 229 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ನಾಯಕ ರೋಹಿತ್ ಶರ್ಮಾ 87 ರನ್‌’ಗಳ ಗರಿಷ್ಠ ಕೊಡುಗೆ ನೀಡಿದರು. ಇವರಲ್ಲದೆ ಸೂರ್ಯಕುಮಾರ್ ಯಾದವ್ 49 ರನ್ ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು. ಮಾರ್ಕ್ ವುಡ್ ಕೂಡ ಒಂದು ವಿಕೆಟ್ ಪಡೆದರು.

ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ 20 ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಂಡಿದೆ. ಅಷ್ಟೇ ಅಲ್ಲದೆ, ಬಹುತೇಕ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ. ಇದುವರೆಗೆ ಒಂದೇ ಒಂದು ಪಂದ್ಯದಲ್ಲೂ ಸೋಲು ಕಾಣದ ಭಾರತ ನೆಟ್ ರನ್ ರೇಟ್ ಕೂಡ ಉತ್ತಮವಾಗಿದ್ದು, ಪಾಯಿಂಟ್ ಟೇಬಲ್’ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ, ಈ ಎಲ್ಲಾ ಲೆಕ್ಕಾಚಾರದ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ: ಗುಡುಗು-ಸಿಡಿಲಿನ ಆರ್ಭಟ, ಬಿರುಗಾಳಿ ಜೊತೆ ಜಲಪ್ರವಾಹದ ಭೀತಿ

ಇನ್ನು ಭಾರತದ ಪರ ಸ್ಪಿನ್ನರ್’ಗಳು ಮೋಡಿ ಮಾಡಿದ್ದು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಕೈಚಳಕದಿಂದ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ,

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News