Shahid Afridi praised Team India: ಕಳೆದ ದಿನ ಲಕ್ನೋದ ಏಕನಾ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆದಿತ್ತು. ಈ ಹಣಾಹಣಿಯಲ್ಲಿ  ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡವನ್ನು 100 ರನ್‌’ಗಳಿಂದ ಸೋಲಿಸಿ ವಿಶ್ವಕಪ್‌’ನಲ್ಲಿ ಅಜೇಯರಾಗಿ ಉಳಿದಿದೆ. ಅಷ್ಟೇ ಅಲ್ಲದೆ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಭಾರತ, 20 ವರ್ಷಗಳ ನಂತರ ವಿಶ್ವಕಪ್’ನಲ್ಲಿ ಆಂಗ್ಲರನ್ನು ಮಣಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “5 ತಿಂಗಳಿಂದ ಸಂಬಳ ಇಲ್ಲ, ಮೆಸೇಜ್ ಕಳಿಸಿದ್ರೆ ರಿಪ್ಲೈ ಇಲ್ಲ, ತಂಡದಿಂದ ಮತ್ತಿನ್ನೇನು ನಿರೀಕ್ಷಿಸಬಹುದು”: ಪಾಕ್ ಆಟಗಾರನ ಹೇಳಿಕೆ ವೈರಲ್


ಲಕ್ನೋದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿತು, ಸ್ಪಿನ್ ಸ್ನೇಹಿ ಪಿಚ್’ನಲ್ಲಿ ಬ್ಯಾಟ್ ಬೀಸಲು ಟೀಂ ಇಂಡಿಯಾದ ಬ್ಯಾಟ್ಸ್’ಮನ್’ಗಳು ಕಷ್ಟಪಟ್ಟಿದ್ದು ಕಂಡುಬಂತು, ಆದರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್’ನಿಂದಾಗಿ ಭಾರತ 229ರನ್ ಕಲೆ ಹಾಕಿತು. ಇನ್ನು ಗೆಲುವಿಗಾಗಿ 230 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 34.5 ಓವರ್‌’ಗಳಲ್ಲಿ 129 ರನ್‌ಗಳಿಗೆ ಆಲೌಟ್ ಆಗಿ ಆರು ಪಂದ್ಯಗಳಲ್ಲಿ ಐದನೇ ಸೋಲು ಅನುಭವಿಸಿತು.


ಆಡಿರುವ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿದ ಭಾರತ ಸೆಮಿಫೈನಲ್’ಗೆ ಸಮೀಪವಾಗಿದೆ. ಇದೇ ಸಂದರ್ಭದಲ್ಲಿ  ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಟೀಂ ಇಂಡಿಯಾದ ಪ್ರಾಬಲ್ಯ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. "ಭಾರತ ತಂಡವು ಗಟ್ಟಿಯಾಗಿ ಕಾಣುತ್ತದೆ. ಪರಿಸ್ಥಿತಿಗಳು ಕುಸಿದಾಗಲೂ ತಮ್ಮ ಸಾಮರ್ಥ್ಯದ ಮೇಲೆ ಹೇಗೆ ಗಮನಹರಿಸಬೇಕು ಎಂದು ಅವರಿಗೆ ತಿಳಿದಿದೆ. ಇದು ಕೇಂದ್ರೀಕೃತ ದೈಹಿಕ ಸಾಮಾರ್ಥ್ಯ ಮತ್ತು ಮಾನಸಿಕ ಶಕ್ತಿಯ ಸಾಕ್ಷಿಯಾಗಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ಅಂದ್ರೆ ನನಗೆ ಇಷ್ಟ” ಎಂದು ‘X’ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: 5 ಪಂದ್ಯ ಸೋತು ಕೊನೆ ಸ್ಥಾನದಲ್ಲಿದ್ದರೂ ಇಂಗ್ಲೆಂಡ್’ಗೆ ಇನ್ನೂ ಇದೆ ಸೆಮೀಸ್ ತಲುಪುವ ಚ್ಯಾನ್ಸ್!


ಭಾರತ ಮುಂದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಈ ಕಾದಾಟ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.