ವಿಶ್ವಕಪ್ ಮೊದಲ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟ! 148 ಕಿಮೀ ವೇಗದ ‘ಫಾಸ್ಟ್ ಬೌಲರ್’ಗೆ ಅವಕಾಶ ಕೊಟ್ಟ ಕ್ಯಾಪ್ಟನ್
World Cup 2023: ಫಾಸ್ಟ್ ಬೌಲಿಂಗ್ ಆಲ್-ರೌಂಡರ್ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಬಹುದೊಡ್ಡ ಮ್ಯಾಚ್ ವಿನ್ನರ್ ಆಗಲಿದ್ದಾರೆ.
World Cup 2023: ವಿಶ್ವಕಪ್ 2023 ನಾಳೆಯಿಂದ ಅಂದರೆ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿದೆ. ಅಕ್ಟೋಬರ್ 8 ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ನಾಯಕತ್ವ ಕಳೆದುಕೊಂಡ ರೋಹಿತ್! 35 ಹರೆಯದ ಈ ಬ್ಯಾಟ್ಸ್’ಮನ್’ ಕ್ಯಾಪ್ಟನ್
ಇನ್ನು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಓರ್ವ ಆಟಗಾರ ಬಹುದೊಡ್ಡ ಬೆಂಬಲವಾಗಿ ನಿಲ್ಲಲಿದ್ದಾನೆ. ಈತನೆಂದರೆ ಆಸ್ಟ್ರೇಲಿಯಾದ ತಂಡಕ್ಕೂ ಕೊಂಚ ಭಯವೆಂದು ಹೇಳಲಾಗುತ್ತದೆ.
ಫಾಸ್ಟ್ ಬೌಲಿಂಗ್ ಆಲ್-ರೌಂಡರ್ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಬಹುದೊಡ್ಡ ಮ್ಯಾಚ್ ವಿನ್ನರ್ ಆಗಲಿದ್ದಾರೆ. ಇನ್ನು ಚೆನ್ನೈನ ಪಿಚ್ ಮಧ್ಯಮ ವೇಗದ ಬೌಲರ್’ಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಮಧ್ಯಮ ವೇಗ ಆಲ್-ರೌಂಡರ್ ಶಾರ್ದೂಲ್ ಈ ಮೈದಾನದಲ್ಲಿ ಅಬ್ಬರಿಸೋ ಎಲ್ಲಾ ಸಾಧ್ಯತೆ ಹೆಚ್ಚಾಗೇ ಇದೆ.
ಮಧ್ಯಮ ವೇಗದ ಆಲ್-ರೌಂಡರ್ ಶಾರ್ದೂಲ್ ವಿಶೇಷತೆ ಏನೆಂದರೆ, ಈತ ಆರಂಭಿಕರ ಮತ್ತು ಅಂತಿಮ ಕ್ರಮಾಂಕದ ಬ್ಯಾಟರ್’ಗಳ ವಿಕೆಟ್’ಗಳನ್ನು ಸುಲಭವಾಗಿ ಕಬಳಿಸುತ್ತಾರೆ.
ಇನ್ನು ಈ ಬಾರಿ ಟೀಂ ಇಂಡಿಯಾಗೆ ಕೇವಲ ಶಾರ್ದೂಲ್ ಠಾಕೂರ್ ಬಲವಲ್ಲ, ವೇಗದ ಬೌಲರ್’ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಶಕ್ತಿ ತುಂಬಲಿದ್ದಾರೆ.
ಇದನ್ನೂ ಓದಿ: ಭಾರತದ ಆತಿಥ್ಯದಲ್ಲಿ ನೀಡಿದ ಈ ಆಹಾರವೇ ಕಳಪೆ ಫೀಲ್ಡಿಂಗ್’ಗೆ ಕಾರಣ ಎಂದ ಪಾಕ್ ವೇಗಿ
ಶಾರ್ದೂಲ್ ಠಾಕೂರ್ ಅಂಕಿಅಂಶ:
ಟೀಮ್ ಇಂಡಿಯಾ ಪರ ಶಾರ್ದೂಲ್ ಠಾಕೂರ್ 44 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಬೌಲಿಂಗ್ ಸರಾಸರಿ 30.35 ರಲ್ಲಿ 63 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ 25 ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ 33 ವಿಕೆಟ್ ಕಬಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ