Rahul Dravid Statement: ಟೀಂ ಇಂಡಿಯಾ ನವೆಂಬರ್ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಟೂರ್ನಿಯ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರೋಹಿತ್ ಶರ್ಮಾ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಸೋಲುಣಿಸಲು ಡಬ್ಬಾ ಐಡಿಯಾ ಕೊಟ್ಟ ಪಾಕ್ ಕ್ರಿಕೆಟಿಗ! ಏನದು ಗೊತ್ತಾ?


ರೋಹಿತ್ ಶರ್ಮಾರನ್ನು ಕೊಂಡಾಡಿದ ಅವರು, ಈತ ಹೆಸರಿಗೆ ತಕ್ಕಂತೆ ನಿಜವಾದ ನಾಯಕ ಎಂದು ದ್ರಾವಿಡ್ ಶ್ಲಾಘಿಸಿದ್ದಾರೆ. ಅಂದಹಾಗೆ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯವಾಗಿದ್ದು, ಸತತ 8 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.


ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, “ಟೀಂ ನಾಯಕನಾಗಿ ಮತ್ತು ಆರಂಭಿಕ ಬ್ಯಾಟ್ಸ್‌’ಮನ್ ಆಗಿ ರೋಹಿತ್ ಶರ್ಮಾ ಅವರ ದ್ವಿಪಾತ್ರದ ಅದ್ಭುತ ನಿರ್ವಹಣೆಯು ವಿಶ್ವಕಪ್‌’ನಲ್ಲಿ ಭಾರತದ ಎಂಟು ಪಂದ್ಯಗಳ ಗೆಲುವಿಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.


ರೋಹಿತ್ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸುವುದರ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ತಂಡಕ್ಕೆ ಜವಾಬ್ದಾರಿಯುತ ಆರಂಭವನ್ನು ನೀಡಿದ್ದಾರೆ. ಎಂಟು ಪಂದ್ಯಗಳಲ್ಲಿ 122 ಸ್ಟ್ರೈಕ್ ರೇಟ್‌’ನಲ್ಲಿ 443 ರನ್ ಗಳಿಸಿದ್ದಾರೆ.


ನೆದರ್ಲೆಂಡ್ಸ್ ವಿರುದ್ಧದ ಭಾರತದ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್, 'ರೋಹಿತ್ ನಿಜವಾದ ನಾಯಕ. ಮೈದಾನದ ಒಳಗೆ ಮತ್ತು ಹೊರಗೆ ಎರಡರಲ್ಲೂ ಮಾದರಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.


“ನಮಗೆ ಟ್ರಿಕಿ ಆಗಬಹುದಾದ ಕೆಲವು ಪಂದ್ಯಗಳು ನಡೆದಿವೆ. ಆದರೆ ರೋಹಿತ್ ನಮಗೆ ಉತ್ತಮ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಪಂದ್ಯವು ನಮಗೆ ಉತ್ತಮವಾಗಿತ್ತು. ವಾಸ್ತವವಾಗಿ ಇದು ನಮಗೆ ಪಂದ್ಯವನ್ನು ಸುಲಭವಾಗಿ ಕಾಣುವಂತೆ ಮಾಡುತ್ತದೆ. ರೋಹಿತ್ ನಂತರ ಬ್ಯಾಟಿಂಗ್‌’ಗೆ ಬಂದ ಆಟಗಾರರಿಗೂ ಇದು ಸುಲಭವಾಯಿತು” ಎಂದು ದ್ರಾವಿಡ್ ಹೇಳಿದರು.


ಇದನ್ನೂ ಓದಿ: “ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ": ಮುಖಕ್ಕೆ ಹೊಡ್ದಂಗೆ ಹೇಳಿದ ಸಂಗೀತಾ…ಕೂಗಾಡಿದ ಕಾರ್ತಿಕ್!!


ಈ ವಿಶ್ವಕಪ್‌’ನಲ್ಲಿ ರೋಹಿತ್ ಇಲ್ಲಿಯವರೆಗೆ ತೋರಿದ ಅದ್ಭುತ ಪ್ರದರ್ಶನವು ಇತರರಿಗೆ ಸ್ಫೂರ್ತಿಯಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ವಿಶೇಷ ರೀತಿಯಲ್ಲಿ ಆಟವಾಡಬೇಕೆಂದು ಮಾತನಾಡುತ್ತೇವೆ. ಆದರೆ ತಂಡದ ನಾಯಕ ಆ ನಿಯಮ ಪಾಲಿಸದಿದ್ದರೆ ಅದನ್ನು ಅನುಸರಿಸಲು ಸಾಧ್ಯವಿಲ್ಲ. ರೋಹಿತ್‌ ತೋರಿದ ಪ್ರದರ್ಶನ ಅದ್ಭುತವಾಗಿದೆ. ಅವರ ನಾಯಕತ್ವ ಅತ್ಯುತ್ತಮವಾಗಿದೆ. ಅವರು ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯಿಂದ ಖಂಡಿತವಾಗಿಯೂ ಗೌರವ ಪಡೆದಿರುವ ಆಟಗಾರ” ಎಂದು ಶ್ಲಾಘಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ