ವಿಶ್ವಕಪ್ 2023 ಆಯೋಜನೆಯಿಂದ ಭಾರತದ ಆರ್ಥಿಕತೆಗೆ ಬರುವ ಆದಾಯ ಎಷ್ಟು ಗೊತ್ತಾ?
world cup and indian economy: ನವೆಂಬರ್ 19ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಅವಧಿಯಲ್ಲಿ ಭಾರತದ ಜಿಡಿಪಿಗೆ 22,000 ಕೋಟಿ ರೂ. ಮೊತ್ತದ ಕೊಡುಗೆ ಸಿಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ಸಿದ್ಧಪಡಿಸಿದ ವರದಿಯಲ್ಲಿ ಬಹಿರಂಗವಾಗಿದೆ.
World Cup 2023: ಭಾರತದಲ್ಲಿ ಈಗಾಗಲೇ ವಿಶ್ವಕಪ್ ಆರಂಭವಾಗಿದ್ದು, ದಿನೇ ದಿನೇ ಕ್ರೇಜ್ ಹೆಚ್ಚಾಗುತ್ತಿದೆ. ಇನ್ನು 50 ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ಹಬ್ಬದಿಂದಾಗಿ ಭಾರತದ ಜಿಡಿಪಿ 2.65 ಬಿಲಿಯನ್ ಡಾಲರ್’ನಷ್ಟು ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಬಟ್ಟೆ ಒಗೆದು ಬಿಡುತ್ತದೆ ಈ ಮಿನಿ ವಾಷಿಂಗ್ ಮೆಶಿನ್ ! ಬೆಲೆ ಕೂಡಾ ಭಾರೀ ಅಗ್ಗ
ಇನ್ನು ನವೆಂಬರ್ 19ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಅವಧಿಯಲ್ಲಿ ಭಾರತದ ಜಿಡಿಪಿಗೆ 22,000 ಕೋಟಿ ರೂ. ಮೊತ್ತದ ಕೊಡುಗೆ ಸಿಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ಸಿದ್ಧಪಡಿಸಿದ ವರದಿಯಲ್ಲಿ ಬಹಿರಂಗವಾಗಿದೆ.
ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞೆ ಜಾನ್ವಿ ಪ್ರಭಾಕರ್ ಮತ್ತು ಅದಿತಿ ಗುಪ್ತಾ ಅವರು ಕ್ರಿಕೆಟ್ ವಿಶ್ವಕಪ್ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಅಕ್ಟೋಬರ್ 5ರಿಂದ ಆರಂಭವಾಗಿರುವ ಈ ಟೂರ್ನಿಯಲ್ಲಿ 45 ದಿನಗಳ ಕಾಲ ದೇಶದ ವಿವಿಧ ಕೇಂದ್ರಗಳಲ್ಲಿ 10 ದೇಶಗಳ ನಡುವೆ ಒಟ್ಟು 48 ಪಂದ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕನಿಷ್ಠ 25 ಲಕ್ಷ ಮಂದಿ ದೇಶದ 10 ಸ್ಥಳಗಳ ಕ್ರೀಡಾಂಗಣಗಳಲ್ಲಿ 48 ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಲಿದ್ದಾರೆ. ಈ ಬೆಳವಣಿಗೆಯಿಂದ ದೇಶದ ಆರ್ಥಿಕತೆಗೆ ನೇರವಾದ ಲಾಭ ಸಿಗಲಿದೆ.
ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲೆಂದೆ ಜಗತ್ತಿನ ಮೂಲೆ ಮೂಲೆಗಳಿಂದ ಜನರು ಭಾರತಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಟಿಕೆಟ್ ಖರೀದಿ, ಅವರ ಓಡಾಟದಿಂದ ಇಲ್ಲಿನ ಆರ್ಥಿಕತೆಗೆ ಸಹಾಯವಾಗಲಿದೆ, ಇವುಗಳ ಜೊತೆಗೆ ವಿಮಾನಯಾನ, ಹೋಟೆಲ್, ಆಹಾರ ಉದ್ಯಮಗಳು, ವಿತರಣಾ ಸೇವೆಗಳಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.
ಪ್ರತಿ ಪಂದ್ಯಕ್ಕೆ 1,000 ವಿದೇಶಿ ಪ್ರವಾಸಿಗರು ಎಂದುಕೊಂಡರೂ, ಈ ಪ್ರವಾಸಿಗರು ಹೋಟೆಲ್, ಆಹಾರ, ಪ್ರಯಾಣ ಮತ್ತು ಶಾಪಿಂಗ್‌ಗೆ 450 ರಿಂದ 600 ಕೋಟಿ ರೂ. ಖರ್ಚು ಮಾಡಲಿದ್ದಾರೆ. ದೇಶೀಯ ಪ್ರವಾಸಿಗರೂ ಆಹಾರ ಮತ್ತು ಹೋಟೆಲ್‌ಗಳಿಗೆ ಖರ್ಚು ಮಾಡಲಿದ್ದು, ಇವರ ಖರ್ಚು 150 ರಿಂದ 250 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪಂದ್ಯಗಳನ್ನು ವೀಕ್ಷಿಸಲು ಅತ್ತಿತ್ತ ತೆರಳುವ ಜನರು ಆಹಾರ ಮತ್ತು ಇಂಧನಕ್ಕಾಗಿ 300 ರಿಂದ 500 ಕೋಟಿ ರೂ. ಖರ್ಚು ಮಾಡಬಹುದು ಎಂದು ಲೆಕ್ಕ ಹಾಕಲಾಗಿದೆ.
ಇದನ್ನೂ ಓದಿ: BBK 10: “ಇದು ಬಿಗ್ ಬಾಸ್…”: ಪ್ರತೀದಿನ ಕಾರ್ಯಕ್ರಮದಲ್ಲಿ ನೀವು ಕೇಳುತ್ತಿರುವ, ಕೇಳಿರುವ ಧ್ವನಿ ಇವರದ್ದೇ…!
ಇದೇ ರೀತಿ ಎಲ್ಲವನ್ನು ಲೆಕ್ಕಾಚಾರ ಮಾಡಿದಾಗ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ 18,000 ರಿಂದ 22,000 ಕೋಟಿ ರೂ. ಲಾಭವು ದೇಶದ ಆರ್ಥಿಕತೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.