ಆಡಿದ 6ರಲ್ಲಿ 5 ಪಂದ್ಯ ಸೋತು ಕೊನೆ ಸ್ಥಾನದಲ್ಲಿದ್ದರೂ ಇಂಗ್ಲೆಂಡ್’ಗೆ ಇನ್ನೂ ಇದೆ ಸೆಮೀಸ್ ತಲುಪುವ ಚ್ಯಾನ್ಸ್! ಹೇಗೆ ಗೊತ್ತಾ?

England Semi Final Equation, Cricket News In Kannada: ಭಾರತ ಸತತ ಪಂದ್ಯಗಳಲ್ಲಿ ಅಂದರೆ ಆಡಿದ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿದಲ್ಲದೆ, 20 ವರ್ಷಗಳ ಬಳಿಕ ಆಂಗ್ಲರ ವಿರುದ್ಧ ಗೆದ್ದು ಬೀಗಿದೆ. ಇನ್ನು 12 ಅಂಕಗಳನ್ನು ಪಡೆದ ಭಾರತ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.

Written by - Bhavishya Shetty | Last Updated : Oct 30, 2023, 03:33 PM IST
    • ಲಕ್ನೋದ ಏಕನಾ‌ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ
    • 100 ರನ್‌’ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ
    • ಕೊನೆ ಸ್ಥಾನದಲ್ಲಿದ್ದರೂ ಇಂಗ್ಲೆಂಡ್’ಗೆ ಇನ್ನೂ ಇದೆ ಸೆಮೀಸ್ ತಲುಪುವ ಅವಕಾಶ
ಆಡಿದ 6ರಲ್ಲಿ 5 ಪಂದ್ಯ ಸೋತು ಕೊನೆ ಸ್ಥಾನದಲ್ಲಿದ್ದರೂ ಇಂಗ್ಲೆಂಡ್’ಗೆ ಇನ್ನೂ ಇದೆ ಸೆಮೀಸ್ ತಲುಪುವ ಚ್ಯಾನ್ಸ್! ಹೇಗೆ ಗೊತ್ತಾ? title=
World Cup Semi Final

England Semi Final Equation: ಕಳೆದ ದಿನ ಅಂದರೆ ಅಕ್ಟೋಬರ್ 29ರಂದು ಲಕ್ನೋದ ಏಕನಾ‌ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ (India vs England) 100 ರನ್‌’ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಭಾರತ ಸತತ ಪಂದ್ಯಗಳಲ್ಲಿ ಅಂದರೆ ಆಡಿದ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿದಲ್ಲದೆ, 20 ವರ್ಷಗಳ ಬಳಿಕ ಆಂಗ್ಲರ ವಿರುದ್ಧ ಗೆದ್ದು ಬೀಗಿದೆ. ಇನ್ನು 12 ಅಂಕಗಳನ್ನು ಪಡೆದ ಭಾರತ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದು ರೋಹಿತ್ ಅಲ್ಲ, ಈ ಆಟಗಾರ-ಈತನಿಗೇ ಸೇರಬೇಕು ಪಂದ್ಯಶ್ರೇಷ್ಠ ಪ್ರಶಸ್ತಿ!

ಹಾಲಿ ಚಾಂಪಿಯನ್ಸ್ ಸದ್ಯ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆಡಿದ 6 ಪಂದ್ಯಗಳಲ್ಲಿ 5ರಲ್ಲೂ ಹೀನಾಯ ಸೋಲು ಕಂಡಿದೆ. ಇನ್ನು ಸೆಮಿಫೈನಲ್ ಕನಸು ಕಮರಿದೆ ಎಂದೇ ಹೇಳಬಹುದು. ಆದರೆ, ಕೆಲ ಪವಾಡಗಳು ನಡೆದರೆ, ಖಂಡಿತವಾಗಿಯೂ ಇಂಗ್ಲೆಂಡ್’ಗೆ ಸೆಮಿಫೈನಲ್ ಪ್ರವೇಶ ಪಡೆಯುತ್ತದೆ. ಅದೇಗೆ ಅಂತೀರಾ! ಈ ಲೆಕ್ಕಾಚಾರ ಒಮ್ಮೆ ಗಮನಿಸಿ.

ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಇಂಗ್ಲೆಂಡ್ ಕೈಯಲ್ಲಿ ಇನ್ನೂ ಪಂದ್ಯಗಳು ಬಾಕಿ ಇವೆ. ಒಂದು ವೇಳೆ ಆಡಲಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದರೆ 8 ಅಂಕ ಪಡೆಯಲಿವೆ. ಆದರೆ ಅಂಕಪಟ್ಟಿಯಲ್ಲಿ ಭದ್ರವಾಗಿ ಕುಳಿತಿರುವ ಭಾರತ, ಸೌತ್ ಆಫ್ರಿಕಾ‌ ತಂಡಗಳನ್ನು ಮುಟ್ಟಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ತಲಾ‌ 8 ಅಂಕ ಪಡೆದಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸರಿಗಟ್ಟಬಹುದು.

ಈ ಸಮೀಕರಣ ನಿಜವಾದಲ್ಲಿ ಇಂಗ್ಲೆಂಡ್ ಬಹುಶಃ ಸೆಮಿಫೈನಲ್ ತಲುಪಬಹುದು. ಅಂದಹಾಗೆ ಈ ಲೆಕ್ಕಾಚಾರ ಹೀಗಾಗಬೇಕು ಎಂದಾದರೆ, ಸೆಮಿಫೈನಲ್ ರೇಸ್‌’ನಲ್ಲಿರುವ ತಂಡಗಳು ತಲಾ‌ ಒಂದು ಪಂದ್ಯವನ್ನು ಮಾತ್ರ ಗೆಲ್ಲಬೇಕು.‌ ಅಂದರೆ ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ನೆದರ್ಲೆಂಡ್ಸ್‌, ಬಾಂಗ್ಲಾದೇಶ ತಂಡಗಳು ಒಂದರಲ್ಲಿ ಗೆದ್ದರೆ, 8 ಅಂಕಕ್ಕಿಂತ‌ ಕಡಿಮೆ ಪಡೆದು ಟೂರ್ನಿಯಿಂದ ಹೊರಬೀಳುತ್ತವೆ. ಆಗ ಇಂಗ್ಲೆಂಡ್ ತಂಡ 8 ಅಂಕ ಪಡೆದು ಸೆಮಿಫೈನಲ್ ಪ್ರವೇಶ ಸಾಧ್ಯವಾಗುತ್ತದೆ.

ಇದರ ಜೊತೆಗೆ, ನ್ಯೂಜಿಲೆಂಡ್ ‌ಅಥವಾ ಆಸ್ಟ್ರೇಲಿಯಾ ಯಾವುದಾದರೂ ಒಂದು ತಂಡ, ಮುಂದೆ ಆಡಲಿರುವ ತಮ್ಮ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಥವಾ ಈ ಎರಡೂ ತಂಡಗಳೂ ಸೋಲಬೇಕು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಆಡಲಿರುವ ಮುಂದಿನ 3 ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಬೇಕು. ಆಗ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗುತ್ತೆ.

ಇಷ್ಟೆಲ್ಲಾ ನಡೆಯಬೇಕೆಂದರೆ ಪವಾಡವೇ ಆಗಬೇಕು. ಏಕೆಂದರೆ ಪ್ರಸ್ತುತ ನ್ಯೂಜಿಲೆಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠವಾಗಿದೆ. ಕೀವೀಸ್ ಅಥವಾ ಆಸೀಸ್ ತಲಾ ಒಂದರಲ್ಲಾದರೂ ಗೆದ್ದರೆ, ಇಂಗ್ಲೆಂಡ್ ಅಧಿಕೃತವಾಗಿ ವಿಶ್ವಕಪ್ ಟೂರ್ನಿಯಿಂದ ಗೇಟ್ ಪಾಸ್ ಪಡೆಯಲಿದೆ.

ಇಂಗ್ಲೆಂಡ್ ಮುಂದಿನ ಪಂದ್ಯಗಳು

  • ಇಂಗ್ಲೆಂಡ್ vs ಆಸ್ಟ್ರೇಲಿಯಾ, ನವೆಂಬರ್ 4, ಅಹ್ಮದಾಬಾದ್
  • ಇಂಗ್ಲೆಂಡ್ vs ನೆದರ್ಲೆಂಡ್ಸ್‌, ನವೆಂಬರ್ 8, ಪುಣೆ
  • ಇಂಗ್ಲೆಂಡ್ vs ಪಾಕಿಸ್ತಾನ, ನವೆಂಬರ್ 11, ಕೋಲ್ಕತ್ತಾ

ಆಸ್ಟ್ರೇಲಿಯಾ ಮುಂದಿನ ಪಂದ್ಯಗಳು

  • ಆಸ್ಟ್ರೇಲಿಯಾ vs ಇಂಗ್ಲೆಂಡ್, ನವೆಂಬರ್ 4, ಅಹ್ಮದಾಬಾದ್
  • ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ, ನವೆಂಬರ್ 7, ಮುಂಬೈ
  • ಆಸ್ಟ್ರೇಲಿಯಾ vs ಬಾಂಗ್ಲಾದೇಶ, ನವೆಂಬರ್ 11, ಪುಣೆ

ನ್ಯೂಜಿಲೆಂಡ್ ಮುಂದಿನ ಪಂದ್ಯಗಳು

  • ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ, ನವೆಂಬರ್ 1, ಪುಣೆ
  • ನ್ಯೂಜಿಲೆಂಡ್ vs ಪಾಕಿಸ್ತಾನ, ನವೆಂಬರ್ 4, ಬೆಂಗಳೂರು
  • ನ್ಯೂಜಿಲೆಂಡ್ vs ಶ್ರೀಲಂಕಾ, ನವೆಂಬರ್ 9, ಬೆಂಗಳೂರು

ಇದನ್ನೂ ಓದಿ: ಟೀಂ ಇಂಡಿಯಾದ ಬೌಲರ್‌ಗಳು ........! ಶಮಿ, ಬುಮ್ರಾ ಬಗ್ಗೆ ವಾಸಿಂ ಅಕ್ರಂ ಹೇಳಿದ್ದೇನು ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News