Team India world cup history : ಭಾರತ ಹಾಗೂ ನ್ಯೂಜಿಲೆಂಡ್ ನಡುವೆ 2023ರ ವಿಶ್ವಕಪ್‌ ಸಮರದ ಮೊದಲ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಆಜೇಯ ತಂಡವಾಗಿ ಮುಂದುವರೆದಿರುವ ಭಾರತ ಸೆಮೀಸ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.. ಹಾಗಾದ್ರೆ ಭಾರತ ಎಷ್ಟು ಬಾರಿ ಸೆಮಿಫೈನಲ್‌ ತಲುಪಿದೆ.. ಪ್ರದಶರ್ನ ಹೆಗಿತ್ತು ಎಂಬ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.


COMMERCIAL BREAK
SCROLL TO CONTINUE READING

ವಿಶ್ವಕಪ್‌ 2023ರಲ್ಲಿ ಆಡಿರುವ 9 ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಸೆಮೀಸ್‌ ತಲುಪಿರುವ ಭಾರತ ವಿಶ್ವಕಪ್‌ ಗೆದ್ದು ಬೀಗುವ ವಿಶ್ವಾಸದಲ್ಲಿದೆ. ತಂಡದ ಪ್ರದರ್ಶನ ಸಹ ಸೂಪರ್‌ ಆಗಿದ್ದು ಎಲ್ಲಾ ಆಟಗಾಗರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ.. ಭಾರತ 8 ಬಾರಿಗೆ ಸೆಮಿಫೈನಲ್‌ ತಲುಪ್ಪಿದ್ದು,  ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ವಿಶ್ವಕಪ್‌ನಲ್ಲಿ ಇದಕ್ಕೂ ಮುನ್ನ ಯಾರ ವಿರುದ್ಧ ಸೆಮಿಫೈನಲ್‌ ಆಡಿತ್ತು ಗಮನಿಸಿದ್ರೆ ಒಂದು ಆತಂಕ ಕಾಡುತ್ತೆ..


ಇದನ್ನೂ ಓದಿ:ಮಧ್ಯರಾತ್ರಿ ಯಾರಿಗೂ ತಿಳಿಯಂದಂತೆ ರಸ್ತೆ ಬದಿ ಮಲಗಿದ್ದವರಿಗೆ ಗರಿ ಗರಿ ನೋಟು ಹಚಿದ ಕ್ರಿಕೆಟರ್ ! ಇಲ್ಲಿದೆ ವಿಡಿಯೋ


1983 ವಿಶ್ವಕಪ್‌ ಸೆಮಿಫೈನಲ್‌, ಭಾರತ- ಇಂಗ್ಲೆಂಡ್‌ ಮುಖಾಮುಖಿ


ಹೌದು ಏಕದಿನ ವಿಶ್ವಕಪ್​​ನ ಕಳೆದ 12 ಆವೃತ್ತಿಗಳಲ್ಲಿ ಭಾಗಿಯಾಗಿರುವ ಭಾರತ ಗೆಲುವಿಗಿಂತ ಗೆಲುವಿಗಿಂತ ಸೋಲಿನ ರುಚಿಯನ್ನೆ ಹೆಚ್ಚು ಅನುಭವಿಸಿದೆ. ಅದು 1983  ಭಾರತವನ್ನು ಕ್ರಿಕೆಟ್‌ ಶಿಶುಗಳು ಎಂದುಕೊಂಡಿದ್ದವರಿಗೆ ಕಪಿಲ್‌ದೇವ್‌ ಪಡೆ ಶಾಕ್‌ ನೀಡಿತ್ತು.. ಒಳ್ಳೆ ಟ್ರಿಪ್‌ ಆಗುತ್ತೆ ಎಂದು ಇಂಗ್ಲೆಂಡ್‌ ಹೋಗಿದ್ದ ಕಪಿಲ್‌ ದೇವ್‌ ಪಡೆ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಜೂನ್‌ 22 ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ಕ್ರಿಕೆಟ್‌ ಜನಕ ಇಂಗ್ಲೆಂಡ್‌ ಶಾಕ್‌ ನೀಡಿತ್ತು. ಭಾರತದ ದಾಳಿಗೆ ನಲುಗಿದ್ದ ಇಂಗ್ಲೆಂಡ್‌ 60 ಓವರ್‌ಗಳಲ್ಲಿ 213 ರನ್‌ ಗಳಿಸಿ 214 ರನ್‌ಗಳ ಟಾರ್ಗೆಟ್‌ ನೀಡಿತ್ತು.. ಬೌಲಿಂಗ್‌ ನಲ್ಲಿ ಕಪಿಲ್‌ ದೇವ್‌ 3 ವಿಕೆಟ್‌ ಪಡೆದು ಕಮಾಲ್‌ ಮಾಡಿದ್ರು.. ಆಂಗ್ಲರು ನೀಡಿದ್ದ ಗುರಿಯನ್ನು 54.4 ಕಪಿಲ್‌ ಪಡೆ ಮುಟ್ಟಿ ಗೆದ್ದು ಬೀಗಿತ್ತು.. ಪೈನಲ್‌ನಲ್ಲಿ ಸಹ  ವೆಸ್ಟ್‌ಇಂಡಿಸ್‌ ವಿರುದ್ಧ ಯಾರು ಊಹಿಸದ ಗೆಲುವು ದಾಖಲಿಸಿ ಚರಿತ್ರೆ ಸೃಷ್ಟಿಸಿತ್ತು.


1987  ವಿಶ್ವಕಪ್‌ ಸೆಮಿಫೈನಲ್‌, ಭಾರತ- ಇಂಗ್ಲೆಂಡ್‌ ಮುಖಾಮುಖಿ


1987  ವಿಶ್ವಕಪ್‌ ಅತಿಥ್ಯವನ್ನು ಭಾರತ ವಹಿಸಿಕೊಂಡಿತ್ತು.. ಈ ವಿಶ್ವಕಪ್‌ ನಲ್ಲಿ ಸಹ ಭಾರತ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಬಂದಿತ್ತು.. ನೆವಂಬರ್‌ 5ರಂದು ಮುಂಬೈನಲ್ಲಿ ನಡೆದ ಸೆಮಿಫೈನಲ್ಲಿನ ಭಾರತಕ್ಕೆ ಇಂಗ್ಲೆಂಡ್‌ ಸವಾಲು ಹಾಕಿತ್ತು..1983 ವಿಶ್ವಕಪ್‌ ಸೆಮಿಪೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತ್ತು. 50 ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ 6 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಿತ್ತು.. ಈ ಗುರಿ ಬೆನ್ನತ್ತಿದ್ದ ಭಾರತ 219 ರನ್‌ ಗಳಿಗೆ ಸರ್ವಪತನ ಕಂಡು ಸೋಲೋಪ್ಪಿಕೊಂಡಿತ್ತು.


ಇದನ್ನೂ ಓದಿ:ಈ ಬ್ಯಾಟಿಂಗ್ ಮಾಂತ್ರಿಕನಿಗೆ RCB ಗಾಳ ! ಈತನಿಗಾಗಿ ಕೋಟಿ ಕೋಟಿ ಹರಿಸಲು ಮುಂದಾದ ತಂಡ
 
1996  ವಿಶ್ವಕಪ್‌ ಸೆಮಿಫೈನಲ್‌,ಭಾರತ- ಶ್ರೀಲಂಕಾ ಮುಖಾಮುಖಿ


1996 ಮಾರ್ಚ್‌ 23 ರಂದು ಕೊಲ್ಕತ್ತಾದ ಈಡಾನ್‌ ಗಾರ್ಡನ್‌ನಲ್ಲಿ ನಡೆದ ಭಾರತ- ಶ್ರೀಲಂಕಾ ಸೆಮಿಸ್‌ ಪಂದ್ಯವನ್ನು ಯಾರು ಮರೆಯುವಂತಿಲ್ಲ.. ಯಾಕೆಂದ್ರೆ ಅಭಿಮಾನಿಗಳು ಭಾರತ ಸೋಲಿನ ಸುಳಿಯಲ್ಲಿ ಸಿಲುಕಿದ ತಕ್ಷಣ ರೊಚ್ಚಿಗೆದ್ದು ದಾಂಧಲೆ ಎಬ್ಬಿಸಿದ್ರು.. ಮೊದಲು ಬ್ಯಾಟ್‌ ಮಾಡಿದ್ದ ಶ್ರೀಲಂಕಾ 8 ವಿಕೆಟ್‌ ಕಳೆದುಕೊಂಡು 251 ರನ್‌ ಗಳಿಸಿತ್ತು.. ಈ ಗುರಿ ಬೆನ್ನಟ್ಟಿದ್ದ ಭಾರತ ಸಚಿನ್‌ ತೆಂಡೂಲ್ಕರ್‌ ಆಕರ್ಶಕ ಅರ್ಧ ಶತಕದ ಹೊರತಾಗಿ 34.1 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು.. ಈ ವೇಳೆ ಅಭಿಮಾನಿಗಳು ಭಾರತದ ಸೋಲು ಪಕ್ಕ ಆದ ತಕ್ಷಣ ನೀರಿನ ಬಾಟಲ್‌ ಇತರೆ ವಸ್ತುಗಳನ್ನು ಕ್ರೀಡಾಂಣಕ್ಕೆ ಎಸೆದು ಗಲಾಟೆ ಮಾಡಿದ್ರು..  ಆ ವೇಳೆ 10 ರನ್‌ ಗಳಿಸಿ ಆಡುತ್ತಿದ್ದ ವಿನೋದ್‌ ಕಾಂಬ್ಳಿ, ಅನಿಲ್‌ ಕುಂಳ್ಳೆ ಕಣ್ಣೀರು ಹಾಕುತ್ತಲೇ ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿದ್ರು.. ಅಂಪೈರ್‌ಗಳು ಹಾಗೂ ಮ್ಯಾಚ್‌ ರೆಫ್ರಿ ನಿಯಮಗಳ ಪ್ರಕಾರ ರನ್‌ ರೇಟ್‌ನಲ್ಲಿ ಮುಂದಿದ್ದ ಶ್ರೀಲಂಕಾವನ್ನು ವಿಜಯಿ ಎಂದು ಘೋಷಿಸಿದರು.  


2003 ವಿಶ್ವಕಪ್‌ ಸೆಮಿಫೈನಲ್‌, ಭಾರತ- ಕೀನ್ಯಾ ಮುಖಾಮುಖಿ
 
ಸೌರವ್‌ ಗಂಗೂಲಿ ನಾಯಕತ್ವದ ತಂಡ ವಿಶ್ವಕಪ್‌ ಗೆಲ್ಲುವ ಕನಸಿನೊಂದಿಗೆ ದಕ್ಚಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು.. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ನಲ್ಲಿ ಅಚ್ಚರಿ ಪ್ರದರ್ಶನ ನೀಡಿದ್ದ ಕೀನ್ಯಾವನ್ನು ಎದುರಿಸಿತ್ತು.. ಗಂಗೂಲಿ ಶತಕ, ಸಚಿನ್‌ ಅರ್ಧಶತಕದ ನರೆವಿನಿಂದ 270 ರನ್‌ ಗುರಿಯನ್ನು ಕೀನ್ಯಾಗೆ ನೀಡಿತ್ತು. ಆದರೆ ಕೀನ್ಯಾ 179 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.. ಆದರೆ ಫೈನಲ್‌ನಲ್ಲಿ ಭಾರತ  ಆಸ್ಟ್ರೇಲಿಯಾ ವಿರುದ್ಧ ಸೋತು ವಿಶ್ವಕಪ್‌ ಕನಸು ಭಗ್ನಗೊಂಡಿತ್ತು... 


ಇದನ್ನೂ ಓದಿ:ಭಾರತ OR ನ್ಯೂಜಿಲೆಂಡ್.. ಸೆಮಿಫೈನಲ್‌ನಲ್ಲಿ ಗೆಲುವು ಇವರದ್ಧೇ! ಜ್ಯೋತಿಷಿಗಳ ಭವಿಷ್ಯ ನಿಜವಾಗುತ್ತಾ?
 
2011 ವಿಶ್ವಕಪ್‌ ಸೆಮಿಫೈನಲ್‌, ಭಾರತ- ಪಾಕ್‌ ಮುಖಾಮುಖಿ
 
2011 ವಿಶ್ವಕಪ್‌ ಅತಿಥ್ಯವನ್ನು ಭಾರತ ವಹಿಸಿಕೊಂಡಿತ್ತು.. ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ತಂಡ ಭರ್ಜರಿ ಪ್ರದರ್ಶನ ನೀಡಿ ಸೆಮೀಸ್‌ ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಿತ್ತು. ಮೊಹಾಲಿಯಲ್ಲಿ ನಡೆದ ಪಂಧ್ಯದಲ್ಲಿ ತೆಂಡೂಲ್ಕರ್‌ ಸಮಯೋಚಿತ ಬ್ಯಾಟಿಂಗ್‌ ಪ್ರದರ್ಶಣದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 260 ರನ್‌ ಗಳಿಸಿತ್ತು.. ಚೇಸಿಂಗ್‌ಗೆ ಇಳಿದ ಪಾಕ್‌ ಭಾರತದ ಬೌಲಿಂಗ್‌ ದಾಳಿಗೆ ನಲುಗಿ 231 ರನ್‌ಗಳಿಗೆ ಸರ್ವಪತನ ಕಂಡಿತ್ತು.. ಪೈನನಲ್ಲಿ  ಶ್ರೀಲಂಕಾ ವಿರುದ್ಧ ಗೆದ್ದು ಅರ್ಹವಾಗಿ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತ್ತು..  
 
2015  ವಿಶ್ವಕಪ್‌ ಸೆಮಿಫೈನಲ್‌,  ಭಾರತ- ಆಸ್ಟ್ರೇಲಿಯಾ ಪಾಕ್‌ ಮುಖಾಮುಖಿ
 
2011 ರ ವಿಶ್ವಕಪ್‌ ಗೆದ್ದ ಹುಮ್ಮಸ್ಸಿನಲ್ಲಿದ್ದ ಭಾರತ ಆಸ್ಟ್ರೇಲಿಯಾ- ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿತ್ತು.. ಉತ್ತಮ ಪ್ರದರ್ಶನ ನೀಡಿದ್ದ ಭಾರತ ಸೆಮೀಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ಸ್ಟೀವನ್‌ ಸ್ಮಿತ್‌ ಆಕರ್ಷಕ ಶತಕ,ಫಿಂಚ್‌ ಅರ್ಧಶತಕದ ನೆರವಿನಿಂದ 7 ವಿಕೆಟ್‌ ನಷ್ಟಕ್ಕೆ 328 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತ್ತು. ಆದರೆ ಆಸ್ಟ್ರೇಲಿಯಾದ ವೇಗದ ದಾಳಿಗೆ ತತ್ತರಿಸಿದ ಭಾರತ ಧೋನಿ ಅರ್ಧಶತಕದ ಹೊರತಾಗಿ 233 ರನ್‌ಗಳಿಸಿ ಅಲೌಟ್‌ ಆಗಿ ಸೋಲನ್ನು ಅನುಭವಿಸಿತ್ತು.  


ಇದನ್ನೂ ಓದಿ: ವಿಶ್ವಕಪ ನಲ್ಲಿ ಪಾಕ್ ವೈಫಲ್ಯ : ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ
 
2019 ವಿಶ್ವಕಪ್‌ ಸೆಮಿಫೈನಲ್‌,  ಭಾರತ- ನ್ಯೂಜಿಲೆಂಡ್‌ ಮುಖಾಮುಖಿ
 
2019 ರ ವಿಶ್ವಕಪ್‌ ಸೆಮಿ ಫೈನಲ್‌ ಪಂದ್ಯವನ್ನ ಯಾವ ಭಾರತೀಯ ಕ್ರಿಕೆಟ್‌ ಅಭಿಮಾನಿಯು ಮರೆಯುವಂತಿಲ್ಲ.. ಇಂಗ್ಲೆಂಡ್‌ನ ಮ್ಯಾಚೆಂಸ್ಟರ್‌ನಲ್ಲಿ ನಡೆದ ಸೆಮೀಸ್‌ನಲ್ಲಿ ಭಾರತ ನ್ಯೂಜಿಲೆಂಡ್‌ ವಿರುದ್ಧ ಸೆಣಸಾಟ ನಡೆಸಿತ್ತು.. ಮೊದಲು ಬ್ಯಾಟ್‌ ಮಾಡಿದ್ದ ಕಿವೀಸ್‌ ಭಾರತದ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ಸಿಲುಕಿ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 239 ರನ್‌ಗಳ ಸಾಧಾರಣ ಮೊತ್ತ ಗಳಿಸಿತ್ತು.. ಎಲ್ಲರೂ ಭಾರತ ಸುಲಭವಾಗಿ ಈ ರನ್‌ ಚೇಸ್‌ ಮಾಡುತ್ತೆ ಎಂದದುಕೊಂಡಿದ್ದರು. ಆದರೆ ಕಿವೀಸ್‌ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಸವಾರಿ ಮಾಡಿದ್ದರು.. ಕಿವೀಸ್‌ ವೇಗದ ದಾಳಿಎಗ ಭಾರತದ ಬ್ಯಾಟ್ಸ್‌ಮನ್‌ಗಳು ಪೆಲಿಲಿಯ್‌ ಪರೇಡ್‌ ನಡೆಸಿದ್ದರು.. ಮಹೆಂದ್ರಸಿಂಗ್‌ ಧೋನಿ ರನ್‌ಔಟ್‌ ಆಗುವ ಮೂಲಕ ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿತ್ತು.. 221 ರನ್‌ಗಳಿಗೆ ಭಾರತ ಅಲೌಟ್‌ ಆಗಿ 4 ಬಾರಿಗೆ ವಿಶ್ವಕಪ್‌ ಸೆಮೀಸ್‌ನಲ್ಲಿ ಸೋಲು ಕಂಡಿತ್ತು..  


ಇತಿಹಾಸ ಏನೇ ಇರಲಿ.. ಭಾರತ ಈ ಬಾರಿ ಭರ್ಜರಿ ಪ್ರದರ್ಶನ ನೀಡಿ ವಿಶ್ವಕಪ್‌ ಸೆಮೀಸ್‌ಗೆ ಲಗ್ಗೆ ಇಟ್ಟಿದೆ.. 2019 ರ ಸೆಮೀಸ್‌ ಸೋಲಿನ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ.. ಅಭಿಮಾನಿಗಳು ಅಷ್ಟೇ ಈ ಬಾರಿ ಭಾರತ ವಿಶ್ವಕಪ್‌ ಗೆಲ್ಲುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ.. ಏನಾದ್ರೂ ಆಗಲಿ ಈ ಬಾರಿ ತವರಿನಲ್ಲಿ ನಡೆಯುತ್ತಿರುವ ವರ್ಲ್ಡ್‌ಕಪ್‌ ಟೂರ್ನಿಯಾಗಿರುವ ಕಾರಣ ಕಪ್‌ ಭಾರತದದ್ದಾಗಲಿ ಎಂಬುದೇ ಕೋಟ್ಯಾಂತರ ಅಭಿಮಾನಿಗಳ ಆಶಯ.. ಆಲ್‌ ದಿ ಬೆಸ್ಟ್‌ ಟೀಂ ಇಂಡಿಯಾ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.